ವಿಜೃಂಭಣೆಯಿಂದ ಜರುಗಿದ ನಾರಾಯಣಸ್ವಾಮಿ ದಿವ್ಯ ರಥೋತ್ಸವ

| Published : Feb 25 2024, 01:53 AM IST

ಸಾರಾಂಶ

ಕೊಳ್ಳೇಗಾಲ ಪಟ್ಟಣದಲ್ಲಿ ನಾರಾಯಣಸ್ವಾಮಿ ದಿವ್ಯ ರಥೋತ್ಸವವು ವಿಧಿ, ವಿಧಾನಗಳೊಂದಿಗೆ ಶನಿವಾರ ವಿಜೃಂಭಣೆಯಿಂದ ಜರುಗಿತು. ಶನಿವಾರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು.

ಹಲವು ಗಣ್ಯರು ಭೇಟಿ ನೀಡಿ ನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಣೆಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಕೊಳ್ಳೇಗಾಲ ಪಟ್ಟಣದಲ್ಲಿ ನಾರಾಯಣಸ್ವಾಮಿ ದಿವ್ಯ ರಥೋತ್ಸವವು ವಿಧಿ, ವಿಧಾನಗಳೊಂದಿಗೆ ಶನಿವಾರ ವಿಜೃಂಭಣೆಯಿಂದ ಜರುಗಿತು. ಶನಿವಾರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಮೀನ ಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಿತು.

ಇದಕ್ಕೂ ಮುನ್ನ ಉತ್ಸ ಮೂರ್ತಿಗೆ ವಿಧಿ, ವಿಧಾನಗಳೊಂದಿಗೆ ಪೂಜೆ ಸಲ್ಲಿಸಲಾಯಿತು. ಬಳಿಕ ಉತ್ಸವ ಮೂರ್ತಿಯನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಮಂಗಳ ವಾದ್ಯ ಸಮೇತ ಚಾಲನೆ ನೀಡಲಾಯಿತು. ತೇರು ಸಂಚರಿಸುತ್ತಿದ್ದ ವೇಳೆ ಶಂಖ, ಜಾಗಟೆಯೊಂದಿಗೆ ಭಕ್ತಾಧಿಗಳ ಹರ್ಷೋಧ್ಘಾರ ಮೊಳಗಿತು. ತೇರನ್ನು ಅನೇಕ ಭಕ್ತರು ಎಳೆದು ಗಮನ ಸೆಳೆದರೆ,ಇನ್ನು ಕೆಲವರು ಹರಕೆ ಹೊತ್ತ ಭಕ್ತರು ಹಣ್ಣು, ಜವನ, ಧಾನ್ಯ ಎಸೆದು ಗಮನ ಸೆಳೆದರು. ರಥೋತ್ಸವದ ವೇಳೆಯಲ್ಲಿ ಶಾಸಕ ಎ ಆರ್ ಕೃಷ್ಣಮೂರ್ತಿ, ಮಾಜಿ ಸಚಿವ ಎನ್ ಮಹೇಶ್, ಮಾಜಿ ಶಾಸಕರಾದ ಜಿ ಎನ್ ನಂಜುಂಡಸ್ವಾಮಿ, ಎಸ್ ಬಾಲರಾಜು, ಕೆಪಿಸಿಸಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಜಿ ಸಿ ಕಿರಣ್, ದೇವಾಂಗ ಪೇಟೆಯ ಯುವ ಮುಖಂಡ ಗಿರೀಶ್ ಬಾಬು, ಮ.ಬೆಟ್ಟ ಮಾಜಿ ಧರ್ಮದರ್ಶಿ ಕೊಪ್ಪಾಳಿನಾಯಕ, ನಗರಸಭೆ ಮಾಜಿ ಅಧ್ಯಕ್ಷೆ ರೇಖಾ ರಮೇಶ್, ನಗರಸಭೆ ಸದಸ್ಯ ಎ ಪಿ ಶಂಕರ್, ಮಾನಸ ಪ್ರಭುಸ್ವಾಮಿ, ಮಾಜಿ ಸದಸ್ಯ ನರಸಿಂಹನ್, ಬಸವರಾಜು, ತಹಸೀಲ್ದಾರ್ ಮಂಜುಳ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ತೋಟೇಶ್, ಪಿ ಎಸೈ ಮಹೇಶ್ ಕುಮಾರ್, ಮುಖಂಡರಾದ ಸ್ವಾಮಿ ನಂಜಪ್ಪ, ಮಹದೇವಸ್ವಾಮಿ ಇನ್ನಿತರರು ಭಾಗವಹಿಸಿದ್ದರು. ದಾನಿಗಳಾದ ಸುನೀತಾ, ತಿಮ್ಮೆಗೌಡರು, ಅಶೋಕ್ ಇನ್ನಿತರರ ಭಕ್ತಾಧಿಗಳ ಭಕ್ತಾಧಿಗಳ ಪ್ರಸಾದ ವಿನಿಯೋಗ ಮತ್ತು ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡು ನಾರಾಯಣಸ್ವಾಮಿಯ ಕೃಪೆಗೆ ಪಾತ್ರರಾದರು. ಬೀಮನಗರ ಸೇರಿದಂತೆ ಕೊಳ್ಳೇಗಾಲ ಬಡಾವಣೆಯ ಹಲವೆಡೆ ತೇರಿನ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಭಕ್ತಾಧಿಗಳಿಗೆ ತಮ್ಮ ತಮ್ಮ ಮನೆಗಳಿಗೆ ಕರೆದು ಆತಿಥ್ಯ ನೀಡುವ ವಾಡಿಕೆ (ಸಂಪ್ರದಾಯ) ಮುಂದುವರೆಯಿತು. ಸಾಂಘವಾಗಿ ಜರುಗಿದ ದೂಳಿ ಉತ್ಸವ:

ಶನಿವಾರ ಸಂಜೆ ನಾರಾಯಣಸ್ವಾಮಿ ದೇಗುಲದಲ್ಲಿ ದೂಳಿ ಉತ್ಸವ ಸಾಂಗವಾಗಿ ನೆರವೇರಿತು. ಈಗಾಗಲೇ 17ರಿಂದ ವಿವಿಧ ಉತ್ಸವಗಳು ಜರುಗಿದ್ದು, 28ರಂದು ವೈಮಾಳಿಗೆ ಉತ್ಸವದ ಬಳಿಕ ನಾರಾಯಣಸ್ವಾಮಿ ದಿವ್ಯ ರಥೋತ್ಸವದ ವಿಶೇಷ ಕಾರ್ಯಕ್ರಮಗಳಿಗೆ ತೆರೆ ಬೀಳಲಿದೆ. ದಿವ್ಯ ರಥೋತ್ಸವದ ವಿಶೇಷ ಪೂಜೆಯೂ ಶೇಷಾದ್ರಿ ಭಟ್ಟರು ಸೇರಿದಂತೆ ಇನ್ನಿತರರ ಸಾಮೀಪ್ಯದಲ್ಲಿ ಜರುಗಿತು. ಈಗಾಗಲೇ ಹಂಸವಾನೋತ್ಸವ, ಶೇಷವಾಹನ ಉತ್ಸವ, ಸೌಮ್ಯ ಲಕ್ಷ್ಮಿ ಕಲ್ಯಾಣ ಉತ್ಸವಗಳು ಜರುಗಿದ್ದು ಫೆ.25ರಂದು ಡೋಲೋತ್ಸವ, ಶಯನೋತ್ಸವ, ಮಂಟಪೋತ್ಸವ ವಿಧಿ, ವಿಧಾನಗಳೊಂದಿಗೆ ಜರುಗಲಿದೆ.