ನರಸಿಂಹರಾಜಪುರ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶನಿವಾರ ಶೆಟ್ಟಿಕೊಪ್ಪದ 200 ಅಡಿ ಎತ್ತರದ ಬಿಎಸ್ ಎನ್ ಎಲ್ ಟವರ್ ಏರಿ ಹಿರೇಬಿಸು ಜೋಯಿ ಬ್ರೋ ರಾಷ್ಟ್ರಧ್ವಜವನ್ನು ಹಾರಿಸಿ ದೇಶ ಭಕ್ತಿ ಮೆರೆದಿದ್ದಾರೆ

ನರಸಿಂಹರಾಜಪುರ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಶನಿವಾರ ಶೆಟ್ಟಿಕೊಪ್ಪದ 200 ಅಡಿ ಎತ್ತರದ ಬಿಎಸ್ ಎನ್ ಎಲ್ ಟವರ್ ಏರಿ ಹಿರೇಬಿಸು ಜೋಯಿ ಬ್ರೋ ರಾಷ್ಟ್ರಧ್ವಜವನ್ನು ಹಾರಿಸಿ ದೇಶ ಭಕ್ತಿ ಮೆರೆದಿದ್ದಾರೆ.

ಸತತವಾಗಿ ಕಳೆದ 16 ವರ್ಷದಿಂದಲೂ ಇದೇ ಟವರ್ ಮೇಲೆ ರಾಷ್ಟ್ರ ಧ್ವಜ ಹಾರಿಸಿ ದೇಶ ಭಕ್ತಿ ಮೆರೆಯುತ್ತಿರುವ ಜೋಯಿ ಬ್ರೋ ಅವರೊಂದಿಗೆ ಗ್ರಾಮಸ್ಥರು ಧ್ವಜಕ್ಕೆ ಗೌರವ ನೀಡುತ್ತಿದ್ದಾರೆ. ಬೆಳಿಗ್ಗೆ 8 ಕ್ಕೆ ಗ್ರಾಮಸ್ಥರೊಂದಿಗೆ ಮೆರವಣಿಗೆಯಲ್ಲಿ ಟವರ್ ಬಳಿ ಬಂದು ನಂತರ ಜೋಯಿ ಬ್ರೋ ಟವರ್ ಏರಿ ದ್ವಜ ಹಾರಿಸುತ್ತಾರೆ. ನಂತರ ಕೆಳಗೆ ಬಂದು ಅಲ್ಲೂ 25 ಅಡಿ ಎತ್ತರದ ಕಂಬದ ಮೇಲೆ ರಾಷ್ಟ್ರ ದ್ವಜ ಹಾರಿಸಿ. ಎಲ್ಲರಿಗೂ ಸಿಹ ಹಂಚುತ್ತಾರೆ.

ಟವರ್ ಮೇಲೆ ರಾರಾಜಿದ ರಾಷ್ಟ್ರ ದ್ವಜ ಶೆಟ್ಟಿಕೊಪ್ಪ ಸುತ್ತ ಮುತ್ತಲಿನ ಪ್ರಕೃತಿ ಸೌಂದರ್ಯದ ಮಧ್ಯೆ ಸಾವರ್ಜನಿಕರ ಗಮನ ಸೆಳೆಯಿತು.

ಜೋಯಿ ಬ್ರೋ ಕನ್ನಡಪ್ರಭದೊಂದಿಗೆ ಮಾತನಾಡಿ, ರಾಷ್ಟ್ರ ದ್ವಜ ಜಾತಿ, ಧರ್ಮ, ಭಾಷೆ ಮೀರಿ ನಾವು ಭಾರತೀಯರು ಎಂಬ ಭಾವನೆ ಮೂಡುತ್ತಿದೆ. ನಮ್ಮ ಭಾರತದ ದ್ವಜ ಎತ್ತರಕ್ಕೆ ಇರಬೇಕು ಎಂಬ ಅಭಿಲಾಶೆಯಿಂದ ಪ್ರತಿ ವರ್ಷ ಟವರ್ ಮೇಲೆ ದ್ವಜ ಹಾರಿಸುತ್ತಿದ್ದೇನೆ. ಬೆಳಿಗ್ಗೆ ಟವರ್ ಮೇಲೆ ಹಾಕಿದ ರಾಷ್ಟ ದ್ವಜವು ಸಂಜೆವರೆಗೂ ಹಾರಾಡುತ್ತಿರುವಾಗ ದೇಶಾಭಿಮಾನ ಉಕ್ಕಿ ಬರುತ್ತದೆ ಎಂದರು.