ಕನ್ನಡಪ್ರಭ ವಾರ್ತೆ ಗುಳೇದಗುಡ್ಡ ವ್ಯಕ್ತಿತ್ವ ರೂಪಗೊಳ್ಳಬೇಕಾದರೆ ಹಿರಿಯರ, ರಾಷ್ಟ್ರ ನಾಯಕರ ಆದರ್ಶಗಳು, ತತ್ವ- ಸಿದ್ಧಾಂತಗಳು ಪ್ರತಿಯೊಬ್ಬರಿಗೂ ದಾರಿ ದೀಪವಾಗುತ್ತವೆ. ಹೀಗಾಗಿ ಗಾಂಧೀಜಿ, ಶಾಸ್ತ್ರೀಜಿಗಳಂತಹ ರಾಷ್ಟ್ರ ನಾಯಕರು ಸದಾ ಸ್ಮರಣೀಯರು ಎಂದು ಉಪ ತಹಸೀಲ್ದಾರ್ ಜಿ.ವ್ಹಿ.ರಜಪೂತ್ ಹೇಳಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ವ್ಯಕ್ತಿತ್ವ ರೂಪಗೊಳ್ಳಬೇಕಾದರೆ ಹಿರಿಯರ, ರಾಷ್ಟ್ರ ನಾಯಕರ ಆದರ್ಶಗಳು, ತತ್ವ- ಸಿದ್ಧಾಂತಗಳು ಪ್ರತಿಯೊಬ್ಬರಿಗೂ ದಾರಿ ದೀಪವಾಗುತ್ತವೆ. ಹೀಗಾಗಿ ಗಾಂಧೀಜಿ, ಶಾಸ್ತ್ರೀಜಿಗಳಂತಹ ರಾಷ್ಟ್ರ ನಾಯಕರು ಸದಾ ಸ್ಮರಣೀಯರು ಎಂದು ಉಪ ತಹಸೀಲ್ದಾರ್ ಜಿ.ವ್ಹಿ.ರಜಪೂತ್ ಹೇಳಿದರು.ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಜಯಂತಿ ಸರಳ ಸಮಾರಂಭದಲ್ಲಿ ಮಾತನಾಡಿ, ಗಾಂಧೀಜಿಯವರು ಸರಳ ಜೀವನ, ಸತ್ಯನಿಷ್ಠೆ ಮತ್ತು ಅಹಿಂಸೆಯ ತತ್ವಗಳಿಗೆ ಬದುಕನ್ನೇ ರಾಷ್ಟ್ರಕ್ಕೆ ಸಮರ್ಪಿಸಿದರು. ಸಾಮಾನ್ಯ ಜನರನ್ನು ಸ್ವಾತಂತ್ರ್ಯ ಚಳವಳಿಯಲ್ಲಿ ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ ಹೋರಾಟ ನಡೆಸಿದರು. ಲಾಲ್ ಬಹಾದೂರ್ ಶಾಸ್ತ್ರಿಜಿಯವರು ಪ್ರಧಾನಿಯಾಗಿ ಪ್ರಾಮಾಣಿಕತೆ, ಸರಳತೆ ಮತ್ತು ಕರ್ತವ್ಯನಿಷ್ಠೆಗೆ ಮಾದರಿಯಾದರು. ರೈತರು ಮತ್ತು ಸೈನಿಕರ ಮಹತ್ವವನ್ನು ಸಾರಿದ ಅವರ ಜೈ ಜವಾನ್, ಜೈ ಕಿಸಾನ್ ಘೋಷಣೆ ಇಂದಿಗೂ ಸ್ಮರಣೀಯವಾಗಿದೆ. ಗಾಂಧೀಜಿ ಮತ್ತು ಶಾಸ್ತ್ರಿಜಿಯವರ ಜೀವನ ದೇಶಭಕ್ತಿ, ತ್ಯಾಗ ಮತ್ತು ಸೇವೆಯ ಮಹತ್ವವನ್ನು ಸಾರುತ್ತದೆ ಎಂದರು.
ನಾಯಕರ ಆದರ್ಶಗಳು ಯುವ ಜನತೆಗೆ ದೇಶದ ಅಭಿವೃದ್ಧಿಗಾಗಿ ದುಡಿಯುವ ಸ್ಫೂರ್ತಿ ನೀಡುತ್ತವೆ. ಸತ್ಯ, ಶಾಂತಿ, ಸರಳತೆ ಮತ್ತು ಪ್ರಾಮಾಣಿಕತೆಯ ಮೌಲ್ಯಗಳನ್ನು ಸಮಾಜದಲ್ಲಿ ಬೆಳೆಸುವುದು ಇವರಿಗೆ ಸಲ್ಲಿಸುವ ನಿಜವಾದ ಗೌರವ. ರಾಷ್ಟ್ರದ ಏಕತೆ ಮತ್ತು ಜನಕಲ್ಯಾಣಕ್ಕಾಗಿ ಚಿಂತನೆಗಳು ಪ್ರೇರಣಾದಾಯಕವಾಗಿವೆ ಎಂದು ತಿಳಿಸಿದರು.ಈ ವೇಳೆ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ಶಿರಸ್ತೇದಾರ ಸುಭಾಸ ವಡವಡಗಿ, ವ್ಹಿ.ಐ.ಕಟ್ಟಿಮನಿ, ಮಲ್ಲಿಕಾರ್ಜುನ ತುಪ್ಪದ, ಆಕಾಶ ಉದಗಟ್ಟಿ, ಸಿದ್ದು ಸರೋರ, ನವೀನ ಮಾನುಟಗಿ, ಮಹಾನಂದಾ ಮಠ, ಶಿವಕುಮಾರ ಅಚನೂರ ಸೇರಿ ಕಚೇರಿ ಸಿಬ್ಬಂದಿ ಹಾಜರಿದ್ದರು.