ಪ್ರೌಢಶಾಲಾ ಕ್ರೀಡಾಕೂಟಕ್ಕೆ ಅಗತ್ಯ ಸಿದ್ಧತೆ

| Published : Jul 02 2025, 12:21 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮಟ್ಟಿ ಆಗಸ್ಟ್‌ 1,2 ರಂದು ಪ್ರಸ್ತುತ 2025-26 ನೇ ಸಾಲಿನ ನಿಡಗುಂದಿ ಎ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಅತಿಥೇಯ ಶಾಲೆಯಲ್ಲಿ ಕ್ರೀಡಾಕೂಟದ ರೂಪರೇಷೆಗಳನ್ನು ಚರ್ಚಿಸಿ ಸಿದ್ದತೆ ಕೈಗೊಳ್ಳಲು ಕರೆಯಲಾಗಿದ್ದ ನಿಡಗುಂದಿ ವ್ಯಾಪ್ತಿಯ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಕ್ರೀಡಾಕೂಟದ ದಿನಾಂಕ ನಿಗದಿ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಆಗಸ್ಟ್‌ 1,2 ರಂದು ಪ್ರಸ್ತುತ 2025-26 ನೇ ಸಾಲಿನ ನಿಡಗುಂದಿ ಎ ವಲಯ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟವನ್ನು ಆಲಮಟ್ಟಿ ಆರ್.ಬಿ.ಪಿ.ಜಿ.ಹಳಕಟ್ಟಿ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಅತಿಥೇಯ ಶಾಲೆಯಲ್ಲಿ ಕ್ರೀಡಾಕೂಟದ ರೂಪರೇಷೆಗಳನ್ನು ಚರ್ಚಿಸಿ ಸಿದ್ದತೆ ಕೈಗೊಳ್ಳಲು ಕರೆಯಲಾಗಿದ್ದ ನಿಡಗುಂದಿ ವ್ಯಾಪ್ತಿಯ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಪೂರ್ವಭಾವಿ ಸಭೆಯಲ್ಲಿ ಕ್ರೀಡಾಕೂಟದ ದಿನಾಂಕ ನಿಗದಿ ಮಾಡಲಾಯಿತು.

ಕ್ರೀಡಾಕೂಟದ ಸಂಘಟನಾ ಅಧ್ಯಕ್ಷ ಹಳಕಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರೀಡಾಕೂಟದ ಯಶಸ್ಸಿಗೆ ಪೂರ್ವ ತಯಾರಿ ಮಾಡಿಕೊಳ್ಳಲು ನಿರ್ಧರಿಸಲಾಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ ದೈಹಿಕ ಶಿಕ್ಷಕರ ಸೂಕ್ತ ಸಲಹೆ, ಸೂಚನೆಗಳನ್ನು ಆಲಿಸಿ ಕ್ರೀಡಾಕೂಟದ ದಿನಾಂಕ ನಿಗದಿ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಿ ಕ್ರೀಡಾಕೂಟ ಯಶಸ್ಸಿಗೆ ನಿರ್ಣಯ ಕೈಗೊಳ್ಳಲಾಯಿತು.ಈ ವೇಳೆ ಮಾತನಾಡಿದ ಜಿ.ಎಂ.ಕೋಟ್ಯಾಳ, ದೈಹಿಕ ಶಿಕ್ಷಕರ ಬಳಗದ ಸಹಕಾರ ಕ್ರೀಡಾಕೂಟ ಯಶಸ್ಸಿಗೆ ಅತ್ಯಗತ್ಯ. ಅಚ್ಚುಕಟ್ಟಾಗಿ ಯಾವುದೇ ಸಮಸ್ಯೆಗಳಾಗದಂತೆ ಕೂಟ ನೆರವೇರಿಸಿಕೊಡಲು ಮನವಿ ಮಾಡಿದರು. ಸ್ವಾಗತ ಸಮಿತಿ, ನ್ಯಾಯದಾನ ಸಮಿತಿ, ಪಥ ಸಂಚಲನ ಸಮಿತಿ, ವೈದ್ಯಕೀಯ ಸಮಿತಿ, ಪರಿಶೀಲನಾ ಸಮಿತಿ, ಬಹುಮಾನ ದಾಖಲಾತಿ ಸಮಿತಿ, ವೇದಿಕೆ ಸಮಿತಿ, ಉಪಹಾರ ಹಾಗೂ ಊಟದ ವ್ಯವಸ್ಥಾಪಕ ಸಮಿತಿ, ಆಟದ ಸಾಮಗ್ರಿಗಳ ಸಮಿತಿ, ವೈಯಕ್ತಿಕ ಹಾಗೂ ಗುಂಪು ಆಟಗಳ ಸಮಿತಿ, ತಾಂತ್ರಿಕ ಸಲಹಾ ಸಮಿತಿ ರಚಿಸಿ ಕ್ರೀಡಾಕೂಟ ವ್ಯವಸ್ಥಿತ ರೀತಿಯಲ್ಲಿ ನಡೆಸಲಾಗುವುದು ಎಂದರು.ಕ್ರೀಡಾಕೂಟದ ಸಂಘಟನಾ ಕಾರ್ಯದರ್ಶಿ ಎಸ್.ಎಚ್.ನಾಗಣಿ ಮಾತನಾಡಿ, ವಾಲಿಬಾಲ್, ಖೋಖೋ, ಥ್ರೋಬಾಲ್, ಕಬಡ್ಡಿ ಅಂಕಣ ಸುಸ್ಥಿತಿಯಲ್ಲಿವೆ. ಓಟದ ಟ್ರಾಕ್ ಸೇರಿ ಇತರೆ ಸಿದ್ದತೆ ಮಾಡಿಕೊಳ್ಳಲಾಗುವುದು. ವೃತ್ತಿ ಬಾಂಧವರ ನೆರವಿನಿಂದ ಉಳಿದ ಅಗತ್ಯ ಸಿದ್ದತೆ ಕೈಗೊಳ್ಳಲಾಗುವುದು ಎಂದರು. ಜುಲೈ 25 ರೊಳಗೆ ಆಯಾ ಶಾಲಾ ಕ್ರೀಡಾಪಟುಗಳ ಸಂಘಟಕರಿಗೆ ಕಳುಹಿಸಲು ಕೋರಿದರು. ರಾಜ್ಯ ದೈಹಿಕ ಶಿಕ್ಷಣ ಸಂಘದ ಸಂಸ್ಕೃತಿ ಕಾರ್ಯದರ್ಶಿ ಶೀಲವಂತರ, ಹಿರಿಯ ದೈಹಿಕ ಶಿಕ್ಷಕ ಗಂಗಾಧರ ಹಿರೇಮಠ, ದೈಹಿಕ ಶಿಕ್ಷಣ ಶಿಕ್ಷಕರಾದ ಜಿ.ಎಂ.ಹಿರೇಮಠ, ಪಿ.ಎಸ್.ನಾಯಕ, ರಮೇಶ ವಡ್ಡರ, ಎಸ್.ಟಿ.ಬೀಳಗಿ, ಆರ್.ಕೆ.ಪವಾರ, ಎಸ್.ಎಸ್.ಲೋಕಾಪುರ, ಅಶೋಕ ಚಲವಾದಿ, ಎಲ್.ಜಿ.ಚಲವಾದಿ, ಯಲ್ಲಪ್ಪ ಬಿದ್ನಾಳ ಮೊದಲಾದವರು ಇದ್ದರು. ಶಿಕ್ಷಕರಾದ ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಕರುಣಿಕ ಸಚಿನ ಹೆಬ್ಬಾಳ ಇತರರಿದ್ದರು. ಹಿರಿಯ ಶಿಕ್ಷಕ ಎನ್.ಎಸ್.ಬಿರಾದಾರ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ಗುಲಾಬಚಂದ ಜಾಧವ ನಿರೂಪಿಸಿ ವಂದಿಸಿದರು.