ಸಾರಾಂಶ
30 ಮಂದಿ ನಿರ್ದೇಶಕರ ಸ್ಥಾನಗಳಿಗೆ ಹಿನಕಲ್ ಬಸವರಾಜು ಅವರ ತಂಡ ಭರ್ಜರಿ ಜಯ
ಕನ್ನಡಪ್ರಭ ವಾರ್ತೆ ಮೈಸೂರು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಸ್ಥಾನಗಳಿಗೆ ಭಾನುವಾರ ನಗರದ ಅಗ್ರಹಾರದ ನಟರಾಜ ಸಭಾ ಭವನದಲ್ಲಿ ಚುನಾವಣೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಿನಕಲ್ ಎಚ್.ವಿ. ಬಸವರಾಜು 729 ಮತಗಳಿಸುವುದರೊಂದಿಗೆ ಜಯಗಳಿಸಿದರು. ಇನ್ನಿತರ ಸ್ಪರ್ಧಿಗಳಾದ ವರುಣ ಮಹೇಶ್- 634, ಶಿವಮೂರ್ತಿ ಕಾನ್ಯ- 586, ವಸಂತಕುಮಾರ್ ಅವರು 56 ಮತಗಳನ್ನು ಪಡೆದರು.
30 ಮಂದಿ ನಿರ್ದೇಶಕರ ಸ್ಥಾನಗಳಿಗೆ ಹಿನಕಲ್ ಬಸವರಾಜು ಅವರ ತಂಡ ಭರ್ಜರಿ ಜಯಗಳಿಸಿತು. ಅವರ ತಂಡದಿಂದ ಪುರುಷ ನಿರ್ದೇಶಕ ಸ್ಥಾನದ 14 ಅಭ್ಯರ್ಥಿಗಳು ಹಾಗು ಮಹಿಳಾ ನಿರ್ದೇಶಕ ಸ್ಥಾನದ 8 ಅಭ್ಯರ್ಥಿಗಳು ಜಯಗಳಿಸಿದರು.ಪಿ. ಶೇಖರ್, ಎನ್.ಜಿ. ಗಿರೀಶ್, ಎಸ್. ಗಿರೀಶ್, ಕೆ. ಗಿರಿಕುಮಾರ್, ಎಲ್.ಪಿ. ಮಂಜುನಾಥ್, ದಕ್ಷಿಣಾಮೂರ್ತಿ, ಕೆ. ನಾಗರಾಜು, ಎಂ. ಬಸವರಾಜು, ಕೆ.ಎಂ. ಮಾದಪ್ಪ, ಡಾ.ಎಂ.ಎಂ. ಮಹದೇವಪ್ಪ, ಎಂ.ಎಸ್. ಚಣ್ಣ, ದೂರ ಕೆ. ಶಿವಕುಮಾರ್, ಷಡಕ್ಷರಿ ಗೆಲುವು ಸಾಧಿಸಿದರು.
ಮಹಿಳಾ ನಿರ್ದೇಶಕ ಸ್ಥಾನಕ್ಕೆ ಅನಸೂಯ ಗಣೇಶ್, ದಾಕ್ಷಾಯಿಣಿ ಲಿಂಗರಾಜು, ಎಂ. ದಾಕ್ಷಾಯಿಣಿ. ಎನ್.ಬಿ. ಭಾಗ್ಯಾ, ರಾಜೇಶ್ವರಿ ಮಹೇಶ್, ರೂಪಾ ಸತೀಶ್, ಎಚ್.ಎನ್. ಸರ್ವಮಂಗಳಾ, ಸೌಭಾಗ್ಯಾ ಸೇರಿ ಒಟ್ಟು 22 ಮಂದಿ ಭರ್ಜರಿ ಜಯಗಳಿಸಿದರು.ಕಾನ್ಯ ಶಿವಮೂರ್ತಿ ತಂಡದಲ್ಲಿ ಕಲಳ್ಳಿ ನಟರಾಜು, ಎ.ವಿ. ವಿರೂಪಾಕ್ಷ, ಜಿ.ಎಂ. ಮಹೇಶ್, ಎಂ. ಚಂದ್ರಶೇಖರ್, ಪರಮೇಶ್, ನಾಗಜ್ಯೋತಿ ಪ್ರತಿಧ್ವನಿ ಪ್ರಸಾದ್ 6 ಜನ ಜಯಗಳಿಸಿದರು.
ವರುಣ ಮಹೇಶ್ ತಂಡದಿಂದ ಸಿ.ಆರ್. ನಟರಾಜು, ಶೈಲಾ ನಾಗರಾಜು ಜಯಗಳಿಸಿದರು. ನೂತನ ಅಧ್ಯಕ್ಷ ಹಾಗೂ ನಿರ್ದೇಶಕರಿಗೆ ಮುಖಂಡರಾದ ಟಿ.ಎಸ್. ಲೋಕೇಶ್, ಎಂ.ಎಸ್. ಮಹದೇವಸ್ವಾಮಿ, ಇಮ್ಮಾವು ದಕ್ಷಿಣಮೂರ್ತಿ, ಟಿ. ಲಿಂಗರಾಜ ಅರ್ಜುನ, ದೇವಾಲಪುರ ನಾಗರಾಜು, ದೂರ ಮಹದೇವಸ್ವಾಮಿ, ಗೆಜ್ಜಗಳ್ಳಿ ಶಂಕರ್, ಖಂಡೇಶ್ ಕಾಶಿ, ವಿಶ್ವನಾಥ್ ಶೆಟ್ಟಿ, ದಾರಿಪುರ ಡಿ. ಚಂದ್ರಶೇಖರ್ ಮೊದಲಾದವರು ಶುಭ ಕೋರಿದರು.ಉಪ ಚುನಾವಣಾಧಿಕಾರಿಯಾಗಿ ಕೆ.ಸಿ. ಬಸವರಾಜ ಸ್ವಾಮಿ, ಸಹಾಯಕ ಚುನಾವಣಾಧಿಕಾರಿಯಾಗಿ ನಂದೀಶ್, ಸದಾಶಿವ ಕಾರ್ಯ ನಿರ್ವಹಿಸಿದರು.