26ಕೆಆರ್ ಎಂಎನ್ 8.ಜೆಪಿಜಿಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಳಪಡುವ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಅಮಾನತ್ತು ಪಡಿಸಿಕೊಂಡಿದ್ದ ಮಾದಕ ವಸ್ತುಗಳು. | Kannada Prabha
Image Credit: KP
11 ಪ್ರಕರಣಗಳಲ್ಲಿ ಸುಮಾರು 10,05,000 ರು. ಮೌಲ್ಯದ ಒಟ್ಟು 12 ಕೆ.ಜಿ 730 ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ರಾಮನಗರ:
ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಳಪಡುವ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ವಶಪಡಿಸಿಕೊಂಡಿದ್ದ 10 ಲಕ್ಷ 5 ಸಾವಿರ ರುಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಗುರುವಾರ ನಾಶಪಡಿಸಲಾಯಿತು.
ಎನ್.ಡಿ.ಪಿ.ಎಸ್ ಕಾಯ್ದೆಯಡಿ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿ, ತನಿಖೆ ಪೂರ್ಣಗೊಂಡಿರುವ 11 ಪ್ರಕರಣಗಳಲ್ಲಿ ಸುಮಾರು 10,05,000 ರು. ಮೌಲ್ಯದ ಒಟ್ಟು 12 ಕೆ.ಜಿ 730 ಗ್ರಾಂ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ನ್ಯಾಯಾಲಯದ ಅನುಮತಿ ಪಡೆದು ನಿಯಮಾನುಸಾರ ಹಾರೋಹಳ್ಳಿ ಕೈಗಾರಿಕಾ ಘಟಕದಲ್ಲಿ, ಮಾದಕ ವಸ್ತು ವಿಲೇವಾರಿ ಸಮಿತಿಯ ಸಮ್ಮುಖದಲ್ಲಿ ಹಾಗೂ ಪಂಚರ ಸಮಕ್ಷಮ ನಿಯಮಾನುಸಾರ ನಾಶಪಡಿಸಲಾಯಿತು.
26ಕೆಆರ್ ಎಂಎನ್ 8.ಜೆಪಿಜಿ
ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಒಳಪಡುವ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಅಮಾನತ್ತು ಪಡಿಸಿಕೊಂಡಿದ್ದ ಮಾದಕ ವಸ್ತುಗಳು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.