ಪರಿಸರ ನಾಶದಿಂದ ಪ್ರಕೃತಿ ವಿಕೋಪ

| Published : Jun 09 2025, 03:21 AM IST

ಸಾರಾಂಶ

ಅತಿಯಾದ ಪರಿಸರ ನಾಶದಿಂದ ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಅರಣ್ಯ ಸಂಪತ್ತು ಹಾಳು ಮಾಡುತ್ತಾ ಹೋದರೆ ಮಾನವ ಸಂಕುಲಕ್ಕೆ ನಿರ್ಮಲ ಗಾಳಿಯ ಸಮಸ್ಯೆಯಾಗುತ್ತದೆ

ಯಲಬುರ್ಗಾ: ಪ್ರತಿಯೊಬ್ಬರು ಸಸಿ ನೆಡುವ ಜತೆಗೆ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜೆ. ರಂಗಸ್ವಾಮಿ ಹೇಳಿದರು.

ಪಟ್ಟಣದ ನ್ಯಾಯಾಲಯ ಆವರಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಅತಿಯಾದ ಪರಿಸರ ನಾಶದಿಂದ ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಅರಣ್ಯ ಸಂಪತ್ತು ಹಾಳು ಮಾಡುತ್ತಾ ಹೋದರೆ ಮಾನವ ಸಂಕುಲಕ್ಕೆ ನಿರ್ಮಲ ಗಾಳಿಯ ಸಮಸ್ಯೆಯಾಗುತ್ತದೆ. ಇದರಿಂದ ಉಸಿರಾಟ ತೊಂದರೆ ಅನುಭವಿಸಲಾಗುತ್ತದೆ. ಹಸಿರೀಕರಣದಿಂದ ಶುದ್ಧ ಗಾಳಿ, ಆರೋಗ್ಯವಂತ ಬದುಕು ಕಾಣಬಹುದು ಎಂದರು.

ಸಿವಿಲ್ ನ್ಯಾಯಾಧೀಶ ಸಂಜುಕುಮಾರ್ ಪಚ್ಚೆಪೂರೆ ಮಾತನಾಡಿ, ಸುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವ ಜತೆಗೆ ಗಿಡ-ಮರ ಬೆಳೆಸುವ ಜವಾಬ್ದಾರಿ ಬೆಳೆಸಕೊಳ್ಳಬೇಕು. ಹಸಿರೇ ಉಸಿರು ಎನ್ನುವ ಪರಿಪಾಠ ಬೆಳೆಸಿಕೊಳ್ಳಬೇಕು ಎಂದರು.

ವಕೀಲರ ಸಂಘದ ತಾಲೂಕು ಅಧ್ಯಕ್ಷ ಎಸ್.ಎಸ್. ಹೊಂಬಳ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಸಹಾಯಕ ಸರ್ಕಾರಿ ಅಭಿಯೋಜಕ ರವಿ ಹುಣಸಿಮರ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಸವರಾಜ ಗೋಗೇರಿ, ವಕೀಲರಾದ ಸಿ.ಎಸ್. ಬನ್ನಪ್ಪಗೌಡ್ರು, ಹಸನ್‌ಸಾಬ್ ನದಾಫ್, ಎಸ್.ಸಿ. ಗದಗ, ಎಚ್.ಎಚ್. ಹಿರೇಮನಿ, ಐ.ಬಿ. ಕೋಳೂರು, ಭರಮಗೌಡ ಪಾಟೀಲ್, ಅಮರೇಶ, ಎ.ಎಂ. ಪಾಟೀಲ್, ನ್ಯಾಯಾಲಯದ ಶಿರಸ್ತೆದಾರ ಲೋಕೇಶ, ಜ್ಯೋತಿ, ಸಿಬ್ಬಂದಿ ರಾಘವೇಂದ್ರ ಕೋಳಿಹಾಳ, ವಿನಾಯಕ ಸೇರಿದಂತೆ ಮತ್ತಿತರರಿದ್ದರು.