ಸಾರಾಂಶ
ವಿಜಯಪುರ: ಶ್ರೀ ಗಜಾನನ ಉತ್ಸವ ಮಹಾಮಂಡಳದ ವತಿಯಿಂದ ನಗರದ ಛತ್ರಪತಿ ಶಿವಾಜಿ ಮಹಾರಾಜರ ವೃತ್ತದಲ್ಲಿ ಪ್ರತಿಷ್ಠಾಸಿದ ಶ್ರೀ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಸ್ಥಳದಲ್ಲಿ ಬೆಳಗ್ಗೆ ಏಳು ಗಂಟೆಯಿಂದ 10 ಗಂಟೆಯ ವರೆಗೆ ಲೋಕ ಕಲ್ಯಾಣಾರ್ಥಕವಾಗಿ ಗಣ ಹೋಮ, ನವಗ್ರಹ ಹೋಮ, ನರಸಿಂಹ ಹೋಮ, ಸುದರ್ಶನ ಹೋಮ ನಡೆಸಲಾಯಿತು.

ಹೋಮದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಅವರು ಕುಟುಂಬ ಸಮೇತ ಹೋಮದಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಗಜಾನನೋತ್ಸವ ಮಹಾಮಂಡಲದ ಸಂಸ್ಥಾಪನ ಅಧ್ಯಕ್ಷ, ಮಾಜಿ ಸಚಿವ ಅಪ್ಪಾಸಾಹೇಬ್ ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹಾಗೂ ನೂರಾರು ಜನ ಸದ್ಭಕ್ತರು ಭಾಗವಹಿಸಿದ್ದರು. ಪವಮಾನ ಆಚಾರಿ ಅವರ ಅರ್ಚಕ ವೃಂದದಿಂದ ಈ ಹೋಮ ನಡೆಸಲಾಯಿತು.