ನಾರಾಯಣಸ್ವಾಮಿಗೆ ಸಹಕಾರಿ ರಂಗದ ಅರಿವಿಲ್ಲ

| Published : Sep 01 2025, 01:03 AM IST

ನಾರಾಯಣಸ್ವಾಮಿಗೆ ಸಹಕಾರಿ ರಂಗದ ಅರಿವಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಸೆ.೨೫ ರಂದು ಸರ್ವ ಸದಸ್ಯರ ಸಭೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಸಂಪ್ರಾದಾಯದಂತೆ ಸಹಕಾರ ಸಂಘಗಳ ಕಾಯ್ದೆ ಅನ್ವಯ ವಾಗುವಂತೆ ತುರ್ತು ಸಭೆಯನ್ನು ಕರೆಯಲಾಗಿತ್ತು.ಆ ಸಭೆಯಲ್ಲಿ ಶಾಸಕ ನಾರಾಯಣಸ್ವಾಮಿ ಹೊರತು ಎಲ್ಲ ೧೬ ನಿರ್ದೇಶಕರು ಸಭೆಯ ತೀರ್ಮಾನದಂತೆ ನಡೆಸಲು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು

ಕನ್ನಡಪ್ರಭ ವಾರ್ತೆ ಮಾಲೂರು

ಸೆ.೨೫ ರಂದು ಕೋಚಿಮುಲ್‌ ನ ಸರ್ವಸದಸ್ಯರ ಸಭೆ ನಿಗದಿಯಾಗಿದ್ದು, ಅದಕ್ಕೆ ಪೂರಕವಾಗಿ ಕಾನೂನು ರೀತ್ಯ ತುರ್ತು ಸಭೆ ಕರೆಯಲಾಗಿತೇ ಹೊರತು ಒಕ್ಕೂಟಕ್ಕೆ ನಷ್ಟ ಮಾಡುವ ಯಾವುದೇ ನಿರ್ಣಯ ಕೈಗೊಳ್ಳಲು ಅಲ್ಲ ಎಂದು ಶಾಸಕ ಹಾಗೂ ಕೋಮುಲ್‌ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.

ಇಲ್ಲಿನ ಕೋಚಿಮುಲ್‌ ಶಿಬಿರ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಆರೋಪ ಮಾಡಿದ ಶಾಸಕ ಎಸ್.ಎನ್‌.ನಾರಾಯಣಸ್ವಾಮಿ ಅವರಿಗೆ ಸಹಕಾರಿ ಕ್ಷೇತ್ರ ಆಡಳಿತ ಬಗ್ಗೆ ಅರಿವಿಲ್ಲ ಎಂದರು.

ಸರ್ಕಾರ- ಒಕ್ಕೂಟ ಮಧ್ಯೆ ಕೊಂಡಿ

ಸರ್ಕಾರದ ಅನುದಾನ ಸೌಲಭ್ಯ ಇಲ್ಲದ ಹಾಲು ಒಕ್ಕೂಟವು ಹಾಲು ಉತ್ಪಾದಕರ ಆಸ್ತಿಯಾಗಿದ್ದು, ಅದನ್ನು ಉಳಿಸಬೇಕೆಂಬ ಉದ್ದೇಶದಿಂದ ಈ ಹಾಲು ಒಕ್ಕೂಟಕ್ಕೆ ದಶಕಗಳ ಹಿಂದೆ ಬಂದೆ. ಬಂದ ಮೇಲೆ ಶಾಸಕನಾಗಿದ್ದು, ನನ್ನ ಹಿಂದಿನ ಆಡಳಿತ ವೈಖರಿಯಿಂದ ಮತ್ತೇ ಒಕ್ಕೂಟದ ಅಧ್ಯಕ್ಷನಾಗಿದ್ದೇನೆ. ಒಬ್ಬ ಶಾಸಕನಾಗಿ ಸರ್ಕಾರ ಹಾಗೂ ಒಕ್ಕೂಟ ಮಧ್ಯೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಒಕ್ಕೂಟದ ನಿರ್ದೇಶಕರಾಗಿದ್ದು, ಸಂತೋಷ ತಂದಿತ್ತು. ಇಬ್ಬರು ಸೇರಿ ಒಕ್ಕೂಟ ಅಭಿವೃದ್ಧಿಗೊಳಿಸುವ ಜತೆಯಲ್ಲಿ ನಮ್ಮ ಕಾಂಗ್ರೆಸ್‌ಗೆ ಹೆಸರು ತರುವ ಕೆಲಸವಾಗಬೇಕಾಗಿತ್ತು. ಆದರೆ ತಪ್ಪು ಗ್ರಹಿಕೆಗಳಿಂದ ಪೂರ್ವಗ್ರಹಿತರಂತೆ ಅನಾವಶ್ಯಕವಾಗಿ ಒಕ್ಕೂಟದ ಆಡಳಿತವನ್ನು ಟೀಕಿಸುತ್ತಿದ್ದು, ನನಗೆ ವೈಯಕ್ತಿಕವಾಗಿ ಬೇಸರ ತರಿಸಿದೆ ಎಂದರು.ಕಾಯ್ದೆ ಪ್ರಕಾರ ಸಭೆ:

ಸೆ.೨೫ ರಂದು ಸರ್ವ ಸದಸ್ಯರ ಸಭೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಸಂಪ್ರಾದಾಯದಂತೆ ಸಹಕಾರ ಸಂಘಗಳ ಕಾಯ್ದೆ ಅನ್ವಯ ವಾಗುವಂತೆ ತುರ್ತು ಸಭೆಯನ್ನು ಕರೆಯಲಾಗಿತ್ತು.ಆ ಸಭೆಯಲ್ಲಿ ಶಾಸಕ ನಾರಾಯಣಸ್ವಾಮಿ ಹೊರತು ಎಲ್ಲ ೧೬ ನಿರ್ದೇಶಕರು ಸಭೆಯ ತೀರ್ಮಾನದಂತೆ ನಡೆಸಲು ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಕಳೆದ ಐದು ವರ್ಷದಲ್ಲಿ ಒಕ್ಕೂಟ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿತ್ತು ಎಂದರು.

ಅಲ್ಲಿ ಡಿಸೇಂಟ್‌ ಬರೆಸಿ ಹೋದ ಬಂಗಾರಪೇಟೆ ಶಾಸಕರು ಹೊರಗಡೆ ಪತ್ರಿಕಾಗೋಷ್ಠಿ ನಡೆಸಿ ೬೦ ಕೋಟಿ ಗುಳುಂ ಮಾಡಲು ತುರ್ತು ಸಭೆ ಆಯೋಜಿಸಲಾಗಿದೆ, ಅದಕ್ಕೆ ನನ್ನ ವಿರೋಧ ಇದೆ ಎಂದು ತಿಳಿಸಿದ್ದಾರೆ. ಅವರಿಗೆ ಸಹಕಾರ ಸಂಘಗಳ ಸಂಪ್ರದಾಯ ಗೊತ್ತಿಲ್ಲ ಎಂದೆನ್ನೆಸುತ್ತಿದೆ. ಏಕೆಂದರೆ ತುರ್ತು ಸಭೆಯಲ್ಲಿ ಯಾವುದೇ ಹೊಸ ವಿಷಯ ತೆಗೆದುಕೊಳ್ಳುವುದಿಲ್ಲ. ಸಂಪ್ರಾದಾಯದಂತೆ ಹಿಂದಿನ ವರ್ಷಗಳ ಕಾರ್ಯಕ್ರಮ, ಅನುಷ್ಠಾನ ಗಳ ಚರ್ಚೆ ಮಾಡಲಾಗುತ್ತದೆ.ಅದು ಮುಂದೆ ಬರುವ ಸರ್ವ ಸದಸ್ಯರ ಸಭೆಗೆ ಪೂರಕವಾಗಿ ಎಂದರು.

ಬಿಪಿಎಲ್‌ ಕಾರ್ಡ್‌ ತೋರಿಸಲಿ

ನಂಜೇಗೌಡ ಶ್ರೀಮಂತ ಅತನ ಬಳಿ ಎಪಿಎಲ್‌ ಕಾರ್ಡ್‌ ಇದೆ. ನಾನು ದಲಿತ ಬಿಪಿಎಲ್‌ ಕಾರ್ಡ್‌ ಹೋಲ್ಡರ್‌ ನನ್ನ ಮಾತು ನಡೆಯುವುದಿಲ್ಲ ಎಂದು ಶಾಸಕರು ಟೀಕಿಸಿದ್ದಾರೆ. ಹೌದು ನಾನು ಎಪಿಎಲ್‌ ಕಾರ್ಡ್‌ದಾರ. ಆದರೆ ಶಾಸಕ ನಾರಾಯಣಸ್ವಾಮಿ ಬಳಿ ಬಿಪಿಎಲ್‌ ಕಾರ್ಡ್‌ ಇದ್ದರೆ ತೋರಿಸಲಿ, ನಾನು ರಾಜಕೀಯ ಬಿಟ್ಟು ಬಿಡುತ್ತೇನೆ. ನಿಮಗೆ ಆಗದವರ ಮೇಲೆ ಗೂಬೆ ಕೂಡಿಸುವ ನಿಮ್ಮ ಛಾಳಿ ಬಿಡಿ ಎಂದರು.

ಕ್ಷೇತ್ರಕ್ಕೆ 3 ಸಾವಿರ ಕೋಟಿ ಅನುದಾನ

ನಂಜೇಗೌಡರು ಜಿಲ್ಲಾ ಮಂತ್ರಿ ಭೈರತಿ ಸುರೇಶ್‌ ಅವರ ಹೊಗಳು ಭಟ್ಟ ಎನ್ನುತ್ತೀರಿ,.ಅಲ್ಲ ನಾರಾಯಣಸ್ವಾಮಿ ಅವರೇ ಮೊದಲ ಬಾರಿ ನೀವು ಶಾಸಕರಾಗಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕ್ಷೇತ್ರಕ್ಕೆ ಬಹಳಷ್ಟು ಕೊಡುಗೆ ಪಡೆದಿರಿ. ಆದರೆ ನಾನು ಮೊದಲ ಬಾರಿ ಶಾಸಕನಾಗಿದ್ದಾಗ ಬಿಜೆಪಿ ಸರ್ಕಾರ ಇತ್ತು. ಯಾವುದೇ ಅಭಿವೃದ್ಧಿ ಕೈಗೊಳ್ಳಲು ಆಗಿಲ್ಲ. ಈಗ ನಮ್ಮ ಸರ್ಕಾರ, ನಮ್ಮ ಜಿಲ್ಲಾ ಮಂತ್ರಿ ಬಂದ ಮೇಲೆ ಸುಮಾರು ೩ ಸಾವಿರ ಕೋಟಿಕ್ಕೂ ಹೆಚ್ಚು ಅನುದಾನ ತರಲು ಸಾಧ್ಯವಾಯಿತು. ಇದು ಜಿಲ್ಲಾ ಮಂತ್ರಿ ಭೈರತಿ ಸುರೇಶ್‌ ಅವರ ಸಹಕಾರದಿಂದಲ್ಲೇ ಸಾಧ್ಯವಾಯಿತು ಎಂದರು.