ಕನಕಪುರ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 121ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಕೊಟ್ಟಗಾಳಿನ ಸಂಗಮ ಪ್ರೌಢಶಾಲಾ ಆವರಣದಲ್ಲಿ ಆಚರಿಸಿ ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕನಕಪುರ: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 121ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ಕೊಟ್ಟಗಾಳಿನ ಸಂಗಮ ಪ್ರೌಢಶಾಲಾ ಆವರಣದಲ್ಲಿ ಆಚರಿಸಿ ಕುವೆಂಪು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.

ಕರ್ನಾಟಕ ವಿಕಾಸರಂಗ ಜಿಲ್ಲಾಧ್ಯಕ್ಷ ಆರ್.ವಿ.ನಾರಾಯಣ್ ಮಾತನಾಡಿ, ಸಮಾಜದಲ್ಲಿ ವೈಚಾರಿಕೆ ಪ್ರಜ್ಞೆ ಮೂಡಿಸಿದ ಕುವೆಂಪು ಅವರ ಅಘಾದ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಆಡು ಮುಟ್ಟದ ಸೊಪ್ಪಿಲ್ಲ, ಕುವೆಂಪು ಬರೆಯದ ಸಾಹಿತ್ಯವಿಲ್ಲ ಎಂಬುವುದು ಸಾಹಿತ್ಯ ಕ್ಷೇತ್ರದಲ್ಲಿ ಜನಜನಿತ. ಯುಗದ ಕವಿ ಎನಿಸಿಕೊಂಡಿದ್ದ ಅವರನ್ನು ಕೇವಲ ಕವಿ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ, ಅವರೊಬ್ಬ ಸಾಮಾಜಿಕ ತತ್ವಜ್ಞಾನಿ, ಮಾನವತಾವಾದಿ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿಮಾನವ ನನ್ನು ವಿಶ್ವ ಮಾನವ ಮಾಡಬೇಕೆಂಬುದು ಕುವೆಂಪುರವರ ಕನಸಾಗಿತ್ತು. ಕುವೆಂಪು ಒಬ್ಬ ರಾಷ್ಟಕವಿ ಅವರು ತಮ್ಮ ಆಲೋಚನೆಗಳನ್ನು ಸಾಹಿತ್ಯ ಹಾಗೂ ಕೃತಿಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.

ಸಾತನೂರಿನ ಆರ್.ಎಚ್.ಎಸ್ ಶಾಲೆಯ ಮುಖ್ಯ ಉಪಾಧ್ಯಾಯ ಟಿವಿಎನ್. ಪ್ರಸಾದ್ ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ಸಿ.ಗೋವಿಂದರಾಜು, ಸರ್ಕಾರಿ ಪ್ರೌಡಶಾಲಾ ಮುಖ್ಯಶಿಕ್ಷಕ ಶಂಕರಮೂರ್ತಿ ಗ್ರಂಥಪಾಲಕ ರಾಜೇಶ್, ಕನಕಪುರ ಆರ್‌ಜಿಹೆಚ್‌ಎಸ್‌ ಶಾಲೆ ಉಪಾಧ್ಯಾಯ ನಾಗರಾಜು ಪಿಯು ಕಾಲೇಜು ಆಡಳಿತ ಅಧಿಕಾರಿ ರಾಮಚಂದ್ರೇಗೌಡ ಇತರರಿದ್ದರು.

ಕೆ ಕೆ ಪಿ ಸುದ್ದಿ 02: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಷ್ಟ್ರ ಕವಿ ಕುವೆಂಪು ದಿನಾಚರಣೆ.