ನಜರ್ ಬಾದ್ ಪೊಲೀಸರಿಂದ ಕಳ್ಳನ ಬಂಧನ- 20 ದ್ವಿಚಕ್ರ ವಾಹನಗಳ ವಶ

| Published : Feb 14 2024, 02:17 AM IST

ಸಾರಾಂಶ

ಬಂಧಿತನಿಂದ ನಜರ್‌ ಬಾದ್ ಠಾಣೆಯ 9, ನರಸಿಂಹರಾಜ- 1, ಲಷ್ಕರ್- 1, ಕೃಷ್ಣರಾಜ- 1, ಮಂಡ್ಯ ಪಶ್ಚಿಮ- 4, ಮಂಡ್ಯ ಪೂರ್ವ- 3, ಬೆಂಗಳೂರು ಬ್ಯಾಟರಾಯನಪುರ- 1 ದ್ವಿಚಕ್ರ ವಾಹನ ಕಳುವು ಪ್ರಕರಣಗಳು ಪತ್ತೆಯಾಗಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ದ್ವಿಚಕ್ರ ವಾಹನಗಳ ಕಳುವು ಮಾಡುತ್ತಿದ್ದ ಆರೋಪಿಯನ್ನು ಮೈಸೂರಿನ ನಜರ್ ಬಾದ್ ಠಾಣೆಯ ಪೊಲೀಸರು ಬಂಧಿಸಿ, ಒಟ್ಟು 9 ಲಕ್ಷ ರೂ. ಮೌಲ್ಯದ 20 ವಿವಿಧ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪೋರಂ ಮಾಲ್ ಬಳಿ ಹೊಂಡಾ ಡಿಯೋ ವಾಹನದಲ್ಲಿ ಸೋಮವಾರ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಒಬ್ಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ, ಆತನು ಮೈಸೂರು ನಗರ, ಮಂಡ್ಯ, ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಬಂಧಿತನಿಂದ ನಜರ್‌ ಬಾದ್ ಠಾಣೆಯ 9, ನರಸಿಂಹರಾಜ- 1, ಲಷ್ಕರ್- 1, ಕೃಷ್ಣರಾಜ- 1, ಮಂಡ್ಯ ಪಶ್ಚಿಮ- 4, ಮಂಡ್ಯ ಪೂರ್ವ- 3, ಬೆಂಗಳೂರು ಬ್ಯಾಟರಾಯನಪುರ- 1 ದ್ವಿಚಕ್ರ ವಾಹನ ಕಳುವು ಪ್ರಕರಣಗಳು ಪತ್ತೆಯಾಗಿವೆ.

ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಸ್. ಜಾಹ್ನವಿ, ದೇವರಾಜ ಉಪ ವಿಭಾಗದ ಎಸಿಪಿ ಎಸ್. ಶಾಂತಮಲ್ಲಪ್ಪ ಅವರ ಮಾರ್ಗದರ್ಶನದಲ್ಲಿ ನಜರ್‌ ಬಾದ್ ಠಾಣೆಯ ಇನ್ಸ್‌ ಪೆಕ್ಟರ್ ಮಹದೇವಸ್ವಾಮಿ, ಎಸ್ಐ ಶ್ರೀನಿವಾಸ್ ಪಾಟೀಲ್, ಸಿಬ್ಬಂದಿ ಎಸ್. ಸತೀಶ್ ಕುಮಾರ್, ಕಿರಣ್ ರಾಥೋಡ್, ಮಲ್ಲಿಕಾರ್ಜುನ್, ಎಂ. ಸಂಜು, ಸಿಡಿಆರ್ ಘಟಕದ ಕುಮಾರ್ ಈ ಪತ್ತೆ ಮಾಡಿದ್ದಾರೆ.