ಕೊಡಗಿಗೆ ಎನ್ ಡಿ ಆರ್ ಎಫ್ ತಂಡ ಆಗಮನ

| Published : Jun 02 2024, 01:46 AM IST / Updated: Jun 02 2024, 11:18 AM IST

ಸಾರಾಂಶ

ಎನ್‌ಡಿಆರ್‌ಎಫ್‌ ತಂಡ ಕೊಡಗು ಜಿಲ್ಲೆಗೆ ಆಗಮಿಸಿದೆ. ತಂಡದಲ್ಲಿ 25 ಪರಿಣಿತರಿದ್ದಾರೆ. ಅಗತ್ಯ ಮುನ್ನಚ್ಚರ ವಹಿಸುವ ಸಂಬಂಧ ಜಿಲ್ಲೆಗೆ ಭೇಟಿ ನೀಡಿದೆ.

ಮಡಿಕೇರಿ :  ಇನ್ನೇನು ಮುಂಗಾರು ಮಳೆ ಆಗಮನವಾಗುವ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಎದುರಿಸುವಲ್ಲಿ ಅಗತ್ಯ ಮುನ್ನೆಚ್ಚರ ವಹಿಸುವ ಸಂಬಂಧ ಎನ್ ಡಿ ಆರ್ ಎಫ್ ತಂಡವು ಶನಿವಾರ ಕೊಡಗು ಜಿಲ್ಲೆಗೆ ಆಗಮಿಸಿದೆ.

ಎನ್ ಡಿ ಆರ್ ಎಫ್ ತಂಡದಲ್ಲಿ 25 ಪರಿಣತರಿದ್ದು, ಇವರನ್ನು ಕುಶಾಲನಗರ ತಾಲೂಕು ಆಡಳಿತ ಬರಮಾಡಿಕೊಂಡಿತು. ಈ ಸಂದರ್ಭ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಅನನ್ಯ ವಾಸುದೇವ ಇದ್ದರು.

2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ಪ್ರವಾಹ ಹಿನ್ನೆಲೆಯಲ್ಲಿ ಸಾಕಷ್ಟು ನಷ್ಟ ಉಂಟಾಗಿತ್ತು. ಅಲ್ಲದೆ ಮಳೆಯಿಂದಾಗಿ ಕೆಲವರು ತಮ್ಮ ಜೀವ ಕಳೆದುಕೊಂಡಿದ್ದರು. ಇದರಿಂದ ಪ್ರತಿ ಬಾರಿ ಮಳೆಗಾಲದ ಸಂದರ್ಭ ಕೊಡಗಿಗೆ ಮುನ್ನಚ್ಚೆರಿಕಾ ಕ್ರಮವಾಗಿ ಎನ್ ಡಿ ಆರ್ ಎಫ್ ತಂಡ ಆಗಮಿಸಿ ಜಿಲ್ಲೆಯಲ್ಲಿ ವಾಸ್ತವ್ಯ ಹೂಡುವ ಮೂಲಕ ರಕ್ಷಣಾ ಕೆಲಸದಲ್ಲಿ ತೊಡಗಿಸಿಕೊಂಡಿದೆ.