ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸುವುದು ಭಾರತದ ಕಾನೂನಿನ ಪ್ರಕಾರ ಗಂಭೀರ ಅಪರಾಧ ಮತ್ತು ರಾಷ್ಟ್ರಧ್ವಜದ ಅವಮಾನವಾಗಿದೆ 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆಯಡಿ ತಲೆಕೆಳಗಾಗಿ ಹಾರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು/ಮಂಚೇನಹಳ್ಳಿ

ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ 77ನೇ ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಪೂರ್ಣಿಮಾ ಧ್ವಜಾರೋಹಣ ನಡೆಸುವ ವೇಳೆ ರಾಷ್ಟ್ರೀಯ ಧ್ವಜವು ತಲೆಕೆಳಗಾಗಿ ಹಾರಾಡಿದ ಘಟನೆ ನಡೆಯಿತು.

ಇದನ್ನು ಕಂಡು ಸ್ಥಳೀಯ ಸಾರ್ವಜನಿಕರು ಆಕ್ರೋಶಗೊಂಡ ಕೂಡಲೇ ಎಚ್ಚೆತ್ತುಕೊಂಡ ಶಿಕ್ಷಕ ಸಿಬ್ಬಂದಿ ವರ್ಗದವರು ಸರಿಪಡಿಸಿದರು. ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸುವುದು ಭಾರತದ ಕಾನೂನಿನ ಪ್ರಕಾರ ಗಂಭೀರ ಅಪರಾಧ ಮತ್ತು ರಾಷ್ಟ್ರಧ್ವಜದ ಅವಮಾನವಾಗಿದೆ 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆಯಡಿ ತಲೆಕೆಳಗಾಗಿ ಹಾರಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಸರ್ಕಾರಿ ಶಿಕ್ಷಕರಿಗೆ ಸ್ವಲ್ಪವಾದರೂ ತ್ರಿವರ್ಣ ಧ್ವಜವನ್ನು ಹೇಗೆ ಬರುತ್ತದೆ ಎಂಬುದು ಹರಿವಿಲ್ಲದೆ ಧ್ವಜಾರೋಹಣಕ್ಕೆ ಸಿದ್ಧತೆ ನಡೆಸಿದ್ದಾರೆ ಎಂಬುದು ಸಾರ್ವಜನಿಕರು ಕೆಂಡವಾದರು.ಮಂಚೇನಹಳ್ಳಿ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ, ನಮಗೆ ಕಾರ್ಯಕ್ರಮಕ್ಕೆ ಆಹ್ವಾನವನ್ನೇ ನೀಡಿಲ್ಲ. ಧ್ವಜಾರೋಹಣದ ವೇಳೆ ರಾಷ್ಟ್ರಧ್ವಜ ತಲೆಕೆಳಗಾಗಿ ಧ್ವಜಾರೋಹಣ ಮಾಡಿದ್ದಾರೆ ಎಂದರೆ ಇನ್ನೆಷ್ಟು ಮಟ್ಟಿಗೆ ಇವರ ಆಡಳಿತ ವೈಖರಿ ಇದೆ. ಇವರು ಜನಕ್ಕೆ ಸಹಕಾರ ನೀಡುವಲ್ಲಿ ವಿಫಲರಾಗಿದ್ದಾರೆ ಎಂದರು.ತಹಸೀಲ್ದಾರ್ ಪೂರ್ಣಿಮಾ ಮಾತನಾಡಿ, ಇವತ್ತಿನ ದಿನ ಧ್ವಜಾರೋಹಣ ನಡೆಯುವ ವೇಳೆ ತಪ್ಪಾಗಿದೆ, ತಾಲೂಕು ಆಡಳಿತದಿಂದ ಕ್ಷಮೆಯಾಚಿಸುತ್ತೇನೆ, ಪ್ರತಿ ಜಯಂತಿ ಹಾಗೂ ರಾಷ್ಟ್ರೀಯ ಹಬ್ಬಗಳು ಮಾಡಬೇಕಾದರೆ ಪೂರ್ವಭಾವಿ ಸಭೆಗಳನ್ನು ಕರೆಯುತ್ತೇವೆ. ಎಲ್ಲಾ ಇಲಾಖೆಗಳಿಗೆ ತಮ್ಮದೇ ಆದ ಜವಾಬ್ದಾರಿಗಳನ್ನು ನೀಡಿರುತ್ತೇವೆ. ಗಣರಾಜ್ಯೋತ್ಸವ ಎರಡು ದಿನದ ಹಿಂದೆಯೂ ಕೂಡ ರಿಹರ್ ಸೆಲ್ ಮಾಡಿರುತ್ತೇವೆ, ಆದರೂ ಕೂಡ ಇಂದು ಕಾರ್ಯ ಲೋಪ ಆಗಿದೆ, ಶಿಕ್ಷಣ ಇಲಾಖೆ ಅವರಿಗೆ ಫ್ಲಾಗ್ ಕೋಡ್ ಆಫ್ ಇಂಡಿಯಾ ಪ್ರಕಾರ ಜವಾಬ್ದಾರಿಯನ್ನು ವಹಿಸಿದ್ದೇವೆ ಅವರು ವಿಫಲರಾಗಿದ್ದಾರೆ. ನಿಯಾಮಾನುಸಾರ ಅವರ ಮೇಲೆ ಸೂಕ್ತ ಕ್ರಮ ವಹಿಸುತ್ತೇನೆ ಎಂದರು.ಮಕ್ಕಳು ನಿತ್ಯ ಪ್ರದರ್ಶನ ಮತ್ತು ವಿವಿಧ ರಂಗದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗುರುತಿಸಿ ತಾಲ್ಲೂಕು ಆಡಳಿತದ ಕಡೆಯಿಂದ ಸನ್ಮಾನಿಸಲಾಯಿತು. ಇದೆ ವೇಳೆ ಸರ್ಕಾರಿ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕರು, ಗ್ರಾಮದ ಸ್ಥಳೀಯ ಮುಖಂಡರು ಹಾಜರಿದ್ದರು.