ಕೊಡಗು ಜಿಲ್ಲೆಯ ನಾಪೋಕ್ಲು ‘ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್’ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಗೌರವಕ್ಕೆ ಭಾಜನವಾಗಿದೆ.
ನಾಪೋಕ್ಲು : ಕೊಡಗು ಜಿಲ್ಲೆಯ ನಾಪೋಕ್ಲು ‘ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್’ ರಾಷ್ಟ್ರೀಯ ಮಟ್ಟದಲ್ಲಿ ಅತ್ಯುನ್ನತ ಗೌರವಕ್ಕೆ ಭಾಜನವಾಗಿದೆ.
ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ‘ಭಾರತೀಯ ಕೈಗಾರಿಕಾ ಒಕ್ಕೂಟ’ದ ಎಫ್ ಪಿ ಓ ಎಕ್ಸಲೆನ್ಸ್ ಪ್ರಶಸ್ತಿ ಸಮಾರಂಭದಲ್ಲಿ, ಈ ಸಂಸ್ಥೆಯು ‘ತಂತ್ರಜ್ಞಾನ ಮತ್ತು ಸುಸ್ಥಿರತೆ’ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಜಿಲ್ಲೆಗೆ ಹೆಮ್ಮೆ ತಂದಿದೆ. ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಎ.ಕೆ. ಮುತ್ತಪ್ಪ ಹಾಗೂ ಕೆ. ರತ್ನ ಚರ್ಮಣ ಈ ಗೌರವ ಸ್ವೀಕರಿಸಿದರು.ಈ ಪ್ರಶಸ್ತಿ ಸಮಾರಂಭದಲ್ಲಿ ತಮಿಳುನಾಡಿನಲ್ಲಿ ಈಶಾ ಔಟ್ರೀಚ್ ಬೆಂಬಲಿತ ಇನ್ನು ಎರಡು ರೈತ ಉತ್ಪಾದಕ ಸಂಸ್ಥೆಗಳು ಪ್ರಶಸ್ತಿ ಪಡೆದಿವೆ: