ಈ ಬಾರಿ ೧೧ ದಿನಗಳ ಕಾಲ ಮೇಲುಕೋಟೆ ವಿದ್ಯುತ್ ಅಲಂಕಾರ ಮತ್ತು ಅ.೧೬ ರಿಂದ ೧೯ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅ.೨೧ರಂದು ವಿಜಯದಶಮಿ ದಿನದಂದು ಶ್ರೀ ಚಲುವನಾರಾಯಣಸ್ವಾಮಿಗೆ ಜಂಬೂಸವಾರಿ, ಪೊಲೀಸ್ ವಂದನೆ ಹಾಗೂ ಜಾನಪದ ಕಲಾತಂಡಗಳೊಂದಿಗೆ ವೈಭವದಿಂದ ಉತ್ಸವ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಭೂ ಲೋಕದ ವೈಕುಂಠವೆಂದೇ ಪ್ರಸಿದ್ಧಿ ಪಡೆದಿರುವ ಮೇಲುಕೋಟೆಯಲ್ಲಿ ಧಾರ್ಮಿಕ ಕಾರ್ಯಕ್ರಮವಾಗಿ ನಡೆದುಕೊಂಡು ಬರುತ್ತಿದ್ದ ನವರಾತ್ರಿ ಉತ್ಸವಕ್ಕೆ ಇದೇ ಮೊದಲ ಬಾರಿಗೆ ಹೆಚ್ಚಿನ ವೈಭವ ನೀಡಲಾಗುತ್ತಿದೆ ಎಂದು ಮೇಲುಕೋಟೆ ಶ್ರೀ ಚಲುವನಾರಾಯಣಸ್ವಾಮಿ ಸಮೂಹ ದೇವಾಲಯಗಳ ವ್ಯವಸ್ಥಾಪನಾ ಸಮಿತಿಯ ಕೆ.ಸಿ.ಪರಮೇಶ್ಗೌಡ ತಿಳಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ ಮೇರೆಗೆ ಜಿಲ್ಲಾಡಳಿತದ ಸಹಕಾರದಲ್ಲಿ ವಿಜೃಂಭಣೆಯಿಂದ ನವರಾತ್ರಿ ಉತ್ಸವ ನಡೆಸಲು ಸನ್ನದ್ಧವಾಗಿದ್ದು, ಈ ಬಾರಿ ೧೧ ದಿನಗಳ ಕಾಲ ಮೇಲುಕೋಟೆ ವಿದ್ಯುತ್ ಅಲಂಕಾರ ಮತ್ತು ಅ.೧೬ ರಿಂದ ೧೯ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಅ.೨೧ರಂದು ವಿಜಯದಶಮಿ ದಿನದಂದು ಶ್ರೀ ಚಲುವನಾರಾಯಣಸ್ವಾಮಿಗೆ ಜಂಬೂಸವಾರಿ, ಪೊಲೀಸ್ ವಂದನೆ ಹಾಗೂ ಜಾನಪದ ಕಲಾತಂಡಗಳೊಂದಿಗೆ ವೈಭವದಿಂದ ಉತ್ಸವ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅ.೧೬ಂದು ಹರಟೆ ಖ್ಯಾತಿಯ ಪ್ರೊ.ಕೃಷ್ಣೇಗೌಡ, ಮೈಸೂರು ಕಥೆಗಳು ಖ್ಯಾತಿಯ ಧರ್ಮೇಂದ್ರಕುಮಾರ್ ಅವರಿಂದ ಹಾಸ್ಯ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ಅ.೧೭ರಂದು ಪಾಂಡವಪುರ ವಿಜಯ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಅ.೧೮ರಂದು ವಿದ್ವಾನ್ ವಿಷ್ಣು ವೆಂಕಟೇಶ್ರವರಿಂದ ಮ್ಯಾಂಡಲೀನ್ ವಾದ್ಯಗೋಷ್ಠಿ, ಅ.೧೯ರಂದು ಖ್ಯಾತ ಹರಿಕಥೆ ಕಲಾವಿದ ಶಿವಾರ ಉಮೇಶ್ ತಂಡದವರಿಂದ ಹಾಡುಗಾರಿಕೆ, ಅ.೨೧ರಂದು ಶ್ರೀ ಚಲುವನಾರಾಯಣಸ್ವಾಮಿ ಉತ್ಸವ, ಮೂಲ ಮೂರ್ತಿಗಳಿಗೆ ಮಹಾರಾಜರ ಅಲಂಕಾರ, ವಿಜೃಂಭಣೆಯ ಕಲಾತಂಡಗಳೊಂದಿಗೆ ಜಂಬೂಸವಾರಿ ನೆರವೇರಲಿದೆ. ಪ್ರತಿನಿತ್ಯ ಸ್ಥಳೀಯರಿಗೆ ಚಿತ್ರಕಲೆ ಸ್ಪರ್ಧೆ, ವೇಷಭೂಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಹೇಳಿದರು.ಗೋಷ್ಠಿಯಲ್ಲಿ ಕೆ.ಎಚ್.ಪುಟ್ಟಸ್ವಾಮಿಗೌಡ, ರಾಜು ಬಚ್ಚಿಕೊಪ್ಪಲು, ವೆಂಕಟೇಶ್, ಕಾಡೇನಹಳ್ಳಿ ಸತೀಶ್ ಇತರರಿದ್ದರು.