ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವತಿಯಿಂದ ತೀವ್ರಗೊಳಿಸಿದ ಐಇಸಿ ಅಭಿಯಾನದ ಅಂಗವಾಗಿ ಮ್ಯಾರಥಾನ್ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವು ಶನಿವಾರ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು.
ಮಡಿಕೇರಿ : ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ವತಿಯಿಂದ ತೀವ್ರಗೊಳಿಸಿದ ಐಇಸಿ ಅಭಿಯಾನದ ಅಂಗವಾಗಿ ಮ್ಯಾರಥಾನ್ ಕಾರ್ಯಕ್ರಮ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವು ಶನಿವಾರ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಸ್ಮಯಾ ಚಕ್ರವರ್ತಿ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್‌ಕುಮಾರ್ ಉದ್ಘಾಟಿಸಿದರು.ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್ ಕುಮಾರ್ ಅವರು ಮಾತನಾಡಿ ಮ್ಯಾರಥಾನ್ ಅಂತಹ ಕ್ರೀಡಾ ಚಟುವಟಿಕೆಗಳ ಮೂಲಕ ಯುವಜನರಲ್ಲಿ ಎಚ್‌ಐವಿ/ಏಡ್ಸ್ ಕುರಿತು ಜಾಗೃತಿ ಮೂಡಿಸುವುದು, ಎಚ್‌ಐವಿ ಸೋಂಕಿನ ಹರಡುವಿಕೆ ತಡೆಗಟ್ಟುವ ಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಎಚ್‌ಐವಿ/ಏಡ್ಸ್ ಸಂಬಂಧಿತ ಲಭ್ಯವಿರುವ ಸೇವೆಗಳ ಕುರಿತು ಮಾಹಿತಿ ನೀಡುವುದು ಈ ತೀವ್ರಗೊಳಿಸಿದ ಐಇಸಿ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.ತರಬೇತುದಾರರಾದ ಆಂಟನಿ ಡಿಸೋಜಾ ಅವರು ಯುವಜನರಲ್ಲಿ ಎಚ್‌ಐವಿ ತಡೆಗಟ್ಟುವಿಕೆಯ ಮಹತ್ವದ ಕುರಿತು ಮಾತನಾಡಿದರು.
ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಮಹತ್ವ ಹಾಗೂ ಭಾರತೀಯ ಹಾಕಿ ದಿಗ್ಗಜ ಮೇಜರ್ ಧ್ಯಾನ್‌ಚಂದ್ ಅವರ ಕ್ರೀಡಾ ಸಾಧನೆಯನ್ನು ಸ್ಮರಿಸಿದರು.ತಾಲೂಕು ಆರೋಗ್ಯಾಧಿಕಾರಿ ಡಾ.ಸುನಿಲ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಧನಂಜಯ ಮತ್ತು ಉತ್ತಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ, ಆಂಟನಿ ಡಿಸೋಜಾ, ಬಿಂದಿಯಾ ಹಾಗೂ ಮಹಾಬಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ತರಬೇತುದಾರರು ರಮೇಶ್, ಅಂತಾರಾಷ್ಟ್ರೀಯ ಹಿರಿಯ ಬ್ಯಾಡ್ಮಿಂಟನ್ ಕ್ರೀಡಾಪಟು ಜ್ಯೋತಿ ಸೋಮಯ್ಯ ಉಪಸ್ಥಿತರಿದ್ದರು.ಜಿಲ್ಲಾ ಮೇಲ್ವಿಚಾರಕರಾದ ಸುನೀತ ಮುತ್ತಣ್ಣ, ಮಲ್ಲೇಶ್, ಅರುಣ್ ಕೌನ್ಸೆಲರ್ ಹಾಗೂ ಉಷಾ, ಡಿಎಪಿಸಿಯು ಕಮಲ, ಸಿಬ್ಬಂದಿ ಭಾಗವಹಿಸಿದ್ದರು.
ಮ್ಯಾರಥಾನ್ ಸ್ಪರ್ಧೆಯ ವಿಜೇತರು: ಬಾಲಕರ ವಿಭಾಗದಲ್ಲಿ ಪ್ರಥಮ ಬಹುಮಾನ ಪ್ರಸನ್ನ ಎಚ್.ಜಿ.– ಕಾವೇರಿ ಕಾಲೇಜು, ವಿರಾಜಪೇಟೆ, ದ್ವಿತೀಯ ಬಹುಮಾನ– ದರ್ಶನ್, ಕಾವೇರಿ ಕಾಲೇಜು, ವಿರಾಜಪೇಟೆ, ತೃತೀಯ ಬಹುಮಾನ ಸುಮನ್ ಬೆಳ್ಳಿಯಪ್ಪ , ಸರ್ಕಾರಿ ಪಾಲಿಟೆಕ್ನಿಕ್, ಕುಶಾಲನಗರ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಬಹುಮಾನ ದೀಪಾ ಕೆ.ಎಸ್., ಕಾವೇರಿ ಕಾಲೇಜು, ಗೋಣಿಕೊಪ್ಪ, ದ್ವಿತೀಯ ಬಹುಮಾನ – ರಶ್ಮಿತಾ ಎ.ಆರ್. – ಸರ್ಕಾರಿ ಮಹಿಳಾ ಕಾಲೇಜು, ಮಡಿಕೇರಿ, ತೃತೀಯ ಬಹುಮಾನ – ಚಶಿಮಿತಾ – ಕಾವೇರಿ ಕಾಲೇಜು, ವಿರಾಜಪೇಟೆ