ವಿದ್ಯಾರ್ಥಿಗಳ ಶಿಸ್ತಿನ ಜೀವನಕ್ಕೆ ಎನ್.ಸಿ.ಸಿ. ಅಗತ್ಯ: ಪ್ರಾಂಶುಪಾಲ ಎಸ್.ಸಿದ್ಧರಾಜು

| Published : Nov 15 2024, 12:36 AM IST

ವಿದ್ಯಾರ್ಥಿಗಳ ಶಿಸ್ತಿನ ಜೀವನಕ್ಕೆ ಎನ್.ಸಿ.ಸಿ. ಅಗತ್ಯ: ಪ್ರಾಂಶುಪಾಲ ಎಸ್.ಸಿದ್ಧರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಪಿ.ಎಸ್. ಶಾಲೆಯಲ್ಲಿ ಉದ್ಘಾಟನೆಗೊಂಡ ಎನ್.ಸಿ.ಸಿ. ಘಟಕಕ್ಕೆ ಸೇರುವುದರ ಮೂಲಕ ವಿದ್ಯಾರ್ಥಿಗಳು ಶಿಸ್ತು ಬದ್ಧತೆಯನ್ನು ರೂಢಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಎಸ್.ಸಿದ್ಧರಾಜು ಹೇಳಿದರು. ತಿಪಟೂರಿನಲ್ಲಿ ಎನ್.ಸಿ.ಸಿ. ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುಮಕೂರು ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧ ಕಲಿಕೆ ಅವರ ಭವ್ಯ ಭವಿಷ್ಯದ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಕೆ.ಪಿ.ಎಸ್. ಶಾಲೆಯಲ್ಲಿ ಉದ್ಘಾಟನೆಗೊಂಡ ಎನ್.ಸಿ.ಸಿ. ಘಟಕಕ್ಕೆ ಸೇರುವುದರ ಮೂಲಕ ವಿದ್ಯಾರ್ಥಿಗಳು ಶಿಸ್ತು ಬದ್ಧತೆಯನ್ನು ರೂಢಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ಎಸ್.ಸಿದ್ಧರಾಜು ಹೇಳಿದರು.

ನಾಗವಲ್ಲಿಯ ಕೆ.ಪಿ.ಎಸ್. ಶಾಲೆಯಲ್ಲಿ ಎನ್.ಸಿ.ಸಿ. ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಎನ್.ಸಿ.ಸಿ. ಎಂಬುದು ಏಕತೆ ಮತ್ತು ಶಿಸ್ತುಗಳನ್ನು ಒಳಗೊಂಡಿದೆ. ಇದಕ್ಕೆ ಸೇರುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ರಾಷ್ಟ್ರಪ್ರೇಮ, ಸನ್ನಡತೆ ಅಳವಡುತ್ತದೆ. ಎನ್.ಸಿ.ಸಿ. ಈ ದೇಶದ ಎರಡನೇ ರಕ್ಷಣಾಪಥ. ಇಂತಹ ಘಟಕಕ್ಕೆ ಸೇರಲು ಆಸಕ್ತಿ ಇರುವವರಿಗೆ ತರಬೇತಿ ಕೊಟ್ಟು ಸೂಕ್ತ ಸಂದರ್ಭದಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಿದರು.ಕಮಾಂಡಿಂಗ್ ಆಫೀಸರ್ ಕರ್ನಲ್ ಗುರ್ಮೀತ್ ಸಿಂಗ್ ಗುಜ್ರಾಲ್ ಮಾತನಾಡಿ, ಎನ್.ಸಿ.ಸಿ ಯ ಮಹತ್ವ ಹಾಗೂ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ಶೈಕ್ಷಣಿಕ ಕೋರ್ಸ್‌ಗಳಿಗೆ ಮತ್ತು ಹುದ್ದೆಗಳಿಗೆ ಎನ್.ಸಿ.ಸಿ. ಯ ಮೀಸಲಾತಿ ಬಗ್ಗೆ ಹಾಗೂ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡುವ ಸದಾವಕಾಶ ಎನ್.ಎನ್.ಸಿ. ವತಿಯಿಂದ ದೊರಕಲಿದೆ ಎಂದು ಹೇಳಿದರು.ಅಡ್ಮಿನಿಸ್ಟ್ರೇಟಿವ್ ಆಫೀಸರ್ ಕರ್ನಲ್ ನರೇಂದ್ರ ಭಂಡಾರಿ, ಸುಬೇದಾರ್ ಮೇಜರ್ ಯೋಗೀಶ್, ಉಪಪ್ರಾಂಶುಪಾಲ ಜೆ. ಶ್ರೀನಿವಾಸ್, ಕುಮಾರಿ ಚೈತ್ರ ಪಿ.ಎಸ್.,ಎನ್.ಸಿ.ಸಿ. ಅಧಿಕಾರಿ ಅನಿಲ್ ಕುಮಾರ್, ಎಂ.ಎಸ್. ಶ್ರೀಧರ್, ಗೌರಿಶಂಕರ್ ಉಪಸ್ಥಿತರಿದ್ದರು.