ಸಾರಾಂಶ
ನಮ್ಮ ಜೀವನ ಅತ್ಯಂತ ಮೌಲ್ಯವಾದದ್ದು. ನಾವು ಕೆಲವೇ ಕೆಲಸಗಳಿಗೆ ಸೀಮಿತವಾಗದೆ ಗಿಡ ನೆಟ್ಟು ಬೆಳೆಸುವ ಮಹತ್ವ ಅರಿಯಬೇಕು.
ಯಲ್ಲಾಪುರ: ಪ್ರಕೃತಿ ಮಧ್ಯ ನಾವು ಬದುಕುತ್ತಿದ್ದೇವೆ. ಪ್ರತಿ ಗಿಡ ಭಗವಂತನ ಸೃಷ್ಟಿ. ಅದನ್ನು ಆರಾಧಿಸಿದಾಗ ಜೀವನದಲ್ಲಿ ಸಂತಸ ನೆಮ್ಮದಿಯನ್ನು ಪಡೆಯಬಹುದು ಎಂದು ತಾಲೂಕಿನ ಜಂಬೆಸಾಲಿನ ಕೃಷಿ ಸಖಿ ಪ್ರಶಸ್ತಿ ಪುರಸ್ಕೃತ ಶ್ರೀಲತಾ ರಾಜೀವ ತಿಳಿಸಿದರು.
ಸೆ. 1ರಂದು ಎಪಿಎಂಸಿ ಆವಾರದ ಶ್ರೀಮಾತಾ ಟ್ರೇಡಿಂಗ್ ಕಂಪನಿಯ ಸೇಲ್ ಯಾರ್ಡನಲ್ಲಿ, ಶ್ರೀತ್ರಿಪುರಾಂಬಿಕಾ ಮಹಿಳಾ ಒಕ್ಕೂಟ, ಶ್ರೀಮತಾ ಕಂಪನಿ ಹಾಗೂ ಮಾತ್ರ ಮಂಡಳಿಯವರ ಸಹಯೋಗದಲ್ಲಿ ಸಸ್ಯ ಸಂಭ್ರಮ- 24 ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಶ್ರದ್ಧೆಯಿಂದ ಗಿಡಗಳನ್ನು ಬೆಳೆಸಿದರೆ ಅದು ಜೀವನದ ಸಾಧನೆಗೆ ಕಾರಣವಾಗುತ್ತದೆ ಎಂದರು.ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಜೀವನ ಅತ್ಯಂತ ಮೌಲ್ಯವಾದದ್ದು. ನಾವು ಕೆಲವೇ ಕೆಲಸಗಳಿಗೆ ಸೀಮಿತವಾಗದೆ ಗಿಡ ನೆಟ್ಟು ಬೆಳೆಸುವ ಮಹತ್ವ ಅರಿಯಬೇಕು ಎಂದರು.
ಸನ್ಮಾನ ಸ್ವೀಕರಿಸಿದ ಗಿರಿಜಾ ಗುರುಪ್ರಸಾದ್ ಮಾತನಾಡಿ, ನನ್ನ ಪತಿ ತೀವ್ರ ಅನಾರೋಗ್ಯಕ್ಕೀಡಾದಾಗ ಧೈರ್ಯದಿಂದ ಹಲವು ರೀತಿ ತಿಂಡಿ- ತಿನಿಸುಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದ್ದೆ. ಇಂದು ಚಪಾತಿ, ರೊಟ್ಟಿಗಳನ್ನು ಮಾಡಲು ವಿದ್ಯುತ್ ಯಂತ್ರ ಅಳವಡಿಸಿ ಈ ಮಟ್ಟಕ್ಕೆ ಬಂದಿದ್ದೇನೆ ಎಂದರು.ಶ್ರೀಮಾತಾ ಕಂಪನಿಯ ಬಾಗಿದಾರ ಶ್ರೀಪಾದ್ ಮಣ್ಣಮನೆ ಶುಭ ಹಾರೈಸಿದರು. ಉತ್ತಮ ಗಿಡ ಬೆಳೆಸಿದ ಗೀತಾ ಭಟ್ ಆನಗೋಡ ಪ್ರಥಮ, ಶ್ವೇತಾ ಗೇರಗದ್ದೆ ದ್ವಿತೀಯ, ಪ್ರೇಮ ಹೆಗ್ಗಾರ್ ಹಾಗೂ ರಶ್ಮಿ ಹೆಗಡೆ ಕುಂಬ್ರಿ ತೃತೀಯ ಬಹುಮಾನ ಹಂಚಿಕೊಂಡರು.
ಸಂಸ್ಥೆಯ ಕಾರ್ಯದರ್ಶಿ ಗಾಯತ್ರಿ ಬೋಳುಗುಡ್ಡೆ ಸ್ವಾಗತಿಸಿದರು. ಅಧ್ಯಕ್ಷ ಜಾನವಿ ಮಣ್ಣಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಧ್ಯಾ ಕೊಂಡದಕುಳಿ ನಿರ್ವಹಿಸಿ, ವಂದಿಸಿದರು.ಶ್ರೀರಂಗ ಕಟ್ಟಿ, ವಿ.ಎಸ್. ಭಟ್ಟ, ಶಾಂತಲಾ ಹೆಗಡೆ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಕವಿತಾ ಬೋಳುಗುಡ್ಡೆ ಸನ್ಮಾನ ಪತ್ರ ವಾಚಿಸಿದರು.