ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ೪೦ ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಸೇವಾ ಆಯ್ಕೆ ಮಂಡಳಿ (ಎಸ್ಎಸ್ಬಿ) ಸಂದರ್ಶನಕ್ಕೆ ಅರ್ಹತೆ ಪಡೆದಿದ್ದಾರೆ.
ಮಂಗಳೂರು: ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸಿದ ಲಿಖಿತ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್ಪರ್ಟ್ ಪದವಿಪೂರ್ವ ಕಾಲೇಜಿನ ೪೦ ಮಂದಿ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಸೇವಾ ಆಯ್ಕೆ ಮಂಡಳಿ (ಎಸ್ಎಸ್ಬಿ) ಸಂದರ್ಶನಕ್ಕೆ ಅರ್ಹತೆ ಪಡೆದಿದ್ದಾರೆ.
ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಉಡುಪಿಯ ಅಜಯ್ ಕುಮಾರ್ ಬಿ, ಬೆಂಗಳೂರಿನ ಗೋವರ್ಧನ್ ಸಿ., ಸಂಜನಾ ಟಿ.ಎಸ್., ಸೃಜನ್ ಟಿ., ಅಖಿಲೇಶ್ ಬಿ ಕರಿಗೌಡರ್, ಚಾರ್ವಿ ಎಸ್., ರಂಜನ್ ಸಂಜಯ್ ಕುಮಾರ್, ವಿವಾನ್ ಎ ಗುಡದಿನ್ನಿ, ಎ.ವೆಂಕಟ್ ಮೌರ್ಯ, ಗುರು ಪ್ರೀತಂ ಎಸ್.ಆರ್., ಗೌರವ್ ತೇಜ್ ಎ., ಬೆಳಗಾವಿಯ ಅಮೋಘ ಪ್ರದೀಪ ಕರ್ಲಟ್ಟಿ, ಶ್ರೇಯಸ್ ಬಿ. ರೇವಣ್ಣವರ್, ಪ್ರೀತಮ್ ಸಂತೋಷ್ ಕಾನೇಟ್ಕರ್, ತೇಜಸ್ ಆನಂದಶೇಖರ್ ಅರಗಂಜಿ, ಬೀದರ್ನ ಬಿ.ಧ್ರುವ ಕುಮಾರ್, ಅಭಿನವ ಎಂ. ಪವನ ಶೆಟ್ಟಿ, ಚಿಕ್ಕಮಗಳೂರಿನ ಕುನಾಲ್ ರವಿತೇಜ್, ಧಾರವಾಡದ ಆರ್ಯನ್, ಗದಗದ ಧ್ರುವ ಪವನ ಕುಮಾರ್ ಪಾಟೀಲ್, ಗೋಕಾಕ್ನ ಉಜ್ವಲ ಬಾಲಚಂದ್ರ ಗೌಡರ್, ಕಲಬುರಗಿಯ ಧ್ರುವ ಐ. ಹೀರಾಪುರ, ಹಾಸನದ ಹೇಮಂತ್ ಬಿ.ಪಿ., ಹೃಷಿಕೇಶ ಸಿ.ಯು., ಲಿಖಿತ್ ಗೌಡ ಎಸ್.ಎಚ್., ಹಾವೇರಿಯ ಅಮೋಘ ಬಿ.ಹುಲಿಕಟ್ಟಿ, ಹುಬ್ಬಳ್ಳಿಯ ಸಚಿ ವಿ.ಬಿ., ಕೊಡಗಿನ ಶೌರ್ಯ ಎಂ.ದೂಪದ್, ಮಂಗಳೂರಿನ ಅದಿತಿ ಸುರೇಶ್, ಮೈಸೂರಿನ ಯಶಸ್ ಜೆ., ಯದುನಂದನ್ ರಾವ್ ಎಂ.ಎಸ್., ಚೇತನ್ ಎಚ್.ಎಸ್., ಶಿವಮೊಗ್ಗದ ನವನೀತ ಚಿಟ್ಟಾ, ತಿಪಟೂರಿನ ನಿರ್ಭಯ್ ಪಿ.ಶಿವರಾಮಯ್ಯ, ತುಮಕೂರಿನ ನಾಗ ಚಿರಂತ್ ಬಿ.ಎಸ್., ಯಶೋವರ್ಧನ್ ಡಿ.ಕೊಮಾರ್ಲು, ಭುವನ್ ಎಸ್., ನಿಶಾಂತ್ ಡಿ., ವಿಜಯನಗರದ ಆಯುಷ್ ಕಿಶನ್ ಭಾಗವತ್, ವಿಜಯಪುರದ ದೀಕ್ಷಾ ಕೋರಿ, ಪ್ರಮಥ್ ಹಳೆಮನಿ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಯ ಪ್ರವೇಶಕ್ಕಾಗಿ ಸಂದರ್ಶನಕ್ಕೆ ಅರ್ಹತೆ ಪಡೆದಿದ್ದಾರೆ. ಆಯ್ಕೆಯಾದ ವಿದ್ಯಾರ್ಥಿಗಳನ್ನು ಎಕ್ಸ್ಪರ್ಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.ದೇಶದ ಅತ್ಯಂತ ಪ್ರತಿಷ್ಠಿತ ಸಶಸ್ತ್ರ ಪಡೆಗಳ ತರಬೇತಿ ಸಂಸ್ಥೆಯಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪ್ರವೇಶ ಪರೀಕ್ಷೆಯ ೨೦೨೬ರ ಮೊದಲ ಸುತ್ತಿನಲ್ಲಿ ಅಭೂತಪೂರ್ವ ಸಾಧನೆ ಮಾಡುವ ಮೂಲಕ ಭಾರತೀಯ ಸೇನೆಯಲ್ಲಿ ಉನ್ನತ ಅಧಿಕಾರಿಗಳಾಗುವ ಹೆಮ್ಮೆಯ ಕನಸಿನತ್ತ ದಾಪುಗಾಲು ಇಟ್ಟಿದ್ದಾರೆ.ಇದು ಕೇವಲ ಪರೀಕ್ಷೆಯ ಯಶಸ್ಸಲ್ಲ...
ವಿದ್ಯಾರ್ಥಿಗಳ ಅಪ್ರತಿಮ ಸಾಧನೆಯನ್ನು ಕೊಂಡಾಡಿದ ಎಕ್ಸ್ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು, ಭಾರತದ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುವ ಮಹೋನ್ನತ ಕನಸಿನತ್ತ ಸಾಗಲು ರಾಷ್ಟ್ರಮಟ್ಟದಲ್ಲಿ ನಡೆಯುವ ಕಠಿಣ ಆಯ್ಕೆ ಪ್ರಕ್ರಿಯೆಯ ಮೊದಲ ಹಂತದಲ್ಲೇ ನಮ್ಮ ಕಾಲೇಜಿನ ೪೦ ವಿದ್ಯಾರ್ಥಿಗಳು ಏಕಕಾಲದಲ್ಲಿ ಅರ್ಹತೆ ಪಡೆದಿರುವುದು ಹೆಮ್ಮೆಯ ಕ್ಷಣ. ಇದು ಕೇವಲ ಪರೀಕ್ಷೆಯ ಯಶಸ್ಸಲ್ಲ, ಮಾತೃಭೂಮಿಯ ಸೇವೆಯ ಪಯಣದಲ್ಲಿ ಅವರು ಇಟ್ಟಿರುವ ಗೌರವದ ಮೊದಲ ಹೆಜ್ಜೆ ಎಂದಿದ್ದಾರೆ.ವಿದ್ಯಾರ್ಥಿಗಳ ಶಿಸ್ತುಬದ್ಧ ಪರಿಶ್ರಮ, ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲವೇ ಈ ಸಾಧನೆಗೆ ಬಲವಾಗಿದೆ. ರಾಷ್ಟ್ರದ ರಕ್ಷಣೆ ಮತ್ತು ಗೌರವವನ್ನು ಕಾಪಾಡುವ ಪವಿತ್ರ ಹೊಣೆಗಾರಿಕೆಯನ್ನು ಹೊತ್ತು ಮುನ್ನಡೆಯುವ ನಮ್ಮ ಹೆಮ್ಮೆಯ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು. ಅವರ ದೇಶಸೇವೆಯ ಕನಸು ಸಾಕಾರವಾಗಲಿ, ಉಜ್ವಲ ಭವಿಷ್ಯದಲ್ಲಿ ಇನ್ನಷ್ಟು ಸಾಧನೆಗಳು ಅವರದಾಗಲಿ ಎಂದು ಅವರು ಶುಭ ಹಾರೈಸಿದರು.
---------------