ಜನರಿಗೆ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ: ಶಾಸಕ ಬಸನಗೌಡ

| Published : Mar 10 2024, 01:33 AM IST

ಜನರಿಗೆ ನೀರಿನ ತೊಂದರೆಯಾಗದಂತೆ ಅಗತ್ಯ ಕ್ರಮ: ಶಾಸಕ ಬಸನಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಸ್ಕಿ ಕುಡಿವ ನೀರಿನ ಕೆರೆ, ತುಂಗಭದ್ರಾ ಎಡನಾಲೆಗೆ ಅಧಿಕಾರಿಗಳೊಂದಿಗೆ ಶಾಸಕರ ಭೇಟಿ, ಪರಿಶೀಲನೆ. ಕುಡಿಯುವ ನೀರಿಗೆ ಬಳಸಲು ಹಣದ ಕೊರತೆ ಇಲ್ಲ. ಜನರಿಗೆ ದಿನ ಬಳಕೆಗೆ ಮುಖ್ಯವಾಗಿ ನೀರುಬೇಕು ಕೆರೆಯನ್ನು ಸಂಪೂರ್ಣ ಭರ್ತಿಮಾಡಿಕೊಂಡು ನೀರು ಫೋಲಾದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಪಟ್ಟಣದ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಕೆರೆಯನ್ನು ತುಂಬಿಸಿಕೊಂಡು ನೀರು ಪೋಲಾಗದಂತೆ ಎಚ್ಚರ ವಹಿಸಿ ಎಂದು ಅಧಿಕಾರಿಗಳಿಗೆ ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್.ಬಸನಗೌಡ ತುರ್ವಿಹಾಳ ಸೂಚಿಸಿದರು.

ಪಟ್ಟಣದಲ್ಲಿ ತುಂಗಭದ್ರಾ ಎಡನಾಲೆ ಹಾಗೂ ಕುಡಿಯುವ ನೀರು, ಕೆರೆಯನ್ನು ಖಾದಿ ಮತ್ತು ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ ಶಾಸಕ ಆರ್. ಬಸನಗೌಡ ತುರ್ವಿಹಾಳ ಭೇಟಿ ನೀಡಿ ಕಾಲುವೆಯಿಂದ ನೀರನ್ನು ತುಂಬಿಸುವುದನ್ನು ಪರಿಶೀಲನೆ ನಡೆಸಿದರು.

ಇಲ್ಲಿನ ಕುಡಿಯುವ ನೀರಿನ ಕೆರೆಯನ್ನು ತುಂಬಿಸುವುದಕ್ಕಾಗಿ ಕಾಲುವೆಯಿಂದ 10ಎಚ್‌ಪಿ 7 ಮೋಟಾರ್‌ಗಳನ್ನು ಅಳವಡಿಸಿಲಾಗಿದೆ. ಇದರಿಂದ ಕುಡಿಯುವ ನೀರಿನ ಕೆರೆ ತುಂಬಿಸಿಕೊಂಡು ಪಟ್ಟಣದ ಎಲ್ಲಾ ವಾರ್ಡ್‌ಗಳಿಗೆ ನೀರಿನ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರಿಗೆ ಬಳಸಲು ಹಣದ ಕೊರತೆ ಇಲ್ಲ ಆದ್ದರಿಂದ ಜನರಿಗೆ ಯಾವುದೇ ಸಮಸ್ಯೆ ಯಾಗಬಾರದು. ಜನರಿಗೆ ದಿನ ಬಳಕೆಗೆ ಮುಖ್ಯವಾಗಿ ನೀರುಬೇಕು ಕೆರೆಯನ್ನು ಸಂಪೂರ್ಣ ಭರ್ತಿಮಾಡಿಕೊಂಡು ನೀರು ಫೋಲಾದಂತೆ ಎಚ್ಚರಿಕೆ ವಹಿಸಿ ಅಲ್ಲದೇ ಸಾರ್ವಜನಿಕರು ಕೂಡ ನೀರನ್ನು ಮಿತವಾಗಿ ಬಳಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಅರಮನೆ ಸುಧಾ, ಪುರಸಭೆ ಮುಖ್ಯಾಧಿಕಾರಿ ಎಸ್.ಬಿ.ತೋಡಕರ್, ಪಿಎಸ್ಐ ವೈಶಾಲಿ, ಮುಖಂಡರಾದ ಎಚ್.ಬಿ.ಮುರಾರಿ, ಮೈಬುಸಾಬ್ ಮುದ್ದಾಪುರ್, ಆದೇಶ ನಾಯಕ, ಕೃಷ್ಣ ಚಿಗರಿ, ಮಲ್ಲಯ್ಯ ಮುರಾರಿ, ಮಹಾಂತೇಶ್ ಜಾಲಾವಾಡಗಿ, ರವಿಕುಮಾರ್ ಚಿಗರಿ, ಸುರೇಶ್ ಬ್ಯಾಳಿ, ಮಲ್ಲಿಕ್ ಮುರಾರಿ, ಪುರಸಭೆ ಎಂಜಿನಿಯರ್ ಮೀನಾಕ್ಷಮ್ಮ, ಆರ್‌ಐ ಜಗದೀಶ್, ಶಿವಣ್ಣ, ರವಿ ಸಿಂಗ್ ಸೇರಿದಂತೆ ಇತರರಿದ್ದರು.