ಸಾರಾಂಶ
ಎಸ್.ಆರ್.ಕೆ. ಹೋಟೆಲ್ ಮಾಲೀಕರಾದ ಶಿವಪ್ರಕಾಶ್ ಅವರಿಗೆ ಶುಭ ಹಾರೈಸಿದರು.
ಕನ್ನಡಪ್ರಭ ವಾರ್ತೆ ನಂಜನಗೂಡು ಪಟ್ಟಣದ ಸಮೀಪದ ಮಹದೇವನಗರ ಬಳಿ ನೂತನವಾಗಿ ನಿರ್ಮಿಸಲಾಗಿರುವ ಎಸ್.ಎಮ್.ಪಿ. ಗ್ರೂಪ್ ಅವರ ಎಸ್.ಆರ್.ಕೆ. ನೂತನ ಹೋಟೆಲ್ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.ಶಾಸಕ ದರ್ಶನ್ ಧ್ರುವನಾರಾಯಣ್ ಮತ್ತು ಗುಂಡ್ಲುಪೇಟೆ ಕ್ಷೇತ್ರದ ಶಾಸಕ ಗಣೇಶ್ ಪ್ರಸಾದ್ ಹೋಟೆಲ್ಉದ್ಘಾಟಿಸಿ, ಎಸ್.ಆರ್.ಕೆ. ಹೋಟೆಲ್ ಮಾಲೀಕರಾದ ಶಿವಪ್ರಕಾಶ್ ಅವರಿಗೆ ಶುಭ ಹಾರೈಸಿದರು.ಮಾಜಿ ಶಾಶಕ ಕಳಲೆ ಕೇಶವ ಮೂರ್ತಿ, ವೀರಶೈವ ಮಹಾಸಭಾ ನಂಜನಗೂಡು ತಾಲೂಕು ಅಧ್ಯಕ್ಷರು, ಸಿಂಧುವಳ್ಳಿ ಕೆಂಪಣ್ಣ, ಬಿಜೆಪಿ ಮುಖಂಡ ಕುಂಬ್ರಳ್ಳಿ ಸುಬ್ಬಣ್ಣ, ಬದನವಾಳು ಗ್ರಾಪಂ ಸದಸ್ಯ ಮಂಜಣ್ಣ, ಬಿಜೆಪಿ ಪ್ರಧಾನ ಕಾರ್ಯದರ್ಶಿ ದಿಲೀಪ್ ಕುಮಾರ್, ಯುವ ಕಾಂಗ್ರೆಸ್ ಮುಖಂಡ ಚಂದನ್ ಗೌಡ, ಬಿಜೆಪಿ ಮುಖಂಡ ಕೃಷ್ಣಪ್ಪಗೌಡ, ಮುಖಂಡರಾದ ಡಿ.ಪಿ. ಉಮೇಶ್, ಸಿ. ಗುರುಸ್ವಾಮಿ, ಮಂಗಳ ಶಿವಕುಮಾರ್, ಜಿನೈನ್ ಪ್ರಾಜೆಕ್ಟ್ ಕಿರಣ್ ನಾಗಚಾರ್, ಯಮಹ ಶೋ ರೂಮ್ ಮಾಲೀಕ ವಿನಯ್ ಇದ್ದರು.