ಸೂಲಿಬೆಲೆಯ ಗಿಡ್ಡಪ್ಪನಹಳ್ಳಿ ಗ್ರಾಮ ಪಂಚಾಯಿತಿಗೆ ನವಿತಾ ಅಧ್ಯಕ್ಷೆ

| Published : Aug 13 2024, 12:45 AM IST

ಸಾರಾಂಶ

ಅಧಿಕಾರ ಶಾಶ್ವತವಲ್ಲಾ, ಎಲ್ಲಾ ಸದಸ್ಯರೊಂದಿಗೆ ಪರಸ್ಪರ ಸೌಹಾರ್ದತೆಯಿಂದ ಎಲ್ಲಾ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು. ಸೂಲಿಬೆಲೆಯ ಗಿಡ್ಡಪ್ಪನಹಳ್ಳಿ ಗ್ರಾಪಂ ನೂತನ ಅಧ್ಯಕ್ಷೆ ನವಿತಾ ಸುರೇಶ್ ಅವರನ್ನು ಅಭಿನಂದಿಸಿ ಮಾತನಾಡಿದರು.

-ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ: ನವಿತಾಕನ್ನಡಪ್ರಭ ವಾರ್ತೆ ಸೂಲಿಬೆಲೆ

ಅಧಿಕಾರ ಶಾಶ್ವತವಲ್ಲಾ, ಎಲ್ಲಾ ಸದಸ್ಯರೊಂದಿಗೆ ಪರಸ್ಪರ ಸೌಹಾರ್ದತೆಯಿಂದ ಎಲ್ಲಾ ಗ್ರಾಮಗಳನ್ನು ಅಭಿವೃದ್ಧಿಪಡಿಸಬೇಕು ಎಂದು ರಾಜ್ಯ ಒಕ್ಕಲಿಗ ಸಂಘದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ ಹೇಳಿದರು.

ಹೋಬಳಿಯ ಗಿಡ್ಡಪ್ಪನಹಳ್ಳಿ ಗ್ರಾಪಂ ನೂತನ ಅಧ್ಯಕ್ಷೆ ನವಿತಾಸುರೇಶ್ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಸ್ಥಳೀಯ ಆಡಳಿತವನ್ನು ಸಮಯಪ್ರಜ್ಞೆಯಿಂದ ನಿಭಾಯಿಸಬೇಕು. ಎಲ್ಲಾ ಸದಸ್ಯರನ್ನು ಪರಿಗಣಿಸಿ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ನೂತನ ಆಧ್ಯಕ್ಷೆ ನವಿತಾ ಸುರೇಶ್ ಮಾತನಾಡಿ, ಮೂಲಸೌಲಭ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಗ್ರಾಮ ನೈರ್ಮಲ್ಯಕ್ಕೆ ಆದ್ಯತೆ ನೀಡುತ್ತೇವೆ. ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಪಕ್ಷಭೇದವಿಲ್ಲದೆ ಶ್ರಮಿಸುವುದಾಗಿ ತಿಳಿಸಿದರು.

ತಾಪಂ ಮಾಜಿ ಸದಸ್ಯ ಡಾ.ಡಿ.ಟಿ.ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ಹನುಮರಾಜ್, ಯುವ ಮುಖಂಡ ಜಿ.ನಾರಾಯಣಗೌಡ, ಮಂಜುಳಾ, ಅರಸನಹಳ್ಳಿ ಶಿವಪ್ಪ, ಉಪಾಧ್ಯಕ್ಷೆ ಕಲಾವತಿ, ಸದಸ್ಯರಾದ ಜಗದೀಶ್, ಬಸವರಾಜ್, ಅಕ್ಬರ್‌ ಅಲಿಖಾನ್, ಗುಲ್ನಾಜ್, ನಾರಾಯಣಪ್ಪ, ಖುದ್ದುಸಿಯಾಜಮಾ, ನಾಗೇಶ್, ಲೀಲಾವತಿ, ಸೂಲಿಬೆಲೆ ಸಹಕಾರ ಬ್ಯಾಂಕ್ ನಿರ್ದೇಶಕ ಸೈಯದ್ ಮಹಬೂಬ್, ಸಿದ್ದೇನಹಳ್ಳಿ ರಮೇಶ್, ಪ್ರಕಾಶ್, ಮುರಳಿ, ಬೆಟ್ಟಹಳ್ಳಿ ನಾಗೇಶ್, ರವಿಚಂದ್ರ, ರಾಮಣ್ಣ, ಮುನಿ ಅಂಜಿನಪ್ಪ, ಗಣೇಶ್, ಜಗದೀಶ್, ರವಿಕುಮಾರ್, ಪ್ರಸನ್ನಕುಮಾರ್, ರಾಮಾಂಜಿನಪ್ಪ ಇತರರಿದ್ದರು.