ಸಾರಾಂಶ
ದೊಡ್ಡಬಳ್ಳಾಪುರ: ಕನಕದಾಸರ ಪುತ್ಥಳಿ ನಿರ್ಮಾಣ ಮುಂದಿನ ವರ್ಷದಲ್ಲಿ ಪೂರ್ಣಗೊಳ್ಳಲಿದೆ. ತಾಲೂಕಿನಲ್ಲಿ ಕನಕ ಭವನ ನಿರ್ಮಾಣಕ್ಕೆ ಅರಳು ಮಲ್ಲಿಗೆ ಸರ್ವೆಯಲ್ಲಿ ಜಾಗ ಗುರುತಿಸಲಾಗಿದ್ದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೊಂದಿಗೆ ಕ್ರಮ ನಿರ್ಮಾಣಕ್ಕೆ ಅಗತ್ಯ ಕೈಗೊಳ್ಳಲಾಗುವುದು ಎಂದು ಶಾಸಕ ಧೀರಜ್ ಮುನಿರಾಜು ಹೇಳಿದರು.
ನಗರದ ನೆಲಮಂಗಲ ರಸ್ತೆ ಕನಕದಾಸ ವೃತ್ತದಲ್ಲಿ ತಾಲೂಕು ಕುರುಬರ ಸಂಘ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಡೆದ ಸಂತ ಶ್ರೇಷ್ಠ ಕನಕದಾಸರ 538ನೇ ಜಯಂತ್ಯುತ್ಸವ, ಕನಕದಾಸರ ಪುತ್ಥಳಿಗೆ ಶಂಕುಸ್ಥಾಪನೆ ಹಾಗೂ ಕನ್ನಡ ರಾಜ್ಯೋತ್ಸವ ಉದ್ಘಾಟಿಸಿ ಮಾತನಾಡಿದರು.ಕುರುಬರ ಸಂಘಕ್ಕೆ ನಿವೇಶನ ನೀಡುವ ಮನವಿಗೆ ಸಂಬಂಧಿಸಿದಂತೆ ಸಮುದಾಯ ಭವನಕ್ಕೆ ನಿವೇಶನ ನೀಡಲು ತೊಂದರೆಯಿಲ್ಲ ಆದರೆ ಸಮುದಾಯದ ಸಂಘಗಳಿಗೆ ಯಾವುದೇ ನಿವೇಶನ ನೀಡಬೇಕಿದ್ದರೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆ ಬೇಕು. ಶ್ರೀನಿವಾಸಪ್ರಸಾದ್ ಕಂದಾಯ ಮಂತ್ರಿಗಳಾಗಿದ್ದಾಗ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ತಿರಸ್ಕಾರವಾಗಿತ್ತು. ಸಮುದಾಯಕ್ಕೆ ನಿವೇಶನ ನೀಡಲು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.
ಕನಕ ಭವನವನ್ನು ಮಧುರೆ ಹೋಬಳಿಯಲ್ಲಿಯೂ ನಿರ್ಮಿಸಲಾಗುವುದು. ನಗರದ ಕನಕದಾಸ ವೃತ್ತದಲ್ಲಿ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು ಈ ಭಾಗದ ಸದಸ್ಯರು ತಮ್ಮ ಅನುದಾನದಲ್ಲಿ ಲಕ್ಷ ರುಪಾಯಿ ನೀಡುವ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತ ಹಾಗೂ ಹಿಂದುಳಿದ ವರ್ಗಗಳ ದನಿಯಾಗಿ ಕೆಲಸ ಮಾಡುತ್ತಿದ್ದು ದೇವರಾಜ ಅರಸು ನಂತರ ಅತಿ ಹೆಚ್ಚಿನ ಕಾಲ ಆಡಳಿತ ಮಾಡಿದ ಮುಖ್ಯಮಂತ್ರಿಯಾಗಿದ್ದಾರೆಂದು ಹೇಳಿದರು.ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಅಭಿವೃದ್ಧಿ ಕಾರ್ಯಗಳಾಗುತ್ತಿದೆ. ಇಂದು ನಿರ್ಮಾಣವಾಗುತ್ತಿರುವ ಪುತ್ಥಳಿ ಸೇರಿದಂತೆ ಹಿಂದನ ಅಭಿವೃದ್ಧಿ ಯೋಜನೆಗಳಿಗೆ ನಮ್ಮ ಸಹಕಾರವಿದ್ದು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ ಎಂದರು.
ನಗರಸಭೆ ಉಪಾಧ್ಯಕ್ಷ ಎಂ. ಮಲ್ಲೇಶ್ ಮಾತನಾಡಿ, 15ನೇ ಶತಮಾನದಲ್ಲಿ ಉದಯಿಸಿದ ತಿಮ್ಮಪ್ಪ ನಾಯಕ ತನ್ನ ಪಾಳೇಗಾರಿಕೆ, ವೈಭವ, ಶ್ರೀಮಂತಿಕೆ ತೊರೆದು ಕನಕದಾಸರಾಗಿದ್ದು ಇತಿಹಾಸ. ಕನಕದಾಸರು ದಾಸ ಸಾಹಿತ್ಯದ ಪ್ರಮುಖರಾಗಿದ್ದು, ಮೇಲು-ಕೀಳು ಭಾವನೆ ತೊಡೆದುಹಾಕಲು ಶ್ರಮಿಸಿದರು. ''''''''ಇಂತಹ ಮಹನೀಯರ ವಿಚಾರಗಳು ಇಂದಿನ ಪೀಳಿಗೆಗೆ ಮುಟ್ಟಬೇಕಿದ್ದು, ಸಮುದಾಯ ಸಮಾಜದ ವಿವಿಧ ಹಂತಗಳಲ್ಲಿ ಸಂಘಟಿತರಾಗಿ ಶಿಕ್ಷಣ ಸೇರಿ ಎಲ್ಲಾ ಕ್ಷೇತ್ರದಲ್ಲಿಯೂ ಮುನ್ನಡೆಯಬೇಕಿದೆ ಎಂದರು.ಈ ವೇಳೆ, ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು. ನಗರಸಭಾ ಸದಸ್ಯ ಚಂದ್ರಮೋಹನ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಜೆ.ವೈ.ಮಲ್ಲಪ್ಪ ಟಿ.ಜಿ.ಮಂಜುನಾಥ್, ಧ್ರುವ ಕುಮಾರ್, ಸಮುದಾಯದ ರವಿ, ಡಿ.ಎಂ. ನಾಗರಾಜು, ಆರುಣ್ ಕುಮಾರ್, ಕೃಷ್ಣಮೂರ್ತಿ, ಎಂ.ಸಿ.ಮಂಜುನಾಥ್, ಚಂದ್ರಶೇಖರ್ ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ವಿಶ್ವಾಸ್‌ಗೌಡ ಇದ್ದರು.
ಈ ಮುನ್ನ ಕನಕದಾಸರ ಭಾವಚಿತ್ರದ ಮೆರವಣಿಗೆ ವಿವಿಧ ಕಲಾತಂಡಗಳೊಡನೆ ತಾಲೂಕು ಕಚೇರಿ ಬಳಿಯಿಂದ ವೇದಿಕೆವರೆಗೆ ಸಂಚರಿಸಿತು.ಫೋಟೋ-
9ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ನಡೆದ ಕನಕದಾಸ ಜಯಂತ್ಸುತ್ಸವ ಕಾರ್ಯಕ್ರಮದಲ್ಲಿ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ಶಾಸಕ ಧೀರಜ್ ಮುನಿರಾಜ್ ಶಿಲಾನ್ಯಾಸ ನೆರವೇರಿಸಿದರು.--
9ಕೆಡಿಬಿಪಿ2- ಸಂತಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಹಿನ್ನಲೆ ದೊಡ್ಡಬಳ್ಳಾಪುರದಲ್ಲಿ ಸಾಂಸ್ಕೃತಿಕ ತಂಡಗಳೊಂದಿಗೆ ಸಂಭ್ರಮದ ಮೆರವಣಿಗೆ ನಡೆಯಿತು.;Resize=(128,128))
;Resize=(128,128))
;Resize=(128,128))
;Resize=(128,128))