ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಕಾರಹುಣ್ಣಿಮೆಯಂದು ಎತ್ತುಗಳ ಕರಿ ಹರಿಯುವ ವೇಳೆ ನಡೆದ ಗಲಾಟೆಯಲ್ಲಿ ರೈತನ ಕೈ ಕತ್ತರಿಸಿರುವ ಘಟನೆಯನ್ನು ಬಿಜೆಪಿ ಮುಖಂಡ ವೆಂಕಟೇಶ ಕಾಟವೆ ತೀವ್ರವಾಗಿ ಖಂಡಿಸಿದ್ದಾರೆ.
ಹುಬ್ಬಳ್ಳಿ:
ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನರೇಗಲ್ ಗ್ರಾಮದಲ್ಲಿ ಕಾರಹುಣ್ಣಿಮೆಯಂದು ಎತ್ತುಗಳ ಕರಿ ಹರಿಯುವ ವೇಳೆ ನಡೆದ ಗಲಾಟೆಯಲ್ಲಿ ರೈತನ ಕೈ ಕತ್ತರಿಸಿರುವ ಘಟನೆಯನ್ನು ಬಿಜೆಪಿ ಮುಖಂಡ ವೆಂಕಟೇಶ ಕಾಟವೆ ತೀವ್ರವಾಗಿ ಖಂಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಇಲ್ಲಿನ ಕೆಎಂಸಿಆರ್‌ಐಗೆ ಭೇಟಿ ನೀಡಿ ಗಲಾಟೆಯಲ್ಲಿ ಗಾಯಗೊಂಡಿರುವ ಜಯಪ್ಪ ಕುರುಬರ, ಲೋಹಿತ್ ಕುರುಬರ ಹಾಗೂ ಶಿವರಾಜ್ ಕುರುಬರ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ ಮಾತನಾಡಿದರು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಯಾವುದೇ ವ್ಯಕ್ತಿ ಅಥವಾ ಗುಂಪು ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶ ನೀಡಬಾರದು. ನರೇಗಲ್‌ನಲ್ಲಿ ನಡೆದಿರುವ ಈ ಹಲ್ಲೆ ಪ್ರಕರಣದ ಎಲ್ಲ ಆರೋಪಿಗಳ ವಿರುದ್ಧ ಸರ್ಕಾರ ಯಾವುದೇ ಒತ್ತಡ ಅಥವಾ ಪಕ್ಷಪಾತಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿ, ಎಲ್ಲ ಆರೋಪಿಗಳನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕಾರ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದರು. ಈ ವೇಳೆ ಹಾವೇರಿ ಬಿಜೆಪಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಕುರುಬರ, ಜಿ.ಎಸ್. ಕುರುಬರ, ಶ್ರೀರಾಮಸೇನಾ ಕಾರ್ಯಕರ್ತ ವೆಂಕಟೇಶ್ ದಾಸರ, ಯಶೋದಾ ತಾಂಬೆ, ವೀರಯ್ಯ ಸಾಲಿಮಠ, ಶಾಮ ಸುಂದರ, ಅಣ್ಣಪ್ಪ ದಿವಟಗಿ, ಸಚಿನ ಕಾಟವೆ, ಆನಂದ ಬಾಕಳೆ, ಸುನಿಲ ಕಾಟವೆ, ಸಚಿನ ಪೂಜಾರಿ, ಸಂತೋಷ್ ಸೇರಿದಂತೆ ಉಪಸ್ಥಿತರಿದ್ದರು.