ನರೇಗಾ ಕೂಲಿ ಹಣ ಪಾವತಿಗೆ ಆಗ್ರಹಿಸಿ ಗ್ರಾಪಂ ಮುತ್ತಿಗೆ

| Published : May 15 2024, 01:33 AM IST

ಸಾರಾಂಶ

ಕಡಿಮೆ ಕೂಲಿ ಹಣ ಪಾವತಿ ಮಾಡಿರುವುದು ಮತ್ತು ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಉದ್ಯೋಗ ಖಾತರಿ ನೂರಾರು ಕೂಲಿ ಕಾರ್ಮಿಕರು ಸಮೀಪದ ಅಮೀನಗಡ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಕನ್ನಡಪ್ರಭ ವಾರ್ತೆ ಕವಿತಾಳ

ಕಡಿಮೆ ಕೂಲಿ ಹಣ ಪಾವತಿ ಮಾಡಿರುವುದು ಮತ್ತು ಕೂಲಿ ಕೆಲಸ ನೀಡುತ್ತಿಲ್ಲ ಎಂದು ಆರೋಪಿಸಿ ಉದ್ಯೋಗ ಖಾತರಿ ನೂರಾರು ಕೂಲಿ ಕಾರ್ಮಿಕರು ಸಮೀಪದ ಅಮೀನಗಡ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು.

ಊದ್ಯೋಗ ಖಾತ್ರಿ ಕೆಲಸ ಮಾಡಿದ ಕೂಲಿ ಕಾರ್ಮಿಕರ ಖಾತೆಗೆ ಪ್ರತಿದಿನ ₹350 ಬದಲಿಗೆ ₹200 ಪಾವತಿಸಿದ್ದು ಬಾಕಿ ಹಣ ಪಾವತಿಸಬೇಕು ಮತ್ತು ವರ್ಷದಲ್ಲಿ ನೂರು ದಿನ ಕೆಲಸ ನೀಡಬೇಕು ಎಂದು ಕಾರ್ಮಿಕರು ಒತ್ತಾಯಿಸಿದರು.

ಖಾತರಿ ಕೆಲಸ ನೀಡುವಲ್ಲಿ ವಿಳಂಬ ಮಾಡುತ್ತಿರುವ ನೂರು ದಿನದ ಕೆಲಸದ ಬದಲಿಗೆ ಕೇವಲ 15-20 ದಿನ ಕೆಲಸ ನೀಡುತ್ತಾರೆ. ಊರಿಂದ ದೂರದಲ್ಲಿ ಕೆಲಸ ನೀಡುತ್ತಿದ್ದಾರೆ. ಸಮೀಪದಲ್ಲಿ ಕೆಲಸ ನೀಡುತ್ತಿಲ್ಲ, ಹೀಗಾಗಿ ಓಡಾಡಲು ತೊಂದರೆಯಾಗುತ್ತಿದ್ದು, ಈ ಮದ್ಯೆ ಜಿಪಿಎಸ್ ಮಾಡಲು ಮಧ್ಯಾಹ್ನ 2 ಗಂಟೆ ನಂತರ ಬರುವ ಇಂಜಿನಿಯರ್ ಅನಗತ್ಯವಾಗಿ ಕೂಲಿಕಾರರನ್ನು ಅಲೆಯುವಂತೆ ಮಾಡುತ್ತಾರೆ. ಒಂದೇ ಮನೆಯಲ್ಲಿ ತಂದೆ ಮತ್ತು ಮಗನ ಜಿಪಿಎಸ್ ಮಾಡಲಾಗಿದ್ದು ಮಗನ ಖಾತೆಗೆ ಹಣ ಜಮಾ ಆಗಿದೆ. ಆದರೆ ತಂದೆ ಖಾತೆಗೆ ಜಮಾ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವರ್ಷ ಇದೇ ರೀತಿ ಸಮಸ್ಯೆ ಉಂಟಾದಾಗ ಖಾತೆಯನ್ನು ಜೀರೋ ಮಾಡಿ, ಉಳಿದ ಹಣ ಪಾವತಿಗೆ ಅಂದಿನ ಅಭಿವೃದ್ಧಿ ಅಧಿಕಾರಿ ಕ್ರಮ ಕೈಗೊಂಡಿದ್ದರು. ಅದೇ ರೀತಿ ಉಳಿದ ಬಾಕಿ ಮೊತ್ತ ಖಾತೆಗೆ ಜಮಾ ಮಾಡುವಂತೆ ಮಹಿಳೆಯರು ಒತ್ತಾಯಿಸಿದರು. ಕೂಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ನೀಡುತ್ತಿಲ್ಲ ಬೆಂಗಳೂರಿಗೆ ಗುಳೇ ಹೋದ ಜನರ ಖಾತೆಗೆ ಹಣ ಜಮಾ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ತಾಪಂ, ಸಹಾಯಕ ನಿರ್ದೇಶಕ ಶಿವಾನಂದರಡ್ಡಿ ಮತ್ತು ಪಿಡಿಒ ಕಷ್ಣ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಮಿಕರು, ಈ ರೀತಿಯ ಸಮಸ್ಯೆಗಳ ಬಗ್ಗೆ ಜನಸ್ಪಂದನ ಸಭೆಯಲ್ಲಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಕೆಲಸದ ಅಳತೆ ಪ್ರಕಾರ ಕೂಲಿ ಪಾವತಿಸಿದ್ದು ಹಿಂದಿನ ವರ್ಷದಂತೆ ಖಾತೆ ಜೀರೋ ಮಾಡಲು ಈಗ ಬರುವುದಿಲ್ಲ ಹೀಗಾಗಿ ಯಾವುದೇ ಸಮಸ್ಯೆ ಇದ್ದರೆ ಲಿಖಿತ ದೂರು ನೀಡಿದರೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು.

ಮಲ್ಲಮ್ಮ, ಚನ್ನಮ್ಮ, ಯಲ್ಲಮ್ಮ, ಗಂಗಮ್ಮ, ಬಸ್ಸಮ್ಮ, ಗಂಗಮ್ಮ, ಪಾರ್ವತಮ್ಮ, ಪದ್ಮಾವತಿ, ಶಂಕ್ರಮ್ಮ, ಗಂಗಮ್ಮ, ಹುಸೇನಮ್ಮ್, ಅಮೀನಮ್ಮ, ಹುಚ್ಚರೆಡ್ಡಿ, ವಿರೇಶ, ಹುಚ್ಚರೆಡ್ಡಿ, ಆದಪ್ಪ ನಾಯಕ, ಖಾಜಾ ಸಾಬ್, ಚಂದ್ರಶೇಖರ ನಾಯಕ, ರಸೀದಿ, ಇಮಾಮ್ ಸಾಬ್, ಬೂದ್ದವಲಿ, ಹನುಮಾರೆಡ್ಡಪ್ಪ ಇದ್ದರು.