ಮರಳಿನಲ್ಲಿ ಅಯೋಧ್ಯೆ ಮಾದರಿಯ ಶ್ರೀರಾಮಮಂದಿರ

| Published : Jan 24 2024, 02:02 AM IST

ಮರಳಿನಲ್ಲಿ ಅಯೋಧ್ಯೆ ಮಾದರಿಯ ಶ್ರೀರಾಮಮಂದಿರ
Share this Article
  • FB
  • TW
  • Linkdin
  • Email

ಸಾರಾಂಶ

ಮರಳು ಮತ್ತು ಎಂ. ಸ್ಯಾಂಡ್ ಬಳಸಿ 15 ಅಡಿ ಅಗಲ, 8 ಅಡಿ ಉದ್ದ 6 ಅಡಿ ಎತ್ತರದ ಶ್ರೀರಾಮಮಂದಿರ ಮಾದರಿಯನ್ನು 24 ಗಂಟೆಯ ಅವಧಿಯಲ್ಲಿ ನಿರ್ಮಿಸಿದ್ದು, ಸಾರ್ವಜನಿಕರು ಮರಳು ಕಲಾವಿದನ ಕೈಚಳಕಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

- ಕಲಾವಿದ, ನೃತ್ಯ ನಿರ್ದೇಶಕ ರಘುನಂದನ್ ಕೈಚಳಕ

-----

ಕನ್ನಡಪ್ರಭ ವಾರ್ತೆ ಟಿ. ನರಸೀಪುರ

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಪಟ್ಟಣದ ಯುವ ಕಲಾವಿದ ಹಾಗು ನೃತ್ಯ ನಿರ್ದೇಶಕ ರಘುನಂದನ್ ತಮ್ಮಕೈಚಳಕದಿಂದ ಅಯೋಧ್ಯೆ ಮಾದರಿಯ ಶ್ರೀರಾಮಮಂದಿರವನ್ನು ಮರಳಿನಲ್ಲಿ ಮೂಡಿಸಿ ಗಮನ ಸೆಳೆದಿದ್ದಾರೆ.

ಪಟ್ಟಣದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಸ್ಥಾನದ ಬಳಿಯ ಶ್ರೀ ಬಳ್ಳೇಶ್ವರ ಸ್ವಾಮಿ ದೇವಸ್ಥಾನದ ಮುಂದಿನ ಉದ್ಯಾನವನದಲ್ಲಿ ಮರಳು ಮತ್ತು ಎಂ. ಸ್ಯಾಂಡ್ ಬಳಸಿ 15 ಅಡಿ ಅಗಲ, 8 ಅಡಿ ಉದ್ದ 6 ಅಡಿ ಎತ್ತರದ ಶ್ರೀರಾಮಮಂದಿರ ಮಾದರಿಯನ್ನು 24 ಗಂಟೆಯ ಅವಧಿಯಲ್ಲಿ ನಿರ್ಮಿಸಿದ್ದು, ಸಾರ್ವಜನಿಕರು ಮರಳು ಕಲಾವಿದನ ಕೈಚಳಕಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಕಲಾವಿದ ರಘುನಂದನ್ ಮಾತನಾಡಿ, ಮರಳು ಕಲಾಕೃತಿಗಳನ್ನು ಪ್ರತಿ ಕುಂಭಮೇಳದಲ್ಲಿ ಮಾಡುತ್ತಾ ಬಂದಿದ್ದೇನೆ. ಈ ಬಾರಿ ಅಯೋಧ್ಯೆಯಲ್ಲಿ ಶ್ರೀರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆ ವೇಳೆ ರಾಮಮಂದಿರದ ಕಲಾಕೃತಿ ಮಾಡಬೇಕೆಂಬ ಹಂಬಲನನ್ನದಾಗಿತ್ತು. ನನ್ನ ಆಶಯಕ್ಕೆ ಪೂರಕವಾಗಿ ನನ್ನ ನೆರವಿಗೆ ಬೆಳಕು ಫೌಂಡೇಷನ್ ಸಂಸ್ಥೆ ಬಂತು. ಮರಳು ಕಲಾಕೃತಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಅವರೇ ವಹಿಸಿಕೊಂಡಿದ್ದರಿಂದ ಅಯೋಧ್ಯೆಯ ಮಾದರಿಯ ರಾಮಮಂದಿರದ ಕಲಾಕೃತಿ ಉತ್ತಮವಾಗಿ ಮೂಡಿ ಬಂತು ಎಂದು ಸಂತಸ ವ್ಯಕ್ತ ಪಡಿಸಿದರು.

ಇದೀಗ ಮರಳಿನ ಕಲಾಕೃತಿಯ ಶ್ರೀರಾಮ ಮಂದಿರ ಎಲ್ಲರ ಗಮನ ಸೆಳೆದಿದೆ. ರಘುನಂದನ್ ಕಲೆಗೆ ಮೆಚ್ಚುಗೆ ವ್ಯಕ್ತವಾಗಿದೆ.