ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ನೇತೃತ್ವದಲ್ಲಿ, ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ನಾಲ್ಕನೇ ವರ್ಷದ ಹೊನಲು ಬೆಳಕಿನ ಲವಕುಶ ಜೋಡುಕರೆ ‘ನರಿಂಗಾನ ಕಂಬಳೋತ್ಸವ-

ಮಂಗಳೂರು: ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ನೇತೃತ್ವದಲ್ಲಿ, ನರಿಂಗಾನ ಕಂಬಳ ಸಮಿತಿ ಆಶ್ರಯದಲ್ಲಿ ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ನಾಲ್ಕನೇ ವರ್ಷದ ಹೊನಲು ಬೆಳಕಿನ ಲವಕುಶ ಜೋಡುಕರೆ ‘ನರಿಂಗಾನ ಕಂಬಳೋತ್ಸವ-2026’ ಜ.10ರಂದು ಬೆಳಗ್ಗೆ ಗಂಟೆ 9 ಗಂಟೆಗೆ ಆರಂಭಗೊಳ್ಳಲಿದೆ. ಡಿಸಿಎಂ ಡಿಕೆ ಶಿವಕುಮಾರ್‌ ಹಾಗೂ ಇತರ ಸಚಿವರು ಭಾಗವಹಿಸಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸ್ಪೀಕರ್‌ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಯು.ಟಿ. ಖಾದರ್‌, ಕಂಬಳೋತ್ಸವವನ್ನು ಒಡಿಯೂರುವ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಲಿದ್ದು, ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್‌ ಆಳ್ವ ದೀಪ ಬೆಳಗಿಸುವರು. ನರಿಂಗಾನ ಗ್ರಾಪಂ ಅಧ್ಯಕ್ಷ ನವಾಝ್‌ ನರಿಂಗಾನ ಅಧ್ಯಕ್ಷತೆ ವಹಿಸುವರು. ವಿವಿಧ ಧಾರ್ಮಿಕ, ಸಾಮಾಜಿಕ ಸೇರಿದಂತೆ ಗಣ್ಯರು, ವಿವಿಧ ಕ್ಷೇತ್ರಗಳ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಡಿಸಿಎಂ ಡಿಕೆಶಿ ಭಾಗಿ: ಅಂದು ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌, ಯುವಜನ ಕ್ರೀಡಾ ಸಚಿವ ಎಚ್‌.ಕೆ. ಪಾಟೀಲ್‌, ಕಾರ್ಮಿಕ ಸಚಿವ ಸಂತೋಷ್‌ ಲಾಡ್‌, ವಕ್ಫ್ ಮತ್ತು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌, ಸಂಸದ ಕ್ಯಾ. ಬ್ರಿಜೇಶ್‌ ಚೌಟ, ಕಾಸರಗೋಡು ಸಂಸದ ರಾಜು ಮೋಹನ್‌ ಉನ್ನಿತ್ತನ್‌, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌. ರಾಜೇಂದ್ರ ಕುಮಾರ್‌, ಬಂಜಾರ ಗ್ರೂಫ್‌ ಆಫ್‌ ಹೊಟೇಲ್ಸ್‌ ಆಡಳಿತ ನಿರ್ದೇಶಕ ಪ್ರಕಾಶ್‌ ಶೆಟ್ಟಿ, ಅನಿವಾಸಿ ಭಾರತೀಯ ಉದ್ಯಮಿ ರೊನಾಲ್ಡ್‌ ಕೊಲಾಸೊ, ಅದಾನಿ ಗ್ರೂಪಿನ ಪ್ರೆಸಿಡೆಂಟ್‌ ಮತ್ತು ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಕಿಶೋರ್‌ ಕುಮಾರ್‌ ಆಳ್ವ, ನ್ಯಾಷನಲ್‌ ಕಮಿಷನ್‌ ಫಾರ್‌ ಎಲೈಡ್‌ ಅಂಡ್‌ ಹೆಲ್ತ್‌ ಕೇರ್‌ ಪ್ರೊಫೆಶನ್ಸ್‌ ಕರ್ನಾಟಕ ಚೇರ್ಮನ್‌ ಡಾ.ಯು.ಟಿ. ಇಫ್ತಿಕರ್‌ ಅಲಿ, ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ವಿವಿಧ ನಿಗಮ ಮಂಡಳಿ ಅಧ್ಯಕ್ಷರು, ಉದ್ಯಮಿಗಳು, ಯುನಿವರ್ಸಿಟಿಗಳ ಕುಲಾಧಿಪತಿಗಳು, ಧಾರ್ಮಿಕ ಪರಿಷತ್‌ ಸದಸ್ಯರು, ವಿವಿಧ ಪಕ್ಷಗಳ ಸಂಘ ಸಂಸ್ಥೆಗಳ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.ಸ್ಪರ್ಧಾಕೂಟದಲ್ಲಿ ಭಾಗವಹಿಸಿದ ಕೋಣಗಳ ಯಜಮಾನರಿಗೆ ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಬಹುಮಾನದೊಂದಿಗೆ ವಿಶೇಷವಾಗಿ ತೃತೀಯ, ಚತುರ್ಥ ಬಹುಮಾನ (ಚಿನ್ನ)ವನ್ನೂ ನೀಡಲಾಗುತ್ತದೆ. ಕಂಬಳ ಕರೆಯ ಉದ್ದಕ್ಕೂ ಪ್ರೇಕ್ಷಕರು ನೋಡಲು ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣ ಮಾಡಲಾಗುತ್ತದೆ ಎಂದು ಖಾದರ್‌ ತಿಳಿಸಿದರು.

ಜ.12ರಂದು ಗ್ರಾಮೋತ್ಸವ: ನರಿಗಾನ ಗ್ರಾಮ ಪಂಚಾಯ್ತಿ ಆಶ್ರಯದಲ್ಲಿ ನ.12ರಂದು ನರಿಂಗಾನ ಗ್ರಾಮೋತ್ಸವ ಎಂಬ ವಿಶೇಷ ಸ್ನೇಹ ಸಮ್ಮಿಲನ, ಪ್ರತಿಭಾ ಪುರಸ್ಕಾರ, ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ನೃತ್ಯವೈಭವ, ಸಂಗೀತ ರಸಮಂಜರಿ ಕ್ರೀಡಾಕೂಟಗಳು ನಡೆಯಲಿಕ್ಕಿದ್ದು ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಲಿದ್ದಾರೆ ಎಂದರು.

ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್‌ ಕಾಜವ ಮಿತ್ತಕೋಡಿ, ಪ್ರಧಾನ ಕಾರ್ಯದರ್ಶಿ ನವಾಝ್‌ ನರಿಂಗಾನ, ಕಣಚೂರು ಸಮೂಹ ಸಂಸ್ಥೆಯ ಚೇರ್ಮನ್‌ ಯು.ಕೆ. ಮೋನು, ಉಪಾಧ್ಯಕ್ಷ ಮ್ಯಾಕ್ಸಿಯಂ ಡಿಸೋಜ ಇದ್ದರು.

------------

ಫೋಟೊ

5ಖಾದರ್‌