ಈಗಾಗಲೇ ಪದವೀಧರರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಉದ್ಯೋಗ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಅತಿಥಿ ಉಪನ್ಯಾಸರಿಗೆ ಸೇವಾ ಭದ್ರತೆ ಒದಗಿಸಲು ನಿಯಮಾನುಸಾರ ಕ್ರಮ, ಗುತ್ತಿಗೆ ಮತ್ತು ಖಾಸಗಿ ಶಾಲಾ -ಕಾಲೇಜುಗಳ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಮತ್ತು ಪದವೀಧರರ ಬೇಡಿಕೆಗಳನ್ನು ಬಗೆಹರಿಸಲು ವಿಧಾನ ಪರಿಷತ್ತಿನಲ್ಲಿ ಪ್ರಬಲವಾಗಿ ತಮ್ಮ ಪರ ನಿಂತು ಹೋರಾಟ ಮಾಡುತ್ತೇನೆ. ಆದ್ದರಿಂದ ಪದವೀಧರರು ಮನಸ್ಸು ಮಾಡಿ ತಮ್ಮ ಅಮೂಲ್ಯ ಮತ ಕೊಟ್ಟು ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸುರೇಶ್ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ನಿರುದ್ಯೋಗಿ ಪದವೀಧರರ ಬೇಡಿಕೆಗಳಿಗೆ ಅನುಗುಣವಾಗಿ ಕೆಲಸ ಮಾಡಲು ನಾನು ಸದಾ ಸಿದ್ಧನಿದ್ದೇನೆ. ಈ ನಿಮ್ಮ ಪರ ವಿಧಾನ ಪರಿಷತ್ತಿನಲ್ಲಿ ಪ್ರಬಲವಾಗಿ ನಿಂತು ಸಮಸ್ಯೆಗಳನ್ನು ನಿವಾರಿಸಲು ಬದ್ಧನಾಗಿದ್ದೇನೆ. ಇದಕ್ಕೆ ತಾವು ನನಗೆ ತಮ್ಮ ಅಮೂಲ್ಯ ಮತ ಕೊಟ್ಟು ಆಶೀರ್ವಾದ ಮಾಡಬೇಕು ಎಂದು ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಮನವಿ ಮಾಡಿದರು.

ತಾಲೂಕಿನ ಚಿಕ್ಕಮಾಲೂರು ಸರ್ಕಾರಿ ಪ್ರೌಢಶಾಲೆ, ಕೊಡಿಗೇನಹಳ್ಳಿ ಸರ್ವೋದಯ ಪ್ರೌಢಶಾಲೆ, ಕಲಿದೇವಪುರ, ಕಡಗತ್ತೂರು, ಪೋನೇನಹಳ್ಳಿ ಸೇರಿ ಕೆಲವು ಪ್ರಾಥಮಿಕ ಶಾಲಾ ಕೇಂದ್ರಗಳೂ ಸೇರಿ ತಾಲೂಕಿನ 33 ಗ್ರಾಪಂ ವ್ಯಾಪ್ತಿಯಲ್ಲಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮತ ಯಾಚಿಸಿದ ನಂತರ ಪಟ್ಟಣದ ರಾಘವೇಂದ್ರ ಕಾಲೋನಿಯಲ್ಲಿರುವ ಎನ್‌ಡಿಎ ಕಚೇರಿಯಲ್ಲಿ ಮತದಾರರು, ಮುಖಂಡರು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು..

ಈಗಾಗಲೇ ಪದವೀಧರರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಉದ್ಯೋಗ ಕಲ್ಪಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ. ಅಲ್ಲದೆ ಅತಿಥಿ ಉಪನ್ಯಾಸರಿಗೆ ಸೇವಾ ಭದ್ರತೆ ಒದಗಿಸಲು ನಿಯಮಾನುಸಾರ ಕ್ರಮ, ಗುತ್ತಿಗೆ ಮತ್ತು ಖಾಸಗಿ ಶಾಲಾ -ಕಾಲೇಜುಗಳ ಶಿಕ್ಷಕರ ಜ್ವಲಂತ ಸಮಸ್ಯೆಗಳನ್ನು ಮತ್ತು ಪದವೀಧರರ ಬೇಡಿಕೆಗಳನ್ನು ಬಗೆಹರಿಸಲು ವಿಧಾನ ಪರಿಷತ್ತಿನಲ್ಲಿ ಪ್ರಬಲವಾಗಿ ತಮ್ಮ ಪರ ನಿಂತು ಹೋರಾಟ ಮಾಡುತ್ತೇನೆ. ಆದ್ದರಿಂದ ಪದವೀಧರರು ಮನಸ್ಸು ಮಾಡಿ ತಮ್ಮ ಅಮೂಲ್ಯ ಮತ ಕೊಟ್ಟು ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಸುರೇಶ್ ಮನವಿ ಮಾಡಿದರು.

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ಕೆ.ಎಸ್. ಪಾಂಡುರಂಗಾರೆಡ್ಡಿ ಮಾತನಾಡಿ, ಮಧುಗಿರಿ ತಾಲೂಕಿನಲ್ಲಿ ನಾಲ್ಕೂವರೆ ಸಾವಿರಕ್ಕೂ ಅಧಿಕ ಮತದಾರರಿದ್ದು, ಈ ಬಾರಿ ಮತದಾರರು ದೊಡ್ಡ ಮನಸ್ಸು ಮಾಡಿ ಎನ್‌ಡಿಎ ಅಭ್ಯರ್ಥಿ ಸುರೇಶ್ ಅವರಿಗೆ ಮತ ನೀಡಿ ಗೆಲ್ಲಿಸಿದರೆ ತಮ್ಮ ಪರ ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುವ ಜೊತೆಗೆ ತಮ್ಮ ಬೇಡಿಕೆ ಪ್ರಮಾಣಿಕವಾಗಿ ಈಡೇರಿಸುತ್ತಾರೆ ಎಂಬ ಭರವಸೆ ನಮಗಿದೆ. 3500 ಸಾವಿರಕ್ಕೂ ಅಧಿಕ ಮತಗಳು ಬರಲಿದ್ದು, ಇದರಲ್ಲಿ ಯಾವುದೇ ಅನುಮಾನ ಬೇಡ. ಆದ್ದರಿಂದ ಎಲ್ಲರೂ ಒಗ್ಗೂಡಿ ಸುರೇಶ್ ಅವರ ಗೆಲುವಿಗೆ ಪ್ರಮಾಣಿಕ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಎಸ್‌.ಶ್ರೀನಿವಾಸ್ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆಶೀರ್ವಾದ ಮತ್ತು ಪ್ರಧಾನಿ ಮೋದಿ ಅವರು ಸುರೇಶ್ ಅವರನ್ನು ಚುನಾವಣಾ ಕಣಕ್ಕಿಳಿಸಿದ್ದು, ನಮ್ಮ ಪಕ್ಷದ ಎಲ್ಲರೂ ಸೇರಿ ಸುರೇಶ್ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.ಪುರಸಭೆ ಮಾಜಿ ಸದಸ್ಯ ಎಂ.ಎಲ್‌. ಗಂಗರಾಜು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನರಸೇಗೌಡ, ಶ್ರೀಧರ್, ಮುಖಂಡರಾದ ಟಿ. ಗೋವಿಂದರಾಜು, ಮಾಜಿ ಅಧ್ಯಕ್ಷ ಬಡವನಹಳ್ಳಿ ಬಸವರಾಜು, ಸೀತರಾಮ್, ಎಸ್‌.ಡಿ. ಕೃಷ್ಣಪ್ಪ, ಸುಬ್ಬಣ್ಣ, ಕೊರಟಗೆರೆ ಮಂಡಲಾಧ್ಯಕ್ಷ ರುದ್ರೇಶ್, ರಾಜ್ಯ ಪ್ರಕೋಷ್ಠದ ವಸಂತಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ರಾಜ್, ರಮೇಶ್, ಚೇತನ್, ಮಂಜಣ್ಣ, ಮಂಜುನಾಥ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರತ್ನಮ್ಮ, ತಾ. ಅಧ್ಯಕ್ಷೆ ಸ್ವರ್ಣಾಂಬಿಕೆ, ಶೈಲಾಜ ಸೇರಿದಂತೆ ಅನೇಕರು ಇದ್ದರು.