ಸಾರಾಂಶ
ವಿವಿಧ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ವಾದನ, ಹುಲಿ ನರ್ತನ, ಗೊಂಬೆ ಕುಣಿತ, ಚೆಂಡೆ ವಾದನ ಸಹಿತ ವಿವಿಧ ಆಕರ್ಷಕ ಕಲಾ ಪ್ರದರ್ಶನಗಳೊಂದಿಗೆ ಕ್ರೀಡಾಜ್ಯೋತಿಯ ಮೆರವಣಿಗೆ ನಡೆಯಿತು.
ಉಪ್ಪಿನಂಗಡಿ : ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಅಂತರ್ ವಿವಿ ಗುಡ್ಡಗಾಡು ಓಟ ಸ್ಪರ್ಧೆಯ ಕ್ರೀಡಾಜ್ಯೋತಿಯನ್ನು ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಿಂದ ಕಾಲೇಜಿಗೆ ಭವ್ಯವಾದ ಮೆರವಣಿಯಲ್ಲಿ ಕರೆತರಲಾಯಿತು.
ವಿವಿಧ ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ವಾದನ, ಹುಲಿ ನರ್ತನ, ಗೊಂಬೆ ಕುಣಿತ, ಚೆಂಡೆ ವಾದನ ಸಹಿತ ವಿವಿಧ ಆಕರ್ಷಕ ಕಲಾ ಪ್ರದರ್ಶನಗಳೊಂದಿಗೆ ಕ್ರೀಡಾಜ್ಯೋತಿಯ ಮೆರವಣಿಗೆ ನಡೆಯಿತು.ಕಾಲೇಜಿನ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಕಾಲೇಜು ಪ್ರಾಂಶುಪಾಲರು ಸಹಿತ ಹಲವಾರು ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.