ಸ್ವಸ್ಥ ವಿಶೇಷಚೇತನ ಶಾಲೆಯಲ್ಲಿ ಗರಗಂದೂರಿನ ರಾಯಲ್ ಫಾರ್ಮರ್ ಕ್ಲಬ್ ವತಿಯಿಂದ ಸೋಮವಾರ ವಿಶೇಷ ಚೇತನ ಶಾಲೆಗೆ ಕಪಾಟ್ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಲಾಯಿತು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸ್ವಸ್ಥ ವಿಶೇಷಚೇತನ ಶಾಲೆಯಲ್ಲಿ ಗರಗಂದೂರಿನ ರಾಯಲ್ ಫಾರ್ಮರ್ ಕ್ಲಬ್ ವತಿಯಿಂದ ಸೋಮವಾರ ವಿಶೇಷ ಚೇತನ ಶಾಲೆಗೆ ಕಪಾಟ್ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಲಾಯಿತು. ಕಳೆದ 3 ತಿಂಗಳ ಹಿಂದೆ ಗರಗಂದೂರು ಎ ಯುವಕರ ತಂಡವು ರಚಿಸಿಕೊಂಡಿರುವ ರಾಯಲ್ ಫಾರ್ಮರ್ ಕ್ಲಬ್ ವತಿಯಿಂದ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯನ್ನು ಆರಂಭಿಸಲಾಗಿದ್ದು ಈ ಸಂಸ್ಥೆಯ ವತಿಯಿಂದ ಪ್ರಥಮ ಕಾರ್ಯಕ್ರಮವಾಗಿ ಕಪಾಟ್ ಶಾಲೆಗೆ ನೀಡಿದರು. ನಂತರ ವಿಶೇಷ ಚೇತನ ಮಕ್ಕಳಿಗೆ ಭೋಜನ ನೀಡಿದರು.ಈ ಸಂದರ್ಭ ಅಧ್ಯಕ್ಷರಾದ ವಿ.ಸಂತೋಷ್, ಉಪಾಧ್ಯಕ್ಷರು, ಸುಧಾಕರ್, ಕಾರ್ಯದರ್ಶಿ, ಸಂತೋಷ್ ಸೇರಿದಂತೆ ಸಂಸ್ಥೆಯ ನಿರ್ದೇಶಕರು ಇದ್ದರು.