ನವರಾತ್ರಿಯಲ್ಲಿ ನವದುಗೆರ್ಯರ ಆರಾಧನೆ ಎಲ್ಲೆಡೆ ನಡೆಯುತ್ತಿದ್ದರೆ ಸೇವೆಯಲ್ಲಿ ಸದಾ ಸಕ್ರಿಯರಾಗಿದ್ದು ಪ್ರಚಾರದಿಂದ ದೂರ ಉಳಿದ ನಾರೀ ಶಕ್ತಿಯ ಆರಾಧನೆಯ ಮೂಲಕ ಮೂಡುಬಿದಿರೆ ರೋಟರಿ ಕ್ಲಬ್ ಗಮನ ಸೆಳೆದಿದೆ.

ಮೂಡುಬಿದಿರೆ: ನವರಾತ್ರಿಯಲ್ಲಿ ನವದುಗೆರ್ಯರ ಆರಾಧನೆ ಎಲ್ಲೆಡೆ ನಡೆಯುತ್ತಿದ್ದರೆ ಸೇವೆಯಲ್ಲಿ ಸದಾ ಸಕ್ರಿಯರಾಗಿದ್ದು ಪ್ರಚಾರದಿಂದ ದೂರ ಉಳಿದ ನಾರೀ ಶಕ್ತಿಯ ಆರಾಧನೆಯ ಮೂಲಕ ಮೂಡುಬಿದಿರೆ ರೋಟರಿ ಕ್ಲಬ್ ಗಮನ ಸೆಳೆದಿದೆ. ಸರಣಿಯ ಏಳನೇ ಅಚ್ಚರಿಯ ಆಯ್ಕೆ ಎಂಬಂತೆ ಮೂಡುಬಿದಿರೆ ರೋಟರಿ ಜಿ.ವಿ.ಪೈ ಡಯಾಲಿಸೀಸ್ ಯುನಿಟ್ ನ ಟೆಕ್ನೀಶಿಯನ್ ಸಹಾಯಕಿ ನಿರೀಕ್ಷಿತಾ ಪೂಜಾರಿ ಅವರನ್ನು ರೋಟರಿ ತಂಡ ಗೌರವಿಸಿತು. ಅತ್ಯಂತ ಮಿತದರದಲ್ಲಿ ಸೇವಾಮನೋಭಾವದೊಂದಿಗೆ ಕಾರ್ಯನಿರ್ವಹಿಸುತ್ತಿರುವ ರೋಟರಿ ಜಿ.ವಿ.ಪೈ ಡಯಾಲಿಸೀಸ್ ಸೆಂಟರ್ ನಲ್ಲಿ ಚಿಕಿತ್ಸೆಯ ನಿರ್ವಹಣೆಯಲ್ಲಿ ಗಮನಾರ್ಹ ಸೇವೆಯ ಮೂಲಕ ನಿರೀಕ್ಷಿತಾ ಪೂಜಾರಿ ಅವರ ಬಳಗ ಗಮನ ಸೆಳೆಯುವ ಸಾಧನೆ ದಾಖಲಿಸುತ್ತಿರುವ ಹಿನ್ನೆಲೆಯಲ್ಲಿ ಈ ಗೌರವ ನೀಡಲಾಗಿದೆ.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ಡಾ. ಆಶೀರ್ವಾದ್, ಸಹಾಯಕ ಗವರ್ನರ್ ಶ್ರೀ ಕಾಂತ್ ಕಾಮತ್, ಜಿ.ವಿ.ಪೈ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಹರೀಶ್ ನಾಯಕ್, ಮುಂಬೈನ ಪ್ರಕಾಶ್ ಪೈ, ರೋಟರಿ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ನಾರಾಯಣ ಪಿ.ಎಂ. ಸಹಿತ ರೋಟರಿ ಸದಸ್ಯರು ಹಾಜರಿದ್ದರು.

ರಾಂ ಪ್ರಸಾದ್ ಕೆಫೆಯ ಬಿ.ಪದ್ಮಿನಿ ಪೈ , ಮಾರ್ನಾಡಿನ ತ್ಯಾಜ ವಿಲೇವಾರಿ ವಾಹನ ಚಾಲಕಿ ಶ್ವೇತಾ, ಆಲಂಗಾರು ನಿವಾಸಿ ಮುಶಿದಾ ಅವರಿಗೆ ಚಿಕಿತ್ಸಾ ನೆರವು, ವಿಶ್ರಾಂತ ಅಂಗನವಾಡಿ ಶಿಕ್ಷಕಿ ಭಾರತಿ ವೈ ಜೈನ್, ಅಂಗನವಾಡಿ ವಿಶ್ರಾಂತ ಸಹಾಯಕಿ ಲೀಲಾ ಪೂಜಾರ್ತಿ, ಪತ್ರಕರ್ತೆ ಪ್ರೇಮಶ್ರೀ ಕಲ್ಲಬೆಟ್ಟು ಅವರನ್ನು ಈವರೆಗೆ ಗೌರವಿಸಲಾಗಿದೆ.