ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ಸಂತ ಮೇರಿ ಶಾಲೆಗೆ ಪ್ರಶಸ್ತಿ

| Published : Sep 23 2024, 01:32 AM IST

ಸಾರಾಂಶ

ಸಂತ ಮೇರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ತೋರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ರಾಷ್ಟ್ರಮಟ್ಟದ ಇಂಟರ್ ಡೊಜ್ಜು ಕರಾಟೆ ಸ್ಪರ್ಧೆಯಲ್ಲಿ ಸ್ಥಳೀಯ ಸಂತ ಮೇರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ತೋರಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಕೋಲಾರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 15 ವರ್ಷದ ವಿಭಾಗದ ಟಾಟಾ ಸ್ಪರ್ಧೆಯಲ್ಲಿ ವಿ ಕೆ ಹರಿಪ್ರಿಯಾ ಪ್ರಥಮ ಸ್ಥಾನ, 14ವರ್ಷದ ವಿಭಾಗದಲ್ಲಿ ದಿಗಂತ್ ಎಂ ಎಸ್ ಕುಳಿತೆ ಹಾಗೂ ಕಾಟಾ ವಿಭಾಗದಲ್ಲಿ ಪ್ರಥಮ ಸ್ಥಾನ, 13 ವರ್ಷ ವಿಭಾಗದಲ್ಲಿ ಜೀವಿಕ ಆರ್ ಕುಮಿತೆ ಹಾಗೂ ಕಾಟಾ ಪ್ರಥಮ ಸ್ಥಾನ, 12 ವರ್ಷ ವಿಭಾಗ ದಲ್ಲಿ ವಿ ಕೆ ಚೈತನ್ಯ ಕುಳಿತೆ ಪ್ರಥಮ ಹಾಗೂ ಕಾಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ, 12 ವರ್ಷ ವಿಭಾಗದಲ್ಲಿ ದಿವಿನ್ ಕಮಿತೆ ಹಾಗೂ ಕಾಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸೀನಿಯರ್ ವಿಭಾಗದಲ್ಲಿ ಫೀಲ್ಡ್ ಮಾರ್ಷಲ್ ಕೆಎಮ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಾದ ಅಕ್ಷಯ್ ಕೆ ಎಸ್ ಹಾಗೂ ಅಂಕಿತ್ ಎ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಇವರು ಕರಾಟೆಮಾಸ್ಟರ್ ರೇನ್ಸಿ ಮುಖೇಶ್ ಅವರಲ್ಲಿ ತರಬೇತಿ ನೀಡಿದ್ದು, ಮಕ್ಕಳ ಸಾಧನೆಯನ್ನು ಸಂತ ಮೇರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ರೇ.ಫಾ. ವಿಜಯಕುಮಾರ್ ಹಾಗೂ ಶಾಲೆಯ ಪ್ರಾಂಶುಪಾಲರಾದ ಸೆಲ್ವರಾಜ್ ಪ್ರಶಂಸಿಸಿದ್ದಾರೆ.