ಸಾರಾಂಶ
ಕನ್ನಡಪ್ರಭ ವಾರ್ತೆ ಬ್ಯಾಡಗಿ
ದೇಶ ಸುಭದ್ರವಾಗಿರಲು ಅನಿವಾರ್ಯವಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನದಲ್ಲಿರುವಂತೆ ನೋಡಿಕೊಳ್ಳಬೇಕಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ವಿಧಾನಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರಿಗೆ ದೇಶ ಭಕ್ತರ ನಾಡಿನಿಂದಲೇ ತಕ್ಕ ಉತ್ತರ ನೀಡಲು ಮತ ಕ್ಷೇತ್ರದ ಜನತೆ ಸನ್ನದ್ಧರಾಗುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಕರೆ ನೀಡಿದರು.ಪಟ್ಟಣದ ಶ್ರೀ ವೀರಭದ್ರೇಶ್ವರ ಕಲ್ಯಾಣಮಂಟಪದಲ್ಲಿ ಬ್ಯಾಡಗಿ ತಾಲೂಕು ಘಟಕ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಭಾರತವನ್ನು ವಿಶ್ವದ ನಂ.1 ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ದೇಶದ ಹೆಮ್ಮೆಯ ಪ್ರಧಾನಿ ಅವರನ್ನು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸೋಲಿಸಲು ಶತ್ರು ರಾಷ್ಟ್ರಗಳು ಸೇರಿದಂತೆ ನೂರಾರು ಪಕ್ಷಗಳು ಒಗ್ಗೂಡಿಕೊಂಡಿದ್ದು, ಯಾವುದೇ ಕಾರಣಕ್ಕೂ ಅವರ ಆಸೆ ಈಡೇರದಂತೆ ನೋಡಿಕೊಳ್ಳಲು ಕರೆ ನೀಡಿದರು.ಬಿಜೆಪಿ ಕುಟುಂಬಕ್ಕೆ ಸೀಮಿತವಲ್ಲ
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಬುಡಕಟ್ಟು ಜನಾಂಗದ ಶಿಕ್ಷಕಿಯೊಬ್ಬರನ್ನು ದೇಶದ ರಾಷ್ಟ್ರಪತಿಯನ್ನಾಗಿ ಮಾಡಿದ ಕೀರ್ತಿ ಭಾರತೀಯ ಜನತಾ ಪಕ್ಷಕ್ಕೆ ದೊರೆಯುತ್ತದೆ. ದೇಶ ಮೊದಲು, ಬಳಿಕ ಪಕ್ಷ ಎಂಬ ಸಿದ್ಧಾಂತದಲ್ಲಿ ಕಳೆದ 10 ವರ್ಷದಿಂದ ಸುಭದ್ರ ಆಡಳಿತ ನಡೆಸುವ ಮೂಲಕ ಭಾರತವನ್ನು ಜಗತ್ತಿನೆಲ್ಲೆಡೆ ಪ್ರಕಾಶಿಸುವಂತೆ ಮಾಡಿದ ನರೇಂದ್ರ ಮೋದಿ ಈ ಬಾರಿಯೂ ದೇಶದ ಚುಕ್ಕಾಣಿ ಹಿಡಿಯುವಂತೆ ನೋಡಿ ಕೊಳ್ಳಬೇಕಾಗಿದೆ ಎಂದರು.ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ‍್ಯದರ್ಶಿ ಸಂತೋಷ್ ಆಲದಕಟ್ಟಿ, ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಕಾಂಗ್ರೆಸ್ ಪಕ್ಷವೇ ಬೇರೆ, ಈಗಿರುವ ಕಾಂಗ್ರೆಸ್ ಬೇರೆ. ವಿಚಾರಗಳು ಜಗತ್ತನ್ನೇ ಅಳುತ್ತವೆ ಎಂಬುದಕ್ಕೆ ಬಿಜೆಪಿ ಪಕ್ಷ ಉದಾಹರಣೆಯಾಗಿದೆ, ದೇಶದ ಅಭಿವೃದ್ಧಿ ದೃಷ್ಟಿಕೋನವನ್ನಿಟ್ಟುಕೊಂಡು ಅಧಿಕಾರಕ್ಕೆ ಬರಲಿದೆ ಎಂದರು.
ಕಾರ್ಯಕರ್ತರನ್ನು ಗುರುತಿಸಿದ ಪಕ್ಷನೂತನ ತಾಲೂಕಾಧ್ಯಕ್ಷ ಶಿವಯೋಗಿ ಶಿರೂರ ಮಾತನಾಡಿ, ಸಾಮಾನ್ಯ ಕಾರ‍್ಯರ್ತರನ್ನು ಗುರ್ತಿಸಿ ಉನ್ನತ ಹುದ್ದೆ ನೀಡುತ್ತಿರುವ ಏಕೈಕ ಪಕ್ಷ ಬಿಜೆಪಿಯಾಗಿದೆ. ಕುಟುಂಬ ರಾಜಕಾರಣಕ್ಕೆ ತಿಲಾಂಜಲಿ ಹಾಕಿ ಕಾರ‍್ಯಕರ್ತರೇ ನಾಯಕರು ಎಂಬ ಧ್ಯೇಯದೊಂದಿಗೆ ಪಕ್ಷ ಮುನ್ನಡೆಯುತ್ತಿದೆ. ಮುಂಬರುವ ಚುನಾವಣೆಯಲ್ಲಿ ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಭರವಸೆ ನಿಡಿದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಛತ್ರದ, ಜಿಪಂ ಮಾಜಿ ಅಧ್ಯಕ್ಷ ರಾಜೇಂದ್ರ ಹಾವೇರಣ್ಣನವರ, ಮಾಜಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ, ಮಾಜಿ ತಾಲೂಕಾಧ್ಯಕ್ಷ ಹಾಲೇಶ್ ಜಾಧವ, ವೀರೇಂದ್ರ ಶೆಟ್ಟರ್, ಮುರಿಗೆಪ್ಪ ಶೆಟ್ಟರ, ವಿದ್ಯಾಶೆಟ್ಟಿ. ನಾಗರಾಜ್ ಹಾವನೂರು, ಪುರಸಭೆ ಸದಸ್ಯರಾದ ಕಲಾವತಿ ಬಡಿಗೇರ, ಸುಭಾಸ್ ಮಾಳಗಿ, ಸರೋಜಾ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ಕವಿತಾ ಸೊಪ್ಪಿನಮಠ ಜಿತೇಂದ್ರ ಸುಣಗಾರ, ಪರಶುರಾಮ್ ಉಜನಿಕೊಪ್ಪ, ಪ್ರದೀಪ್ ಜಾಧವ, ನಿಂಗಪ್ಪ ಬಟ್ಟಲಕಟ್ಟಿ, ಮಂಜುನಾಥ್ ಜಾಧವ ಸೇರಿದಂತೆ ವಿವಿಧ ಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು.