ಶೃಂಗೇರಿ: ನವರಾತ್ರಿ ಆರಂಭದಿಂದ ದೂರ ಉಳಿದಿದ್ದ ಮಳೆರಾಯ. ಕಳೆದೆರೆಡು ದಿನಗಳಿಂದ ಹಗಲು ರಾತ್ರಿ ಆಗಾಗ ಅಬ್ಬರಿಸುತ್ತಿರುವ ನಡುವೆಯೂ ಜನರ ಕೊರತೆಯಾಗದೆ ನವರಾತ್ರಿ ಉತ್ಸವ ಕಳೆಗಟ್ಟುತ್ತಿದೆ. ಮಳೆಯನ್ನೂ ಲೆಕ್ಕಿಸದೇ ದೇಶದ ವಿವಿಧ ಮೂಲಗಳಿಂದ ಜನಸಾಗರವೇ ಹರಿದು ಬರುತ್ತಿದೆ.

ಇಂದ್ರಾಣಿಯಲಂಕಾರದಲ್ಲಿ ಶ್ರೀ ಶಾರದಾಂಬೆ । ಹರಿದು ಬಂದ ಜನಸಾಗರ

ಶೃಂಗೇರಿ: ನವರಾತ್ರಿ ಆರಂಭದಿಂದ ದೂರ ಉಳಿದಿದ್ದ ಮಳೆರಾಯ. ಕಳೆದೆರೆಡು ದಿನಗಳಿಂದ ಹಗಲು ರಾತ್ರಿ ಆಗಾಗ ಅಬ್ಬರಿಸುತ್ತಿರುವ ನಡುವೆಯೂ ಜನರ ಕೊರತೆಯಾಗದೆ ನವರಾತ್ರಿ ಉತ್ಸವ ಕಳೆಗಟ್ಟುತ್ತಿದೆ. ಮಳೆಯನ್ನೂ ಲೆಕ್ಕಿಸದೇ ದೇಶದ ವಿವಿಧ ಮೂಲಗಳಿಂದ ಜನಸಾಗರವೇ ಹರಿದು ಬರುತ್ತಿದೆ.

ಶನಿವಾರ ಪೀಠದ ಅಧಿದೇವತೆ ಶಾರದೆಗೆ ಇಂದ್ರಾಣಿ ಅಲಂಕಾರದಲ್ಲಿ ವಜ್ರಾಯುಧ ಧರಿಸಿ ದೇವೆಂದ್ರನ ಪಟ್ಟ ಮಹಿಷಿಯಾಗಿ ವೃತ್ರಾಸುರ ಮೊದಲಾದ ದುಷ್ಟದೈತ್ಯರ ಸಂಹರಿಸುವ ಈ ಅಲಂಕಾರದಲ್ಲಿ ಶಾರದೆ ನಯನ ಮನೋಹರ ವಾಗಿ ಕಂಗೊಳಿಸಿದಳು.

ಬೆಳಿಗ್ಗೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು.ನಂತರ ಶ್ರೀ ಮಠದ ಆವರಣದ ಶ್ರೀ ವಿದ್ಯಾಶಂಕರ,ಶ್ರೀ ಶಂಕರಾಚಾರ್ಯ,ಶ್ರೀ ತೋರಣಗಣಪತಿ,ಶ್ರೀ ಸುಬ್ರಮಣ್ಯ,ಕೋದಂಡರಾಮಸ್ವಾಮಿ,ಶ್ರೀ ಜನಾರ್ದನ ಸ್ವಾಮಿ ದೇವಾಲಯಗಳಲ್ಲೂ ವಿಶೇಷ ಪೂಜೆ ಸಲ್ಲಿಸಿದರು.ಸಾಲು ಸಾಲು ಅಂಗಡಿಗಳು: ಶ್ರೀ ಮಠದ ಮುಂಬಾಗದಿಂದ ಭಾರತೀ ಬೀದಿವರೆಗೂ ರಸ್ತೆ ಇಕ್ಕೆಲಗಳಲ್ಲಿ ಸಾಲು ಸಾಲಾಗಿರುವ ಅಂಗಡಿ ಮುಂಗಟ್ಟುಗಳು ನವರಾತ್ರಿಗೆ ಇನ್ನಷ್ಟು ಮೆರಗು ನೀಡುತ್ತಿವೆ. ಜನರನ್ನು ಆಕರ್ಷಿಸುತ್ತಿದ್ದು ಬೆಳಗಿನಿಂದ ಅಂಗಡಿ ಮುಂಗಟ್ಟುಗಳ ಮುಂದೆ ಜನರು ಸಾಲುಗಟ್ಟಿ ನಿಲ್ಲುವುದು ಕಂಡುಬರುತ್ತಿದೆ.

ರಾಜಬೀದಿ ಉತ್ಸವದಲ್ಲಿ ಬೇಗಾರು ಪಂಚಾಯಿತಿ ವ್ಯಾಪ್ತಿ ಗ್ರಾಮಸ್ಥರೊಂದಿಗೆ ವಿವಿಧ ಸಂಘಸಂಸ್ಥೆಗಳು,ಜಾನಪದ ಕಲಾ ತಂಡಗಳು,ಮಲೆನಾಡಿ ಜನಜೀವನ, ಸಂಸ್ಕೃತಿ ಪರಂಪರೆಯ ಸ್ಥಬ್ಧ ಚಿತ್ರಗಳು,ನೂರಾರು ವಿಪ್ರೋತ್ತಮರ ವೇದಘೋಷಗಳು ಉತ್ಸವಕ್ಕೆ ವಿಶೇಷ ಮೆರಗು ನೀಡಿತು. ವಿದ್ವಾನ್ ಶ್ರೀಕಾಂತ್ ಕೌಂಡಿನ್ಯನ್ ತಂಡದವರಿಂದ ಹಾಡುಗಾರಿಕೆ ನಡೆಯಿತು.

ಭಾನುವಾರ ಶಾರದೆಗೆ ಮೋಹಿನಿಯಲಂಕಾರ ನಡೆಯಲಿದೆ. ರಾಜಬೀದಿ ಉತ್ಸವದಲ್ಲಿ ಪಟ್ಟಣ ವ್ಯಾಪ್ತಿಯ ಭಕ್ತಾದಿ ಗಳೊಂದಿಗೆ ವಿವಿಧ ಸಂಘಸಂಸ್ಥೆಗಳು ಪಾಲ್ಗೊಳ್ಳಲಿದೆ. ವಿದ್ವಾನ್ ತುಕರಾಮ್ ಗಣಪತಿ ಮಹಾರಾಜ್ ತಂಡದಿಂದ ಹಾಡುಗಾರಿಕೆ ನಡೆಯಲಿದೆ.

17 ಶ್ರೀ ಚಿತ್ರ 1-ಶೃಂಗೇರಿ ಶಾರದೆ ಮೋಹಿನಿಯಲಂಕಾರದಲ್ಲಿ ಕಂಗೊಳಿಸಿದಳು.

17 ಶ್ರೀ ಚಿತ್ರ 2-ಶೃಂಗೇರಿ ಪಟ್ಟಣದ ಭಾರತೀ ಬೀದಿ ವರೆಗಿರುವ ಸಾಲು ಸಾಲು ಅಂಗಡಿಗಳು.