ನರೇಂದ್ರಮೋದಿ ವಿಶ್ವ ಮೆಚ್ಚುವ ನಾಯಕ

| Published : Apr 23 2024, 12:48 AM IST

ಸಾರಾಂಶ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಸರ್ಕಾರ ಅಸ್ಥಿತ್ವದಲ್ಲಿಯಿದೆಯೇ ಇಂಬ ಬೃಹತ್ ಪ್ರಶ್ನೆ ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹೇಳಿದರು.

ಬೀರೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇಲ್ಲಿ ಸರ್ಕಾರ ಅಸ್ಥಿತ್ವದಲ್ಲಿಯಿದೆಯೇ ಇಂಬ ಬೃಹತ್ ಪ್ರಶ್ನೆ ಕಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಹೇಳಿದರು.ಹಾಸನ ಲೋಕಸಭಾ ಚುನಾವಣಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಲು ತೆರಳುವ ಮುನ್ನ ಬೀರೂರಿನ ಮಾಜಿ ಮಂತ್ರಿ ದಿ.ಮಲ್ಲಿಕಾರ್ಜುನ ಪ್ರಸನ್ನ ಅವರ ಪುತ್ರ ಜೆಡಿಎಸ್ ಮುಖಂಡ ಕೆ.ಎಂ. ವಿನಾಯಕ್ ರವರ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.ಹುಬ್ಬಳ್ಳಿಯಲ್ಲಿ ಲಿಂಗಾಯತ ಸಮಾಜದ ವಿದ್ಯಾರ್ಥಿನಿ ನೇಹಾ ಅವರನ್ನು ಇರಿದು ಕೊಲ್ಲಲಾಗಿದೆ. ಇದೊಂದು ಹೇಯ ಪ್ರಕರಣ. ಮನುಕುಲ ಕಲಕುವಂತಹ ಘಟನೆ. ಸರ್ಕಾರ ಈ ಬಗ್ಗೆ ಗಂಭೀರವಾದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.ಪ್ರಧಾನಿ ನರೇಂದ್ರಮೋದಿ ವಿಶ್ವ ಮೆಚ್ಚುವ ನಾಯಕ , ಸೌದಿ ಅರೇಬಿಯ ಸೇರಿದಂತೆ ಹಲವು ದೇಶಗಳ ನಾಯಕರು ತಮ್ಮ ದೇಶದಲ್ಲಿ ಶಾಂತಿ ನೆಲೆಸುವ ಸಲುವಾಗಿ ಪ್ರಧಾನಿಯವರ ಸಲಹೆ ಕೋರುತ್ತಿದ್ದಾರೆ. ಇದು ಮೋದಿಯವರ ತಾಕತ್ತು ಎಂದು ಬಣ್ಣಿಸಿದ ಗೌಡರು, ಮೋದಿಯವರ ಅಲೆಯಲ್ಲಿ ಈ ಬಾರಿ ರಾಜ್ಯದ ೨೮ ಲೋಕಸಭಾ ಕ್ಷೇತ್ರಗಳು ಎನ್.ಡಿ.ಎ ಪಾಲಾಗಲಿವೆ ಎಂದು ನುಡಿದರು.ದೇಶದ ಭದ್ರತೆ ಮತ್ತು ನೀರಾವರಿ ಯೋಜನೆಗಳ ಅಭಿವೃದ್ಧಿ ಸಂಕಲ್ಪ ಹೊಂದಿ ಜೆಡಿಎಸ್ ಪಕ್ಷ ಎನ್.ಡಿ.ಎ ಕೂಟವನ್ನು ಸೇರಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಇದರಲ್ಲಿ ಯಾವುದೇತ್ಪ್ರೇಕ್ಷೆ ಇಲ್ಲ, ಸ್ವಾರ್ಥವೂ ಇಲ್ಲ ಎಂದು ಸ್ಪಷ್ಟಪಡಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ವೈ.ಎಸ್.ವಿ.ದತ್ತ, ಮುಖಂಡರಾದ ಹೇಮಂತ್ ಕುಮಾರ್, ಯುವ ಮುಖಂಡ ವಿವೇಕ್, ಬಿ.ಆರ್.ಮೋಹನ್ ಕುಮಾರ್, ಬಿಸಲೆರೆ ಕೆಂಪರಾಜು, ಡಿ.ಪ್ರಶಾಂತ್, ಬಾವಿಮನೆ ಮಧು, ಹೊಗರೇಹಳ್ಳಿ ಕೃಷ್ಣ ಸೇರಿದಂತೆ ಮತ್ತಿತರರು ಇದ್ದರು.೨೨ ಬೀರೂರು ೩ಹಾಸನ ಲೋಕಸಭಾ ಚುನಾವಣಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಲು ತೆರಳುವ ಮುನ್ನ ಬೀರೂರಿನ ಮಾಜಿ ಮಂತ್ರಿ ದಿ.ಮಲ್ಲಿಕಾರ್ಜುನ ಪ್ರಸನ್ನ ಅವರ ಪುತ್ರ ಜೆಡಿಎಸ್ ಮುಖಂಡ ಕೆ.ಎಂ. ವಿನಾಯಕ್ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿಯನ್ನು ಗೌರವಿಸಲಾಯಿತು.