ದಾಬಸ್‍ಪೇಟೆ: ನವರಾತ್ರಿ ಎಂದರೆ ದುಷ್ಟ ಶಕ್ತಿಗಳ ಸಂಹಾರ ಮತ್ತು ಶಿಷ್ಟ ಪರಿಪಾಲನೆಯ ಸಂಕೇತವಾಗಿದೆ. ಗ್ರಾಮೀಣ ಭಾಗಗಳಲ್ಲಿ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಜೀವಂತವಾಗಿಡಲು ವಿಶೇಷ ಪೂಜಾ ಕಾರ್ಯಕ್ರಮಗಳು, ಉತ್ಸವಗಳು ಸಹಕಾರಿಯಾಗಿವೆ ಎಂದು ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ತಿಳಿಸಿದರು

ದಾಬಸ್‍ಪೇಟೆ: ನವರಾತ್ರಿ ಎಂದರೆ ದುಷ್ಟ ಶಕ್ತಿಗಳ ಸಂಹಾರ ಮತ್ತು ಶಿಷ್ಟ ಪರಿಪಾಲನೆಯ ಸಂಕೇತವಾಗಿದೆ. ಗ್ರಾಮೀಣ ಭಾಗಗಳಲ್ಲಿ ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯನ್ನು ಜೀವಂತವಾಗಿಡಲು ವಿಶೇಷ ಪೂಜಾ ಕಾರ್ಯಕ್ರಮಗಳು, ಉತ್ಸವಗಳು ಸಹಕಾರಿಯಾಗಿವೆ ಎಂದು ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ತಿಳಿಸಿದರು.

ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿರುವ ಶಾರದ ಮಠದಲ್ಲಿ ಶರನ್ನವರಾತ್ರಿ ಅಂಗವಾಗಿ ಶಾರಾದಾಂಬೆಗೆ ವಿಶೇಷ ಪೂಜೆ ಮತ್ತು ಲೋಕ ಕಲ್ಯಾರ್ಣಾರ್ಥ ನಡೆಸುತ್ತಿರುವ ಹೋಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಮಠದಲ್ಲಿ ನಡೆಯುತ್ತಿರುವ ದೇವತಾಕಾರ್ಯದಲ್ಲಿ ಭಾಗವಹಿಸುವ ಭಾಗ್ಯ ಸಿಕ್ಕಿರುವುದು ಸಂತಸ ತಂದಿದೆ. ಕ್ಷೇತ್ರದಲ್ಲಿ ಶಾಂತಿ, ಸಮೃದ್ಧಿ ನೆಲೆಸಲಿ ಮತ್ತು ರೈತರಿಗೆ ಉತ್ತಮ ಮಳೆಯಾಗಿ ಬೆಳೆ ಬರಲಿ. ತಾಲೂಕಿನ ಎಲ್ಲಾ ಜನರಿಗೂ ತಾಯಿ ಚಾಮುಂಡೇಶ್ವರಿಯು ಆಯುಷ್ಯ, ಆರೋಗ್ಯ ಮತ್ತು ಐಶ್ವರ್ಯವನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ, ಮುಂದಿನ ದಿನಗಳಲ್ಲಿ ಮಠದಿಂದ ನಡೆಯುವ ಕಾರ್ಯಗಳಲ್ಲಿ ಭಾಗವಹಿಸುತ್ತೇನೆ ಎಂದರು.

ದಕ್ಷಿಣಕಾಶಿ ಶಿವಗಂಗೆ ಕ್ಷೇತ್ರದ ಅಭಿವೃದ್ದಿ ಮಾಡಲು, ದೇವರ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ಶ್ರೀ ಗಂಗಾಧರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ನನ್ನ ಅಧಿಕಾರವಧಿಯಲ್ಲಿ ಭಕ್ತರಿಗೆ ಕುಡಿಯುವ ನೀರು, ದೇವಾಲಯಕ್ಕೆ ವಿದ್ಯುತ್ ವ್ಯವಸ್ಥೆ ಮಾಡುವ ಗುರಿ ಹೊಂದಿದ್ದೇನೆ. ಈಗಾಗಲೇ ಭಕ್ತರಿಗೆ ಬಹಳ ತೊಂದರೆಯಾಗಿದ್ದ ಬಸವಣ್ಣನ ಸುತ್ತ ಹೊಸದಾಗಿ ಕಂಬಿಗಳನ್ನು ಹಾಕಿಸಿ ಭಕ್ತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎನ್‌ಪಿಎ ಮಾಜಿ ಸದಸ್ಯ ಅಂಚೆಮನೆ ಪ್ರಕಾಶ್, ಮಠದ ಆಡಳಿತಾಧಿಕಾರಿ ಗಣೇಶ್, ಅರ್ಚಕರಾದ ಸೋಂಪುರ ನಟರಾಜು ಮತ್ತು ಕಾರ್ತೀಕ್ ಹಾಗೂ ಮಠದ ಸಿಬ್ಬಂದಿ ಭಾಗವಹಿಸಿದ್ದರು.

ಪೊಟೋ 1:

ಸೋಂಪುರ ಹೋಬಳಿಯ ಶಿವಗಂಗೆಯಲ್ಲಿರುವ ಶಾರದಾ ಮಠದಲ್ಲಿ ಶರನ್ನವರಾತ್ರಿ ಅಂಗವಾಗಿ ಶಾರಾದಾಂಬೆಗೆ ವಿಶೇಷ ಪೂಜೆ ಮತ್ತು ಲೋಕಕಲ್ಯಾರ್ಣಾರ್ಥ ಹೋಮ ಕಾರ್ಯಕ್ರಮದಲ್ಲಿ ನೆಲಮಂಗಲ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಗಳಕುಪ್ಪೆ ಗೋವಿಂದರಾಜು ಅವರನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.