ಸಾರಾಂಶ
ವಿರಾಜಪೇಟೆ ಸಮೀಪ ಅರ್ಜಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಹ್ಯೂಮನ್ ಸೊಸೈಟಿ ಇಂಟರ್ ನ್ಯಾಷನಲ್ ಎಂಬ ಎನ್‌ಜಿಓ ಸಂಸ್ಥೆ ನಿರ್ಮಿಸಿದ ಮಾನವ ವನ್ಯಜೀವಿ ಸಂಘರ್ಷದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಿರುಚಿತ್ರ ಹಾಗೂ ಪೋಸ್ಟರ್ ಬಿಡುಗಡೆಗೊಂಡಿತು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಮಕ್ಕಳಿಗೆ ವಿಜ್ಞಾನದ ಪ್ರಯೋಗ ಶಾಲೆ ಆಯಾ ಶಾಲೆಗಳಲ್ಲಿ ಇರುತ್ತದೆ. ಆದರೆ ಪ್ರಕೃತಿಗೆ ಪ್ರಕೃತಿಯೇ ಪ್ರಯೋಗಶಾಲೆಯಾಗಿದೆ ಎಂದು ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದ್ದಾರೆ.ವಿರಾಜಪೇಟೆ ಸಮೀಪ ಅರ್ಜಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಹ್ಯೂಮನ್ ಸೊಸೈಟಿ ಇಂಟರ್ ನ್ಯಾಷನಲ್ ಎಂಬ ಎನ್‌ಜಿಓ ಸಂಸ್ಥೆ ನಿರ್ಮಿಸಿದ ಮಾನವ ವನ್ಯಜೀವಿ ಸಂಘರ್ಷದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕಿರುಚಿತ್ರ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಕಾಡು ನೋಡುವ ವನ್ಯಜೀವಿಗಳನ್ನು ನೋಡುವ ಹಾಗೂ ಅರಣ್ಯದೊಳಗೆ ಚಿತ್ರ ಬಿಡಿಸುವ ಇಂತಹ ತರಗತಿಯನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು. ರಾಜ್ಯದಲ್ಲಿ 6395 ಕಾಡಾನೆಗಳಿದ್ದು ದೇಶದಲ್ಲಿ ಅತಿ ಹೆಚ್ಚು ಕಾಡಾನೆಗಳನ್ನು ರಾಜ್ಯ ಹೊಂದಿದೆ. ಕೊಡಗು ಜಿಲ್ಲೆಯಲ್ಲಿ ಸುಮಾರು 200 ಕಾಡಾನೆಗಳಿವೆ. ಹಾಗೆಯೇ ರಾಜ್ಯದಲ್ಲಿ 563 ಹುಲಿ ಇವೆ ಎಂದು ವಿವರಿಸಿದರು.ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅರಣ್ಯ ಸಚಿವಾಲಯ ಅರಣ್ಯದ ಸುತ್ತಲಿರುವ ರೈತರು, ಕಾರ್ಮಿಕರು, ನಾಗರಿಕರನ್ನು ಮಾನವ ವನ್ಯಪ್ರಾಣಿ ಸಂಘರ್ಷಕ್ಕೆ ಪರಿಹಾರ ಕಂಡುಹಿಡಿಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ವಿರಾಜಪೇಟೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ, ಈ ಕಿರುಚಿತ್ರ ಒಳ್ಳೆಯ ಸಂದೇಶ-ಜಾಗೃತಿಯನ್ನು ಸಮಾಜಕ್ಕೆ ನೀಡುತ್ತದೆ. ಎಲ್ಲರೂ ಪ್ರಕೃತಿಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮಕ್ಕೂ ಮುನ್ನ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.
ವಿರಾಜಪೇಟೆ ವಲಯ ಅರಣ್ಯಾಧಿಕಾರಿ ಶಿವರಾಮ್, ಶಾಲಾ ಪ್ರಾಂಶುಪಾಲ ಮಮತಾ, ಹ್ಯೂಮನ್ ಸೊಸೈಟಿ ಪ್ರತಿನಿಧಿಗಳಾದ ವಿನೋದ್ ಮತ್ತು ಅನುಷಾ ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))