ಕನ್ನಡಪ್ರಭ ವಾರ್ತೆ ವಿಜಯಪುರ ಅಂಬಾಭವಾನಿ ಎಜುಕೇಷನ್ ಟ್ರಸ್ಟ್, ಜ.ವಿ.ವ ಸಂಘ ಹಾಗೂ ತಾಂಬಾ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಹಕಾರದಿಂದ ತಾಂಬಾ ಗ್ರಾಮದಲ್ಲಿ ಅ.11ರಿಂದ 21ರ ವರೆಗೆ ನಾಡದೇವಿಯ 55ನೇ ನವರಾತ್ರಿ ಉತ್ಸವ ಜರುಗಲಿದೆ ಎಂದು ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅಂಬಾಭವಾನಿ ಎಜುಕೇಷನ್ ಟ್ರಸ್ಟ್, ಜ.ವಿ.ವ ಸಂಘ ಹಾಗೂ ತಾಂಬಾ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸಹಕಾರದಿಂದ ತಾಂಬಾ ಗ್ರಾಮದಲ್ಲಿ ಅ.11ರಿಂದ 21ರ ವರೆಗೆ ನಾಡದೇವಿಯ 55ನೇ ನವರಾತ್ರಿ ಉತ್ಸವ ಜರುಗಲಿದೆ ಎಂದು ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ ದಿ.ಫೂಲಸಿಂಗ್ ಚವ್ಹಾಣ ಅವರು 55 ವರ್ಷಗಳ ಹಿಂದೆ(1972) ಆರಂಭಿಸಿದ್ದ ಈ ಉತ್ಸವವನ್ನು ನಮ್ಮ ಕುಟುಂಬದ ಡಾ.ಸುನಿತಾ ಚವ್ಹಾಣ, ರವಿಕುಮಾರ ಚವ್ಹಾಣ, ಮಮಿತಾ ಚವ್ಹಾಣ, ಅಭಿನವ ಚವ್ಹಾಣ, ಪ್ರೀತಂ ಚವ್ಹಾಣ ಸೇರಿ ಕುಟುಂಬದವರು ಮುಂದುವರಿಸಿದ್ದಾರೆ. ನಿರಂತರವಾಗಿ 9 ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, 2ನೇ ಮೈಸೂರು ದಸರಾ ಎಂಬಂತೆ ಅದ್ಧೂರಿಯಾಗಿ ನಾಡದೇವಿ ನವರಾತ್ರಿ ಉತ್ಸವ ನಡೆಯುತ್ತದೆ. ಹಿಂದೂ-ಮುಸ್ಲಿಂ ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಬರಗಾಲ‌ ನಿವಾರಣೆಗಾಗಿ, ನಾಡಿನ ಸರ್ವತೋಮುಖ ಅಭಿವೃದ್ಧಿಗಾಗಿ ನವಚಂಡಿ ಹೋಮ ನಡೆಯಲಿದೆ ಎಂದರು.ಅ.11ರಂದು ಬೆಳಗ್ಗೆ 10 ಗಂಟೆಗೆ ಶಾಸಕ ಅಶೋಕ ಮನಗೂಳಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬಂಥನಾಳದ ಸಂಗನಬಸವ ದೇವರು ಸಾನಿಧ್ಯ ವಹಿಸಲಿದ್ದು, ಸೋಮದೇವರಹಟ್ಟಿಯ ಜಗನು ಮಹಾರಾಜರು, ಕೆಸರಟ್ಟಿಯ ಸೋಮಲಿಂಗ ಮಹಾರಾಜರು, ಕಸರಾಳದ ಧನಸಿಂಗ ಮಹಾರಾಜರು ಸಾನಿಧ್ಯ ವಹಿಸಲಿದ್ದಾರೆ. ಬಳಿಕ ಭಯಾನಕ ಅಘೋರಿ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಅ.12ರಂದು ಮುಕ್ತ ಕೋಲಾಟ, ಅ.13ರಂದು ಬೆಳಗ್ಗೆ ರಾಜ್ಯಮಟ್ಟದ ಪುರುಷರ ಖೋಖೋ ಪಂದ್ಯಾವಳಿ, ರಾತ್ರಿ ರಸಮಂಜರಿ ಕಾರ್ಯಕ್ರಮಗಳು ಜರುಗಲಿವೆ. ಅ.14ರಂದು ರಾಜ್ಯಮಟ್ಟದ ಪುರುಷರ ಖೋಖೋ ಪಂದ್ಯಾವಳಿ, ರಾತ್ರಿ ಮ್ಯೂಜಿಕಲ್ ಚೇರ್‌, ಹಿಟ್ಟಿನಲ್ಲಿ ನಾಣ್ಯ ತೆಗೆಯುವುದು, ಬೊಗಸೆ ನೀರಿನಿಂದ ಗ್ಲಾಸ್‌ ತುಂಬುವ ಸ್ಪರ್ಧೆಗಳು ಜರುಗಲಿವೆ. ಅ.15ರಂದು ದಸರಾ ತೆರೆಬಂಡಿ ಉತ್ಸವ, ಮಹಿಳೆಯರ ಖೋಖೋ ಪಂದ್ಯಾವಳಿ, ರಾತ್ರಿ ತಾಯಿಯ ಋಣ ಮಣ್ಣಿನ ಗುಣ ನಾಟಕ ಜರುಗಲಿದೆ. ಅ.16ರಂದು ರಾಜ್ಯಮಟ್ಟದ ಮಹಿಳೆಯರ ಖೋಖೋ ಪಂದ್ಯಾವಳಿ, ಸಂಜೆ ಉಡಿ ತುಂಬುವ ಕಾರ್ಯಕ್ರಮ, ರಾತ್ರಿ ಮನೋರಂಜನೆ ಕಾರ್ಯಕ್ರಮ, ಅ.17ರಂದು ಬೆಳಗ್ಗೆ ರಾಜ್ಯಮಟ್ಟದ ಮಹಿಳೆಯರ ಕಬಡ್ಡಿ ಪಂದ್ಯಾವಳಿ, ರಾತ್ರಿ ರಸಮಂಜರಿ, ಅ.18ರಂದು ಕಬಡ್ಡಿ ಮುಂದುವರೆಯಲಿವೆ. ಅ.19ರಂದು ಬೆಳಗ್ಗೆ ಕಬಡ್ಡಿ ಪಂದ್ಯಾವಳಿ, ರಾತ್ರಿ ಮಾತು ಬಿದ್ದಿತು ಮೌನ ಗೆದ್ದಿತು ನಾಟಕ, ಅ.20ರಂದು ಕಬಡ್ಡಿ ಹಾಗೂ ಅ.21ರಂದು ರಾತ್ರಿ ಮದ್ದು ಸುಡುವ ಕಾರ್ಯಕ್ರಮಗಳು ಜರುಗಲಿವೆ.ಬಾಕ್ಸ್‌ಮುಂದಿನ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆಜೆಡಿಎಸ್‌-ಬಿಜೆಪಿ ಹೊಂದಾಣಿಕೆ ಇರುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಮ್ಮ‌ ವರಿಷ್ಠರು ಜಿಲ್ಲೆಯ ನಾಗಠಾಣ, ಇಂಡಿ, ದೇವರ ಹಿಪ್ಪರಗಿ ಹಾಗೂ ಬಸವನಬಾಗೇವಾಡಿ ಕ್ಷೇತ್ರಗಳನ್ನು ಜೆಡಿಎಸ್‌ಗೆ ತೆಗೆದುಕೊಳ್ಳುತ್ತಾರೆ. ಉಳಿದ ನಾಲ್ಕು ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಡಲಿದ್ದಾರೆ. ಈಗಾಗಲೇ ಮೀಸಲಾತಿ ಘೋಷಣೆಯಾಗಿರುವ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಬರಡೋಲ, ಹಲಸಂಗಿ, ಕನ್ನೂರ, ಶಿವಣಗಿ ಜಿಪಂ ಕ್ಷೇತ್ರಗಳು ಜೆಡಿಎಸ್‌ ವಶಕ್ಕೆ ಬರಲಿದ್ದು, ಬಿಜೆಪಿ ಜೊತೆಗೆ ಮೈತ್ರಿಯಲ್ಲಿ ನಾಗಠಾಣ ಕ್ಷೇತ್ರದ ಏಳೂ ಜಿಪಂ ಕ್ಷೇತ್ರಗಳನ್ನು ನಾವು ಗೆಲ್ಲಲಿದ್ದೇವೆ ಎಂದು ಮಾಜಿ ಶಾಸಕ ಡಾ.ದೇವಾನಂದ ಚವ್ಹಾಣ ವಿಶ್ವಾಸ ವ್ಯಕ್ತಪಡಿಸಿದರು.ನಾಗಠಾಣ ಕ್ಷೇತ್ರದಲ್ಲಿ ತೀವ್ರ ಬರಗಾಲವಿದ್ದು, ಜೆಡಿಎಸ್ ಪಕ್ಷದಿಂದ ಇಲ್ಲಿನ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದಿದ್ದೇನೆ. ಈಗಿರುವ ನಾಗಠಾಣ ಶಾಸಕರು ಜಾಹೀರಾತುಗಳಿಗೆ ಬಳಕೆಯಾಗುತ್ತಿದ್ದಾರೆ. ನಮ್ಮ ಸಮಾಜದ ಜನರು ಅವರಿಗೆ ಆಶೀರ್ವಾದ ಮಾಡಿದ್ದರೂ ಸಹ ಅವರು ಯಾವುದೇ ತಾಂಡಾಗಳತ್ತ ತಿರುಗಿಯೂ ನೋಡುತ್ತಿಲ್ಲ ಎಂದು ಆರೋಪಿಸಿದರು.ನಾಗಠಾಣ ಕ್ಷೇತ್ರದ ವ್ಯಾಪ್ತಿಯ ನಗರದ ಏಳು ವಾರ್ಡ್‌ಗಳಲ್ಲಿನ ಕೆಲವು ಮತದಾರರು ನಾನು ಶಾಸಕರಾಗಿದ್ದಾಗಲೇ ನಗರ ಕ್ಷೇತ್ರಕ್ಕೆ ಮತಗಳನ್ನು ಬದಲಾವಣೆ ಮಾಡಿಕೊಂಡಿದ್ದಾರೆ. ಆಗ ನಾವು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರೀತಂ ಚವ್ಹಾಣ, ಅಭಿನವ ಚವ್ಹಾಣ, ವಿಜು ದೊಡಮನಿ, ಎಸ್.ವಿ.ಮಂಜಿ‌ ಇದ್ದರು.