ಮತಗಟ್ಟೆಗಳಿಗೆ ಭೇಟಿ ನೀಡಿದ ಎನ್‌ಡಿಎ ಅಭ್ಯರ್ಥಿ ನಿಖಿಲ್

| Published : Nov 14 2024, 12:56 AM IST

ಸಾರಾಂಶ

ಚನ್ನಪಟ್ಟಣ: ಮತದಾನ ದಿನವಾದ ಇಂದು ಬೇವೂರು, ತಿಟ್ಟಮಾರನಹಳ್ಳಿ, ತಗಚಗೆರೆ, ನೀಲಸಂದ್ರ ಗ್ರಾಮ, ಚಿಕ್ಕನದೊಡ್ಡಿ, ತಿಟ್ಟಮರನಹಳ್ಳಿ ಪಟ್ಲು, ಕೋಟೆ, ಚನ್ನಪಟ್ಟಣ ಟೌನ್, ಪಟ್ಟೆಕೆರೆ, ಯಲಚಿಪಾಳ್ಯ, ಹುಚ್ಚಯ್ಯನ ದೊಡ್ಡಿ, ಗೊಲ್ಲರದೊಡ್ಡಿ, ಬ್ರಹ್ಮಣಿಪುರ ಸೇರಿದಂತೆ ಇನ್ನಿತರ ಮತಗಟ್ಟೆಗಳಿಗೆ ಎನ್ ಡಿ ಎ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು.

ಚನ್ನಪಟ್ಟಣ: ಮತದಾನ ದಿನವಾದ ಇಂದು ಬೇವೂರು, ತಿಟ್ಟಮಾರನಹಳ್ಳಿ, ತಗಚಗೆರೆ, ನೀಲಸಂದ್ರ ಗ್ರಾಮ, ಚಿಕ್ಕನದೊಡ್ಡಿ, ತಿಟ್ಟಮರನಹಳ್ಳಿ ಪಟ್ಲು, ಕೋಟೆ, ಚನ್ನಪಟ್ಟಣ ಟೌನ್, ಪಟ್ಟೆಕೆರೆ, ಯಲಚಿಪಾಳ್ಯ, ಹುಚ್ಚಯ್ಯನ ದೊಡ್ಡಿ, ಗೊಲ್ಲರದೊಡ್ಡಿ, ಬ್ರಹ್ಮಣಿಪುರ ಸೇರಿದಂತೆ ಇನ್ನಿತರ ಮತಗಟ್ಟೆಗಳಿಗೆ ಎನ್ ಡಿ ಎ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಭೇಟಿ ನೀಡಿದರು.

ಮತಗಟ್ಟೆಗೆ ಭೇಟಿ ನೀಡಿದ ವೇಳೆ ಕೈ ಮುಗಿದು ಮತದಾರರಲ್ಲಿ ಮತ ನೀಡುವಂತೆ ಮನವಿ ಮಾಡಿದ ನಿಖಿಲ್ ಕುಮಾರಸ್ವಾಮಿ ಅವರ ಜತೆ ಸೆಲ್ಫಿ ತೆಗೆದುಕೊಂಡು ನಮ್ಮ ಮತ ನಿಮಗೆ, ಈ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತೀರಾ. ನಮ್ಮ ಶಾಸಕರು ನೀವೇ ಎಂದು ಭರವಸೆಯನ್ನು ನೀಡಿದರು.

ನೀವು ಎಂಎಲ್ ಎ ಆಗ್ತೀರ, ನಂಬಿಕೆ ಇದೆ:

ಮತಗಟ್ಟೆಗಳಿಗೆ ಭೇಟಿ ನೀಡಿದ ವೇಳೆ ನಿಖಿಲ್ ಕುಮಾರಸ್ವಾಮಿ ಅವರಿಗೆ ನೀವು ಎಂಎಲ್ ಎ ಆಗುತ್ತೀರಾ ನಮಗೆ ನಂಬಿಕೆ ಇದೆ ಎಂದು ಭರವಸೆ ಕೊಟ್ಟರು. ಇದೇ ವೇಳೆ ಮತದಾರರು ಗೆಲ್ತಾರಪ್ಪ ಗೆಲ್ತಾರೆ ನಿಖಿಲ್ ಅಣ್ಣ ಗೆಲ್ತಾರೆ ಎಂದು ಘೋಷಣೆ ಕೂಗಿದರು..

ಒಬ್ಬಟ್ಟು ಸವಿದ ನಿಖಿಲ್ :

ತಿಟ್ಟಮಾರನಹಳ್ಳಿ ಮತಗಟ್ಟೆ ಭೇಟಿಯ ವೇಳೆ ಅಭಿಮಾನಿ ಯುವತಿಯೊಬ್ಬಳು ನಾವು ನಿಮ್ಮ ದೊಡ್ಡ ಅಭಿಮಾನಿ ನಮ್ಮ ಮನೇಗೆ ನೀವು ಬರಬೇಕು ಎಂದು ಯುವತಿ ಮನವಿ ಮಾಡಿದರು, ನಂತರ ಮನೆಗೆ ಭೇಟಿ ನೀಡಿದ ಅವರು ನಿಖಿಲ್ ಅವರು ಒಬ್ಬಟ್ಟು ಸವಿದರು.

ನಿಖಿಲ್ ಅಣ್ಣ ಗೆಲ್ತಾರೆ :

ಚನ್ನಪಟ್ಟಣ ತಾಲೂಕಿನ ದೊಡ್ಡನಹಳ್ಳಿ ಗ್ರಾಮದಲ್ಲಿ ನಿಖಿಲ್ ಅಣ್ಣ ಅವರು ನೂರಕ್ಕೆ ನೂರರಷ್ಟು ಗೆಲುವು ನಿಶ್ಚಿತ, ಚನ್ನಪಟ್ಟಣ ಕ್ಷೇತ್ರದಿಂದ ಶಾಸಕರಾಗಿ ವಿಧಾನಸಭೆಗೆ ಹೋಗುತ್ತಾರೆ. ಯುವ ಪೀಳಿಗೆಗೆ ನಿಖಿಲ್ ಅಣ್ಣ ಅಂತವರು ರಾಜಕೀಯದಲ್ಲಿ ಇರಬೇಕು. ವಿಧಾನ ಸಭೆಯಲ್ಲಿ ಅವರು ಯುವ ಸಮುದಾಯದ ಪರವಾಗಿ ಕೆಲಸ ಮಾಡ್ತಾರೆ ಎಂದು ಘೋಷಣೆ ಕೂಗಿದರು.

ಮತಗಟ್ಟೆಗಳಿಗೆ ಭೇಟಿ ನೀಡಿದ ವೇಳೆ ಮಾತನಾಡಿದ ನಿಖಿಲ್ ಅವರು,ಚನ್ನಪಟ್ಟಣ ಜನರು ನನಗೆ ತೋರಿದ ಪ್ರೀತಿ ಮತ್ತು ವಾತ್ಸಲ್ಯವನ್ನು ನಾನು ಎಂದಿಗೂ ಮರೆಯುವುದಿಲ್ಲ. ಅವರ ಪ್ರೀತಿಗೆ ಅಭಿಮಾನಕ್ಕೆ ಕಾಣಿಕೆಯಾಗಿ ನಾನು ಇಲ್ಲಿ ಕೆಲಸ ಮಾಡಲಿದ್ದೇನೆ. ಅವರು ನನಗೆ ಅವಕಾಶವನ್ನು ನೀಡಲಿದ್ದಾರೆ ಎಂಬ ಭರವಸೆ ಇದೆ ಎಂದು ತಿಳಿಸಿದರು.

13ಕೆಆರ್ ಎಂಎನ್ 10.ಜೆಪಿಜಿ

ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡ ಮತದಾರರು.

-----------------------------