ಮೋದಿ ಪ್ರಧಾನಿಯಾಗಿಸಲು ನನ್ನನ್ನು ಗೆಲ್ಲಿಸಿ: ಕಾಗೇರಿ

| Published : Mar 28 2024, 12:52 AM IST

ಸಾರಾಂಶ

ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಕನಸಿನ ಹುಬ್ಬಳ್ಳಿ- ಅಂಕೋಲಾ ಯೋಜನೆಗೆ ವೇಗ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು.

ಯಲ್ಲಾಪುರ: ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಮಾನ್ಯ ನಾಯಕರಾಗಿದ್ದು, ಅವರು ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಗತ್ತಿನ ಅನ್ಯ ರಾಷ್ಟ್ರಗಳೇ ಅವರಂತಹ ನಾಯಕತ್ವವನ್ನು ಒಪ್ಪಿಕೊಳ್ಳುತ್ತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯ. ಅಂಥವರ ಕೈ ಬಲಪಡಿಸಲು ಸದೃಢ ಭಾರತಕ್ಕೆ ಮೋದಿಯವರ ನಾಯಕತ್ವಕ್ಕೆ ಮತ್ತೊಮ್ಮೆ ಪುರಸ್ಕರಿಸಲು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿದೆ ಎಂದರು. ನನೆಗುದಿಗೆ ಬಿದ್ದಿರುವ ಹುಬ್ಬಳ್ಳಿ- ಅಂಕೋಲಾ ರೈಲ್ವೇ ಯೋಜನೆಯ ಅನುಷ್ಠಾನ, ಮತ್ತು ಅಖಂಡ ಉತ್ತರಕನ್ನಡ ಜಿಲ್ಲೆ ಇಬ್ಭಾಗದ ವಿಚಾರಕ್ಕೆ ಉತ್ತರಿಸಿದ ಕಾಗೇರಿ ಅವರು, ಮಾಜಿ ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ ಕನಸಿನ ಹುಬ್ಬಳ್ಳಿ- ಅಂಕೋಲಾ ಯೋಜನೆಗೆ ವೇಗ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಮತ್ತು ಜಿಲ್ಲೆಯ ಇಬ್ಭಾಗದ ವಿಚಾರ ಈ ಚುನಾವಣೆಯಲ್ಲಿ ಅಪ್ರಸ್ತುತ ಎಂದರು.

ಕನ್ನಡದ ವೇದಿಕೆಯಲ್ಲಿ ಮರಾಠಿ ಭಾಷಣದ ಕುರಿತು ಆಕ್ಷೇಪ ವ್ಯಕ್ತಪಡಿಸಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿ ಕಿತ್ತೂರು- ಖಾನಾಪುರ ಭಾಗದಲ್ಲಿ ಮರಾಠಿ ಭಾಷಿಗರೇ ಹೆಚ್ಚಿದ್ದು, ಸಭೆಯಲ್ಲಿ ಅವರ ಪ್ರಮಾಣವೂ ಹೆಚ್ಚಿದುದರಿಂದ ಅವರು ಮರಾಠಿಯಲ್ಲಿ ಮಾತನಾಡಿದ್ದಾರೆಯೇ ಹೊರತು ಮತ್ತೇನೂ ಅಲ್ಲ ಎಂದರು.

ಈ ಸಂದರ್ಭದಲ್ಲಿ ಮಾಜಿ ಸಚಿವ, ಲೋಕಸಭಾ ಚುನಾವಣಾ ಉಸ್ತುವಾರಿ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಎಂಎಲ್‌ಸಿ ಶಾಂತಾರಾಂ ಸಿದ್ದಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ರಾಜ್ಯ ವಕ್ತಾರ ಹರಿಪ್ರಕಾಶ ಕೋಣೇಮನೆ, ಚುನಾವಣಾ ಪ್ರಭಾರಿ ಭಾರತಿ ಜಂಬಗಿ, ಪ್ರಮುಖರಾದ ಗೋವಿಂದ ನಾಯ್ಕ, ಸದಾನಂದ, ಮಾಜಿ ಸಚಿವ ಸುನಿಲ್ ಹೆಗಡೆ, ಪ್ರಮೋದ ಹೆಗಡೆ ಹಾಗೂ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.