ಲೋಕ ಸಭಾಧ್ಯಕ್ಷ ಓಂ ಬಿರ್ಲಾ ಅವರು ಕಂಪನಿ ಪರವಾಗಿ ನಿರ್ದೇಶಕ ವರುಣ್ ರಿನಾಲ್ಗೊ ಬ್ಯಾಪ್ಟಿಸ್ಟ್ ಅವರಿಗೆ ಪ್ರದಾನ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮಳೆ ನೀರು ಕೊಯ್ಲು ಮತ್ತು ಅಂತರ್ಜಲ ನಿರ್ವಹಣೆಯಲ್ಲಿ ದೊಡ್ಡ ಸಾಧನೆ ಮಾಡಿದ ನಗರದ ಹೆಸರಾಂತ ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್ ಸಂಸ್ಥೆ 2026ರ ರಾಷ್ಟ್ರದ ಪ್ರತಿಷ್ಠಿತ ವಾಟರ್ ಟ್ರಾನ್ಸ್‌ರ್ವಲಿಟಿ ಗ್ಲೋಬಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.ಸುಸ್ಥಿರ ನೀರಿನ ಪರಿಹಾರಗಳಲ್ಲಿ ಪ್ರಮುಖ ನಾವೀನ್ಯಕಾರರಾದ ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ಸ್ ಸಿಸ್ಟಮ್ಸ್ ಮಳೆ ನೀರು ಕೊಯ್ದು ಮತ್ತು ಅಂತರ್ಜಲ ನಿರ್ವಹಣೆ ವಿಭಾಗದಲ್ಲಿ ವಾಟರ್ ಟ್ರಾನ್ಸ್ ವತ್ಸಲಿಟಿ ಗ್ಲೋಬಲ್ ರಾಷ್ಟ್ರೀಯ ಪ್ರಶಸ್ತಿ-2026ರನ್ನು ನವದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕ ಸಭಾಧ್ಯಕ್ಷ ಓಂ ಬಿರ್ಲಾ ಅವರು ಕಂಪನಿ ಪರವಾಗಿ ನಿರ್ದೇಶಕ ವರುಣ್ ರಿನಾಲ್ಗೊ ಬ್ಯಾಪ್ಟಿಸ್ಟ್ ಅವರಿಗೆ ಪ್ರದಾನ ಮಾಡಿದ್ದಾರೆ.ವಸತಿ, ವಾಣಿಜ್ಯ, ಸಾಂಸ್ಥಿಕ ಮತ್ತು ಸಾರ್ವಜನಿಕ ವಲಯಗಳಲ್ಲಿ ಮೇಲ್ಛಾವಣಿ ಮಳೆ ನೀರು ಕೊಯ್ದು ವ್ಯವಸ್ಥೆಗಳು ಮತ್ತು ಸುಸ್ಥಿರ ಅಂತರ್ಜಲ ಮರುಪೂರಣ ಕಾರ್ಯಗಳನ್ನು ಉತ್ತೇಜಿಸುವಲ್ಲಿ ಕಂಪನಿ ಜಾರಿಗೆ ತಂದಿರುವ ಅತ್ಯುತ್ತಮ ಚಟುವಟಿಕೆಗಳು ಈ ಮೂಲಕ ರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ಆ ಮೂಲಕ ನಮ್ಮ ಹೆಮ್ಮೆಯ ಚಿಕ್ಕಮಗಳೂರಿನ ಕಂಪನಿ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಹೆಸರು ಮಾಡಿದೆ.ಪ್ರಾಯೋಗಿಕವಾಗಿ, ವಿಸ್ತರಿಸಬಹುದಾದ ತಂತ್ರಜ್ಞಾನ ಬಳಸಿಕೊಂಡು ನೀರಿನ ಕೊರತೆ ಸವಾಲುಗಳು ಪರಿಹರಿಸುವಲ್ಲಿ ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ ಸಿಸ್ಟಮ್ಸ್ ಮುಂಚೂಣಿಯಲ್ಲಿದೆ. ಕಂಪನಿ ಮೇಲ್ಛಾವಣಿ ಹರಿವನ್ನು ಸೆರೆ ಹಿಡಿಯುವ, ಅಂತರ್ಜಲ ಮರುಪೂರಣ ಸುಗಮಗೊಳಿಸುವ ಮತ್ತು ದೀರ್ಘಕಾಲಿನ ನೀರಿನ ಸಂರಕ್ಷಣೆ ಉತ್ತೇಜಿಸುವ ಪರಿಣಾಮಕಾರಿ ಮಳೆ ನೀರು ಕೊಯ್ಲು ವ್ಯವಸ್ಥೆ ವಿನ್ಯಾಸಗೊಳಿಸುವುದರೊಂದಿಗೆ ಅದನ್ನು ಕಾರ್ಯಗತಗೊಳಿಸುವ ಮಹತ್ವದ ಕಾರ್ಯವನ್ನು ಕಂಪನಿ ನಡೆಸಿಕೊಂಡು ಬರುತ್ತಿದೆ.ಸಮಾರಂಭದಲ್ಲಿ ಗ್ಲೋಬಲ್ ಅಲೈಯನ್ಸ್ ಫಾರ್ ಎ ಸಸ್ಟೈನೇಬಲ್ ಪ್ಲಾನೆಟ್ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಡಾ. ಸತ್ಯತ್ರಿಪಾಠಿ, ಇಂಡಿಯನ್ ವಾಟರ್ ಫೌಂಡೇಷನ್ ಡಾ.ಅರವಿಂದ್ ಕುಮಾರ್ ಇದ್ದರು.ಫೋಟೋಸುಸ್ಥಿರ ನೀರಿನ ಪರಿಹಾರಗಳಲ್ಲಿ ಪ್ರಮುಖ ನಾವೀನ್ಯಕಾರರಾದ ಫಾರ್ಮ್ ಲ್ಯಾಂಡ್ ರೈನ್ ವಾಟರ್ ಹಾರ್ವೆಸ್ಟಿಂಗ್ಸ್ ಸಿಸ್ಟಮ್ಸ್ ಮಳೆ ನೀರು ಕೊಯ್ದು ಮತ್ತು ಅಂತರ್ಜಲ ನಿರ್ವಹಣೆ ವಿಭಾಗದಲ್ಲಿ ವಾಟರ್ ಟ್ರಾನ್ಸ್ ವತ್ಸಲಿಟಿ ಗ್ಲೋಬಲ್ ರಾಷ್ಟ್ರೀಯ ಪ್ರಶಸ್ತಿ-2026ನ್ನು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಕಂಪನಿ ಪರವಾಗಿ ನಿರ್ದೇಶಕ ವರುಣ್ ರಿನಾಲ್ಲೊ ಬ್ಯಾಪ್ಟಿಸ್ಟ್ ಸ್ವೀಕರಿಸಿದರು.
