ತಾಲೂಕಿನ ಕಾಳಿದಾಸ ಸ್ಕೂಲ್, ಸರ್ಕಾರಿ ಜೂನಿಯರ್ ಕಾಲೇಜು, ಸರ್ಕಾರಿ ಹೈಸ್ಕೂಲ್, ರಾಘವೇಂದ್ರ ಶಾಲೆ, ಗರ್ಲ್ಸ್ ಹೈಸ್ಕೂಲ್, ಚಾಣಕ್ಯ ಸ್ಕೂಲ್, ಜಿಕೆ ಮೆಮೋರಿಯಲ್ ಸ್ಕೂಲ್, ನ್ಯಾಯಾಲಯ ಸಂಕೀರ್ಣ, ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರಿಯದರ್ಶಿನಿ ಕಾಲೇಜು ಹಾಗೂ ರವೀಂದ್ರ ಭಾರತಿ ಸ್ಕೂಲ್, ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸರ್ಕಾರಿ ನೌಕರರು ಹಾಗೂ ನೋಂದಾಯಿತ ಪದವೀಧರ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪದವೀಧರರ ಜ್ವಲಂತ ಸಮಸ್ಯೆಗಳು ಹಾಗೂ ಅವರ ಬೇಡಿಕೆಗಳ ಪರ ನಿಂತು ಕೆಲಸ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಎನ್‌ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ತಿಳಿಸಿದರು.

ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ಮುಗಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪದವೀಧರ ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ, ಗುತ್ತಿಗೆ ಹಾಗೂ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಖಾಸಗಿ ಶಾಲಾ-ಕಾಲೇಜು ಶಿಕ್ಷಕರ ಸಮಸ್ಯೆಗಳ ಪರಿಹಾರ ಸೇರಿ ಪದವೀಧರರ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ತಿನಲ್ಲಿ ಪ್ರಬಲವಾಗಿ ಹೋರಾಟ ಮಾಡುತ್ತೇನೆ. ಪದವೀಧರರು ತಮ್ಮ ಅಮೂಲ್ಯ ಮತ ನೀಡಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಕಾಮರಾಜು ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಎನ್‌ಡಿಎ ವತಿಯಿಂದ ಕೆ.ಎಂ. ಸುರೇಶ್ ಅವರನ್ನು ಕಣಕ್ಕೆ ಇಳಿಸಿದ್ದು, ಪಕ್ಷದ ಕಾರ್ಯಕರ್ತರು ಗೆಲವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ಮಂಡಲ ಅಧ್ಯಕ್ಷ ರುದ್ರೇಶ್ ಮಾತನಾಡಿ, ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ೪ ಸಾವಿರಕ್ಕೂ ಹೆಚ್ಚು ಪದವೀದರ ಮತದಾರರು ಇದ್ದು, ಅದರಲ್ಲಿ ೩ ಸಾವಿರಕ್ಕೂ ಹೆಚ್ಚು ಮತ ಸುರೇಶ್‌ಗೆ ಬರಲಿವೆ. ಇಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಕೂಡ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.ಬಾಕ್ಸ....

ಭರ್ಜರಿ ಮತಯಾಚನೆ

ತಾಲೂಕಿನ ಕಾಳಿದಾಸ ಸ್ಕೂಲ್, ಸರ್ಕಾರಿ ಜೂನಿಯರ್ ಕಾಲೇಜು, ಸರ್ಕಾರಿ ಹೈಸ್ಕೂಲ್, ರಾಘವೇಂದ್ರ ಶಾಲೆ, ಗರ್ಲ್ಸ್ ಹೈಸ್ಕೂಲ್, ಚಾಣಕ್ಯ ಸ್ಕೂಲ್, ಜಿಕೆ ಮೆಮೋರಿಯಲ್ ಸ್ಕೂಲ್, ನ್ಯಾಯಾಲಯ ಸಂಕೀರ್ಣ, ಸರ್ಕಾರಿ ಪದವಿಪೂರ್ವ ಕಾಲೇಜು, ಪ್ರಿಯದರ್ಶಿನಿ ಕಾಲೇಜು ಹಾಗೂ ರವೀಂದ್ರ ಭಾರತಿ ಸ್ಕೂಲ್, ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಸರ್ಕಾರಿ ನೌಕರರು ಹಾಗೂ ನೋಂದಾಯಿತ ಪದವೀಧರ ಮತದಾರರನ್ನು ಭೇಟಿಯಾಗಿ ಮತಯಾಚನೆ ಮಾಡಿದರು.

ಈ ಸಂದರ್ಭದಲ್ಲಿ ಎನ್‌ಡಿಎ ಮುಖಂಡರಾದ ಪವನ್‌ಕುಮಾರ್, ನಟರಾಜು, ವೀರಕ್ಯಾತರಾಯ, ಚಿಕ್ಕರಂಗಯ್ಯ, ಹಿಮಾನಂದ್, ಪ್ರದೀಪ್, ಶ್ರೀಧರ್, ಮಮತಾ, ವಸಂತಕುಮಾರ್, ಹನುಮಂತರಾಜು, ರಂಗಣ್ಣ, ಅರುಣ್, ಮಂಜುನಾಥ್, ಕಾಕಿ ಮಲ್ಲಯ್ಯ, ಬಸವರಾಜು, ವಿವಿಧ ಮೋರ್ಚಾಗಳ ಪದಾಧಿಕಾರಿಗಳು, ಜೆಡಿಎಸ್ ಮುಖಂಡರು ಹಾಗೂ ಪದವೀಧರ ಮತದಾರರು ಉಪಸ್ಥಿತರಿದ್ದರು.