ಐದು ಜಿಲ್ಲೆಗಳಲ್ಲಿ 36 ತಾಲೂಕುಗಳಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪರ ಹೆಚ್ಚು ಒಲವಿದ್ದು ಈ ಬಾರಿ ಅತ್ಯಧಿಕ ಅಂತರಗಳಲ್ಲಿ ಗೆಲುವನ್ನು ಪಡೆಯುತ್ತಾರೆ. ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕಾರ್ಯಕರ್ತರು ತಾಲೂಕು ಮಟ್ಟದಲ್ಲಿ ಹೋಬಳಿ ಮಟ್ಟದಲ್ಲಿ ಮತದಾರರನ್ನು ಭೇಟಿ ಮಾಡಿ ಮತ ಹಾಕಿಸಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ರಾಜ್ಯದ ಮೈತ್ರಿನಾಯಕರ ಮುಂದಿನ ಯೋಜನೆಗಳು ಸುರೇಶ್ ಗೆಲವಿಗೆ ಕಾರಣವಾಗಲಿವೆ.

ಹೊಸಕೆರೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಎನ್‌ಡಿಎ ಅಭ್ಯರ್ಥಿ ಪರ ಮತಯಾಚನೆ

ಕನ್ನಡಪ್ರಭ ವಾರ್ತೆ ಗುಬ್ಬಿಆಗ್ನೇಯ ಪದವೀಧರರ ಕ್ಷೇತ್ರದ ಎನ್.​ಡಿ.ಎ. ಅಭ್ಯರ್ಥಿ ಕೆ.ಎಂ. ಸುರೇಶ್ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಕೆಪಿ ರಾಜು ವಿಶ್ವಾಸ ವ್ಯಕ್ತಪಡಿಸಿದರು. ತಾಲೂಕಿನ ಹಾಗಲವಾಡಿ ಹೋಬಳಿ ಹೊಸಕೆರೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಎನ್‌.ಡಿ.ಎ. ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಮತಯಾಚಿಸಿ ಮಾತನಾಡಿದ ಅವರು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಎಂದೂ ಸೋತಿಲ್ಲ. ಈ ಬಾರಿಯೂ ಕೂಡ ಕೆ.ಎಂ. ಸುರೇಶ್ ಅತ್ಯಧಿಕ ಮತಗಳ ಅಂತರದಿಂದ ಗೆಲವು ಪಡೆಯುತ್ತಾರೆ. ಪದವೀಧರ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಭರ್ಜರಿಯಾಗಿ ಮತಯಾಚನೆ ಮಾಡುತ್ತಿದ್ದು ಕ್ಷೇತ್ರಗಳಲ್ಲಿ ಮತದಾರರು ಎನ್.ಡಿ.ಎ ಅಭ್ಯರ್ಥಿ ಪರ ಹೆಚ್ಚು ಒಲವು ತೋರುತ್ತಿದ್ದಾರೆ. ಈ ಬಾರಿಯೂ ಕೂಡ ಎನ್.ಡಿ.ಎ ಅಭ್ಯರ್ಥಿ ಗೆಲವನ್ನು ಪಡೆಯುತ್ತಾರೆ ಎಂದರು. ಸುರೇಶ್ ಅವರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ಹಾಕುವುರ ಮೂಲಕ ಗೆಲವಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಯತೀಶ್ ಮಾತನಾಡಿ ಐದು ಜಿಲ್ಲೆಗಳಲ್ಲಿ 36 ತಾಲೂಕುಗಳಲ್ಲಿ ಎನ್‌ಡಿಎ ಅಭ್ಯರ್ಥಿ ಕೆ.ಎಂ.ಸುರೇಶ್ ಪರ ಹೆಚ್ಚು ಒಲವಿದ್ದು ಈ ಬಾರಿ ಅತ್ಯಧಿಕ ಅಂತರಗಳಲ್ಲಿ ಗೆಲುವನ್ನು ಪಡೆಯುತ್ತಾರೆ. ಬಿಜೆಪಿ - ಜೆಡಿಎಸ್ ಕಾರ್ಯಕರ್ತರು ಅಭ್ಯರ್ಥಿ ಗೆಲುವಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕಾರ್ಯಕರ್ತರು ತಾಲೂಕು ಮಟ್ಟದಲ್ಲಿ ಹೋಬಳಿ ಮಟ್ಟದಲ್ಲಿ ಮತದಾರರನ್ನು ಭೇಟಿ ಮಾಡಿ ಮತ ಹಾಕಿಸಬೇಕು. ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ರಾಜ್ಯದ ಮೈತ್ರಿನಾಯಕರ ಮುಂದಿನ ಯೋಜನೆಗಳು ಸುರೇಶ್ ಗೆಲವಿಗೆ ಕಾರಣವಾಗಲಿವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಸ್‌ಟಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್ , ಬಿಜೆಪಿ ತಾಲೂಕು ಕಾರ್ಯದರ್ಶಿ ಸಂಗನಹಳ್ಳಿ ಬಸವರಾಜು ಹಾಗಲವಾಡಿ ಹೋಬಳಿ ಅಧ್ಯಕ್ಷ ರಾಜ್ ಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಹಾರುದ್ರಸ್ವಾಮಿ, ಮುಖಂಡರಾದ ಶಿವನೇಹಳ್ಳಿ ಜಯಣ್ಣ, ರುದ್ರೇಶ್ ಪಲ್ಲಕ್ಕಿ, ಮಣಿಕಂಠ, ರಂಗನಾಥ್, ಸಿದ್ದಪ್ಪ, ಜಯಣ್ಣ, ಶ್ರೀನಿವಾಸ್ ಮೂರ್ತಿ ಹಾಗೂ ಎನ್‌ಡಿಎ ಕಾರ್ಯಕರ್ತರು ಭಾಗವಹಿಸಿದ್ದರು.