ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ದುರ್ಗಾಂಬಿಕಾ ದೇವಿ ನವರಾತ್ರಿ ಮಹೋತ್ಸವ, ಪುರಾಣ ಪ್ರವಚನ ಹಾಗೂ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮಗಳು ಅಕ್ಟೋಬರ್ 11ರಿಂದ 22 ರವರೆಗೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ನೆರವೇರಲಿವೆ.
- ಪುರಾಣ ಪ್ರವಚನ, ಉಚಿತ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸಿದ್ಧತೆ
- - -ದಾವಣಗೆರೆ: ಶ್ರೀ ದುರ್ಗಾಂಬಿಕಾ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ದುರ್ಗಾಂಬಿಕಾ ದೇವಿ ನವರಾತ್ರಿ ಮಹೋತ್ಸವ, ಪುರಾಣ ಪ್ರವಚನ ಹಾಗೂ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಕಾರ್ಯಕ್ರಮಗಳು ಅಕ್ಟೋಬರ್ 11ರಿಂದ 22 ರವರೆಗೆ ಶ್ರೀ ದುರ್ಗಾಂಬಿಕಾ ದೇವಸ್ಥಾನ ಆವರಣದಲ್ಲಿ ನೆರವೇರಲಿವೆ.
ಅ.11ರಂದು ಬೆಳಗ್ಗೆ 6:30ಕ್ಕೆ ದೀಪಾರಾಧನೆ, ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ವಿಘ್ನೇಶ್ವರ ಘಟಸ್ಥಾಪನೆ, ನವರಾತ್ರಿ, ನವಗ್ರಹ, ದ್ವಾರಪಾಲ, ಕಾಲಭೈರವ ಪೂಜಾ, ಕಂಕಣಧಾರಣೆ, ದೀಪ ಹಾಕುವುದು ಹಾಗೂ ಪ್ರತಿದಿನ ಶ್ರೀ ದುರ್ಗಾಂಬಿಕಾ ದೇವಿಗೆ ಪಂಚಾಮೃತ ಅಭಿಷೇಕ ಮತ್ತು ಉದಯ ರವಿ ಪಾರಾಯಣ, ಮಹಾಮಂಗಳಾರತಿ ಕಾರ್ಯಕ್ರಮಗಳು ಜರುಗಲಿವೆ. ಅ.12ರಂದು ಜಗತ್ಪ್ರಸೂತಿ (ಬಾಣಂತಿ) ಅಲಂಕಾರ ನೆರವೇರಲಿದೆ. ಅ.13ರಂದು ವೃಷಭವಾಹಿನಿ, ಅ.14ರಂದು ಮಯೂರವಾಹಿನಿ. ಅ.15ರಂದು ಹಂಸವಾಹನಿ, ಅ.16ರಂದು ಗರುಡವಾಹನಿ. ಅ.17ರಂದು ವೀಣಾಪಾಣಿ ಸರಸ್ವತಿ. ಅ.18ರಂದು ಕಾಳಿ ಅಲಂಕಾರ, ಅ.19ರಂದು ದುರ್ಗಾ, ಅ.20ರಂದು ಚಾಮುಂಡಿ ಅಲಂಕಾರ ಹಾಗೂ ವಿಶೇಷ ಕುಂಭಾಭಿಷೇಕ ನೆರವೇರಲಿದೆ. ಅ.21ರಂದು ಆಯುಧ ಪೂಜೆ ಮತ್ತು ಮಹಾನವಮಿ ಅಂಗವಾಗಿ ಮಹಿಷಮರ್ದಿನಿ ಅಲಂಕಾರ ನೆರವೇರಲಿದೆ.ಅ.22ರಂದು ಬೆಳಗ್ಗೆ 11:30ಕ್ಕೆ ದೇವಸ್ಥಾನ ಆವರಣದಲ್ಲಿ ದಸರಾ ಮಹೋತ್ಸವ ಅಂಗವಾಗಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ನೆರವೇರಲಿದೆ. ದಿವಂಗತ ಪಾರ್ವತಮ್ಮ ಹಾಗೂ ಮಾಜಿ ಸಚಿವ ದಿವಂಗತ ಡಾ.ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಅವರ ಸಹೋದರರು ಹಾಗೂ ಮೊಮ್ಮಕ್ಕಳಿಂದ ಅನ್ನಸಂತರ್ಪಣೆ ಸೇವೆ ನಡೆಯಲಿದೆ. ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕೆ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಅವರ ಸಹೋದರರ ಸಮ್ಮುಖದಲ್ಲಿ, ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಉಚಿತ ಸಾಮೂಹಿಕ ವಿವಾಹ ಜರುಗಲಿದೆ.
ಅ.11ರಿಂದ 22ರವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ದೇವಸ್ಥಾನದ ಪಾದಗಟ್ಟಿ ಹತ್ತಿರ ಶ್ರೀ ದೇವಿ ಪುರಾಣ ಪ್ರವಚನ ನಡೆಯಲಿದೆ. ಪ್ರವಚನಕಾರರಾಗಿ ಆಯುರ್ವೇದ ವೈದ್ಯರಾದ ಡಾ. ಎನ್.ಬಿ. ನಾಗರಳ್ಳಿ ಭಾಗವಹಿಸಲಿದ್ದಾರೆ. ದಾವಣಗೆರೆ ಬಸಾಪುರದ ಬಸವ ಕಲಾ ಲೋಕದ ಅರುಣ ಅವರಿಂದ ಸಂಗೀತ ಸೇವೆ ನಡೆಯಲಿದ್ದು, ತಬಲಾ ವಾದಕ ವಾಗೀಶ್ ಅವರು ಭಾಗವಹಿಸಲಿದ್ದಾರೆ.- - -
-6ಕೆಡಿವಿಜಿ47: ಶ್ರೀ ದುರ್ಗಾಂಬಿಕಾ ದೇವಿ.