ಸಾರಾಂಶ
ಕನ್ನಡಪ್ರಭ ವಾರ್ತೆ ಸುತ್ತೂರು
ಎನ್.ಸಿಸಿ ತರಬೇತಿ ಪಡೆಯುವುದರಿಂದ ನಾಯಕತ್ವದ ಗುಣ ರೂಢಿಸಿಕೊಳ್ಳಬಹುದು ಎಂದು ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮ.ಗು. ಬಸವಣ್ಣ ಅಭಿಪ್ರಾಯಪಟ್ಟರು.ಮೈಸೂರಿನ ಜವಹರ್ ನವೋದಯ ವಿದ್ಯಾಲಯದಲ್ಲಿ ಆಯೋಜಿಸಿದ್ದ ಎನ್.ಸಿಸಿ ಶಿಬಿರದಲ್ಲಿ, ಸುತ್ತೂರು ಜೆಎಸ್ಎಸ್ ಪ್ರೌಢಶಾಲೆಯಲ್ಲಿ 25 ವರ್ಷಗಳಿಗೂ ಹೆಚ್ಚು ಕಾಲ ಎನ್.ಸಿಸಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಕ್ಕಾಗಿ ಎನ್.ಸಿಸಿ ಅಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಶಿಸ್ತು, ಸಮಯ ನಿರ್ವಹಣೆ, ಸೇವಾ ಗುಣ, ರಾಷ್ಟ್ರೀಯ ಭಾವೈಕ್ಯತೆ, ಸ್ಪರ್ಧಾತ್ಮಕ ಮನೋಭಾವ ಇವೇ ಮೊದಲಾದ ಗುಣಗಳನ್ನು ಎನ್.ಸಿಸಿ ತರಬೇತಿಯಿಂದ ಕಲಿಯಲು ಸಾಧ್ಯ ಎಂದು ನುಡಿದರು.
ಜೆಎಸ್ಎಸ್ ಸಂಸ್ಥೆ ಮತ್ತು ಎನ್ಸಿಸಿ ಘಟಕ ನೀಡಿದ ಈ ಅಪೂರ್ವ ಅವಕಾಶದಿಂದಾಗಿ 1997 ರಿಂದ 2023ರವರೆಗೆ ಸುಮಾರು 25 ವರ್ಷಗಳಿಗೂ ಹೆಚ್ಚು ಕಾಲ ಎನ್.ಸಿಸಿ ವಾಯುದಳದ ಅಧಿಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಯಿತು. ಶಾಲಾ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಪಡೆದಿದ್ದರಿಂದಾಗಿ ಎನ್ಸಿಸಿಯಿಂದ ಸ್ವಯಂ ನಿವೃತ್ತರಾಗಿರುವುದಾಗಿ ತಿಳಿಸಿದ ಅವರು, ಚೆನ್ನೈನ ತಾಂಬರಂ ವಾಯುನೆಲೆಯಲ್ಲಿ ತರಬೇತಿ ಪಡೆಯುವಾಗ ಅತ್ಯುತ್ತಮ ಎನ್ಸಿಸಿ ಅಧಿಕಾರಿ ಪ್ರಶಸ್ತಿ ಪಡೆದಿರುವುದನ್ನು ಸ್ಮರಿಸಿಕೊಂಡರು.ಅಧ್ಯಕ್ಷತೆ ವಹಿಸಿದ್ದ ವಿಂಗ್ ಕಮಾಂಡರ್ ಜಿ.ಎಸ್. ಆಶಿಶ್ ಮಾತನಾಡಿ, ಎನ್.ಸಿಸಿ ಕೆಡೆಟ್ಗಳಿಗೆ ಉತ್ತಮ ತರಬೇತಿ ನೀಡಿ ಅವರ ಭವಿಷ್ಯವನ್ನು ರೂಪಿಸುವ ಕೆಲಸವನ್ನು ಮ.ಗು. ಬಸವಣ್ಣ ಅವರು ಉತ್ತಮವಾಗಿ ನಿರ್ವಹಿಸಿದ್ದಾರೆ ಎಂದು ಪ್ರಶಂಸಿಸಿದರು.
ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಪ್ರಾಚ್ಯವಸ್ತು ಮತ್ತು ವಸ್ತು ಸಂಗ್ರಹಾಲಯಗಳ ನಿರ್ದೇಶಕರಾದ ದೇವರಾಜ್ ಮಾತನಾಡಿ, ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಶಿಸ್ತು ಮತ್ತು ರಾಷ್ಟ್ರೀಯತೆಯನ್ನು ಬೆಳೆಸುವಲ್ಲಿ ಎನ್ಸಿಸಿ ಮಹತ್ತರ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.10 ದಿನಗಳ ಶಿಬಿರದಲ್ಲಿ ವಿವಿಧ ಶಾಲೆಗಳ ಎನ್ಸಿಸಿ ಅಧಿಕಾರಿಗಳು, 400 ಕ್ಕೂ ಹೆಚ್ಚು ಕೆಡೆಟ್ ಗಳು ಭಾಗವಹಿಸಿದ್ದರು.18ರಂದು ಭಾವಸ್ಪಂದನ ಗಾಯನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಮೈಸೂರುಭೂಮಿಕಾ ಅಸೋಸಿಯೇಟ್ಸ್ ಮತ್ತು ದಿ.ಮೈಕ್ ಚಂದ್ರು ಗೆಳೆಯರ ಬಳಗದ ಸಂಯುಕ್ತವಾಗಿ ಜೂ.18ರ ಸಂಜೆ 5.30ಕ್ಕೆ ನಗರದ ಜೆಎಲ್ ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಭಾವಸ್ಪಂದನ- ನಾಡಿನ ಖ್ಯಾತ ಕವಿಗಳ ಗೀತ ಗುಚ್ಛಗಳ ಗಾಯನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೈಸೂರು ಆಕಾಶವಾಣಿ ಉದ್ಘೋಷಕ ಮಂಜುನಾಥ್ ಆಕಾಶವಾಣಿ ತಿಳಿಸಿದರು.
ಸಂತ ಶಿಶುನಾಳ ಷರೀಫರು, ಕುವೆಂಪು, ದ.ರಾ. ಬೇಂದ್ರೆ ಮೊದಲಾದ ಎಲ್ಲಾ ಪ್ರಸಿದ್ಧ ಕವಿಗಳ ಸುಮಾರು 28 ಗೀತೆಗಳನ್ನು ಆಕಾಶವಾಣಿ ಹಾಗೂ ದೂರದರ್ಶನದ ಯುವ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ. ಇದು ಸಂಪೂರ್ಣ ಉಚಿತ ಪ್ರವೇಶದ ಕಾರ್ಯಕ್ರಮವಾಗಿದ್ದು, ಸಭಾ ಕಾರ್ಯಕ್ರಮ ರಹಿತವಾಗಿದೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಕಲಾವಿದರಾದ ರಾಜೇಶ್ ಪಡಿಯಾರ್, ನಿತಿನ್ ರಾಜಾರಾಂ ಶಾಸ್ತ್ರಿ, ದಿವ್ಯಾ ಸಚ್ಚಿದಾನಂದ, ಹಂಸಿನಿ ಎಸ್. ಕುಮಾರ್ ಹಾಡಲಿದ್ದು, ಇವರಿಗೆ ರಿದಂ ಪ್ಯಾಡ್ ನಲ್ಲಿ ವಿನಯ್ ರಂಗಧೋಳ್, ತಬಲ- ಆತ್ಮರಾಮ್, ಕೀಬೋರ್ಡ್- ಗಣೇಶ್ ಭಟ್, ಮ್ಯಾಂಡಲೀನ್ ವಿಶ್ವನಾಥ್ ಸಾಥ್ ನೀಡುವರು ಎಂದರು.ಬಳಗದ ಅಧ್ಯಕ್ಷ ಕೆ.ಎಸ್. ಸುರೇಶ್, ಅಶ್ವತ್ಥನಾರಾಯಣ್, ಮೈಸೂರು ಆನಂದ್, ರಾಜೇಶ್ ಪಡಿಯಾರ್ ಇದ್ದರು.