ನವರಾತ್ರಿ ಹಬ್ಬವು ಜ್ಞಾನದ ಕಡೆಗೆ ಕರೆದೊಯ್ಯುತ್ತದೆ: ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್

| Published : Oct 11 2024, 11:48 PM IST

ನವರಾತ್ರಿ ಹಬ್ಬವು ಜ್ಞಾನದ ಕಡೆಗೆ ಕರೆದೊಯ್ಯುತ್ತದೆ: ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ಈ ಭಾಗದ ಜನರಿಗೆ ಧಾರ್ಮಿಕ, ಸಾಂಸ್ಕತಿಕ, ಸೇವಾ ವಿಚಾರವು ಲಭ್ಯವಾಗಲಿ. ಈ ಜಾಗದಲ್ಲಿ ಹೋಮ ಹವನ ನಡೆಯುವುದರ ಮೂಲಕ ಈ ಭೂಮಿಯು ದೇವಭೂಮಿಯಾಗಿ ಪರಿವರ್ತನೆಯಾಗಲಿ.

ಕನ್ನಡಪ್ರಭ ವಾರ್ತೆ ಮೈಸೂರು

ನವರಾತ್ರಿ ಹಬ್ಬವು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯುತ್ತದೆ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್. ವಿಜಯಶಂಕರ್ ತಿಳಿಸಿದರು.

ಮೈಸೂರು ತಾಲೂಕಿನ ಮೆಲ್ಲಹಳ್ಳಿಯಲ್ಲಿರುವ ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ಶ್ರೀ ಅರ್ಜುನ ಅವಧೂತ ಸಾನ್ನಿಧ್ಯದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ನಡೆದ ಸರಸ್ವತಿ ಹೋಮ ಪೂರ್ಣಾವತಿಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ವಿಜಯದಶಮಿಯ ದಿನ ವಿಜಯದ ಪತಾಕೆ ಹಾರಿಸುವುದರ ಮೂಲಕ ಭರತಖಂಡವು ಹಬ್ಬದ ವಾತಾವರಣದಲ್ಲಿ ಇರುತ್ತದೆ ಎಂದು ಹೇಳಿದರು.

ವೆಂಕಟಾರ್ಜುನ ಧ್ಯಾನ ಮಂದಿರದಲ್ಲಿ ಈ ಭಾಗದ ಜನರಿಗೆ ಧಾರ್ಮಿಕ, ಸಾಂಸ್ಕತಿಕ, ಸೇವಾ ವಿಚಾರವು ಲಭ್ಯವಾಗಲಿ. ಈ ಜಾಗದಲ್ಲಿ ಹೋಮ ಹವನ ನಡೆಯುವುದರ ಮೂಲಕ ಈ ಭೂಮಿಯು ದೇವಭೂಮಿಯಾಗಿ ಪರಿವರ್ತನೆಯಾಗಲಿ. ಈ ನೆಲದಲ್ಲಿ ಶಾಂತಿ, ನೆಮ್ಮದಿ ಸಿಗಲಿ ಎಂದು ಅವರು ಆಶಿಸಿದರು.

ಶ್ರೀ ಅರ್ಜುನ್ ಅವಧೂತರು, ರಂಗಲಕ್ಷ್ಮಿ, ನ್ಯಾಯಾಧೀಶರಾದ ಜಯಂತಿ, ಉದಯ ಗೌಡ ಮೊದಲಾದವರು ಇದ್ದರು.