ವ್ಯಾಜ್ಯ ರಹಿತ ಸಮಾಜ ನಿರ್ಮಾಣಕ್ಕೆ ರಾಷ್ಟ್ರೀಯ ಲೋಕ ಅದಾಲತ್ ಸಹಕಾರಿಯಾಗಿದ್ದು, ಅದರಿಂದ ಸುಂದರ, ಸದೃಢ ಸಮಾಜ ಕಟ್ಟಲು ಸಾಧ್ಯವಿದೆ. ಅಲ್ಲದೆ ಮೌಲ್ಯಾಧಾರಿತ ಬದುಕು ನಡೆಸಲು ಮಾರ್ಗದರ್ಶಿಯಾಗಿದೆ ಎಂದು ಹಿರಿಯ ನ್ಯಾಯಾಲಯದ ನ್ಯಾಯಾಧೀಶ ಸುನೀಲ ಎಸ್. ತಳವಾರ ಹೇಳಿದರು.

ಶಿಗ್ಗಾಂವಿ:ವ್ಯಾಜ್ಯ ರಹಿತ ಸಮಾಜ ನಿರ್ಮಾಣಕ್ಕೆ ರಾಷ್ಟ್ರೀಯ ಲೋಕ ಅದಾಲತ್ ಸಹಕಾರಿಯಾಗಿದ್ದು, ಅದರಿಂದ ಸುಂದರ, ಸದೃಢ ಸಮಾಜ ಕಟ್ಟಲು ಸಾಧ್ಯವಿದೆ. ಅಲ್ಲದೆ ಮೌಲ್ಯಾಧಾರಿತ ಬದುಕು ನಡೆಸಲು ಮಾರ್ಗದರ್ಶಿಯಾಗಿದೆ ಎಂದು ಹಿರಿಯ ನ್ಯಾಯಾಲಯದ ನ್ಯಾಯಾಧೀಶ ಸುನೀಲ ಎಸ್. ತಳವಾರ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಅವರು ಮಾತನಾಡಿ, ವ್ಯಾಜ್ಯಗಳನ್ನು ಬಿಟ್ಟು ಪರಸ್ಪರ ಒಬ್ಬರಿಗೆ ಒಬ್ಬರು ಸಹಕಾರದಿಂದ ಬಾಳಬೇಕು ಎಂದು ಸಲಹೆ ನೀಡಿದರು.ಹಿರಿಯ ನ್ಯಾಯಾಲಯದಲ್ಲಿ ಬಾಕಿ ಇರುವ ೨೫೧ ಪ್ರಕರಣದಲ್ಲಿ ೨೪೫ ಪ್ರಕರಣಗಳು ರಾಜಿಯಾಗಿವೆ. ಅದೇ ರೀತಿ ವ್ಯಾಜ್ಯ ಪೂರ್ವ ೨೧೫೯ ಪ್ರಕರಣದಲ್ಲಿ ೧೨೨೦ ಪ್ರಕರಣಗಳನ್ನು ರಾಜಿ ಮಾಡಲಾಗಿದೆ ಎಂದು ತಿಳಿಸಿದರು.ಕಿರಿಯ ನ್ಯಾಯಾಲಯದ ನ್ಯಾಯಾಧೀಶೆ ಅಶ್ವಿನಿ ಚಂದ್ರಕಾಂತ ಮಾತನಾಡಿ, ಪತಿ, ಪತ್ನಿ ಹೊಂದಾಣಿಕೆ ಜೀವನದಿಂದ ಇಡೀ ಕುಟುಂಬ ಉತ್ತಮವಾಗಿರಲು ಸಾಧ್ಯವಿದೆ. ಅದಕ್ಕೆ ಕಾನೂನಿನ ಅರಿವು ಪಡೆಯುವುದು ಮುಖ್ಯ. ಕಾನೂನಿನ ನಿಯಮಗಳನ್ನು ಪಾಲಿಸುವುದು ಅಗತ್ಯ ಎಂದರು.ಕಿರಿಯ ನ್ಯಾಯಾಲಯದಲ್ಲಿ ಬಾಕಿ ಇರುವ ೩೯೨ ಪ್ರಕರಣಗಳಲ್ಲಿ ೩೮೨ ರಾಜಿಯಾಗಿವೆ. ಅದೇ ರೀತಿ ವ್ಯಾಜ್ಯ ಪೂರ್ವ ೨೪೧೫ ಪ್ರಕರಣದಲ್ಲಿ ೧೩೮೮ ಪ್ರಕರಣಗಳನ್ನು ರಾಜಿ ಮಾಡಲಾಗಿದೆ ಎಂದು ಹೇಳಿದರು.ಇದೇ ವೇಳೆ ವಿಚ್ಛೇದನ ಕೋರಿ ದಾಖಲಾದ ೪ ಪ್ರಕರಣಗಳ ಪತಿ, ಪತ್ನಿಯರನ್ನು ಒಂದು ಮಾಡಲಾಯಿತು.ವಕೀಲರಾದ ಕೆ.ಎನ್.ಭಾರತಿ, ಸಂತೋಷ ಪಾಟೀಲ, ಕೆ.ಎಸ್. ಧರ್ಮಪ್ಪನವರ, ಎನ್.ಎನ್. ಪಾಟೀಲ, ಸಿ.ಎಫ್. ಅಂಗಡಿ, ಎಸ್.ಎಸ್. ಪೂಜಾರ ದಂಪತಿಗಳ ವ್ಯಾಜ್ಯವನ್ನು ರಾಜೀ ಸಂಧಾನ ಮಾಡಲು ಸಹಕರಿಸಿದರು. ತಾಲೂಕು ವಕೀಲರಾದ ಸಂಘದ ಎಲ್ಲ ಸದಸ್ಯರು, ವಕೀಲರು ಇದ್ದರು.