ಸಾರಾಂಶ
ಬೀರೂರು, ಶೈಕ್ಷಣಿಕ ವಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಒಟ್ಟು 37 ಪ್ರೌಢಶಾಲೆಗಳಿಂದ 682 ಬಾಲಕರು, 641 ಬಾಲಕಿಯರು ಸೇರಿ ಒಟ್ಟು 1323 ವಿದ್ಯಾರ್ಥಿಗಳನ್ನು ನೋಂದಾಯಿಸಲಾಗಿದೆ. ಉತ್ತಮ ಫಲಿತಾಂಶಕ್ಕಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಬಿಇಒ ಟಿ.ಆರ್.ರುದ್ರಪ್ಪ ಹೇಳಿದರು.
ಕಳೆದ ಸಾಲಿನಲ್ಲಿ ಶೇ. 80.07 ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲಿ 7ನೇ ಸ್ಥಾನ ಗಳಿಸಿತ್ತು.
ಕನ್ನಡಪ್ರಭ ವಾರ್ತೆ, ಬೀರೂರುಬೀರೂರು ಶೈಕ್ಷಣಿಕ ವಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ಒಟ್ಟು 37 ಪ್ರೌಢಶಾಲೆಗಳಿಂದ 682 ಬಾಲಕರು, 641 ಬಾಲಕಿಯರು ಸೇರಿ ಒಟ್ಟು 1323 ವಿದ್ಯಾರ್ಥಿಗಳನ್ನು ನೋಂದಾಯಿಸಲಾಗಿದೆ. ಉತ್ತಮ ಫಲಿತಾಂಶಕ್ಕಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಬಿಇಒ ಟಿ.ಆರ್.ರುದ್ರಪ್ಪ ಹೇಳಿದರು.
ಪತ್ರಿಕೆಯೊಂದಿಗೆ ಮಾತನಾಡಿ, ಶೈಕ್ಷಣಿಕ ವಲಯದಲ್ಲಿ 16 ಸರ್ಕಾರಿ ಪ್ರೌಢಶಾಲೆಗಳು, 14 ಅನುದಾನಿತ ಶಾಲೆಗಳು, 4 ವಸತಿ ಶಾಲೆಗಳು ಹಾಗೂ 3 ಖಾಸಗಿ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಕಳೆದ ಸಾಲಿನಲ್ಲಿ ಶೇ. 80.07 ರಷ್ಟು ಫಲಿತಾಂಶ ಪಡೆದು ಜಿಲ್ಲೆಯಲ್ಲಿ 7ನೇ ಸ್ಥಾನ ಪಡೆದಿತ್ತು. ಫಲಿತಾಂಶ ಉತ್ತಮ ಪಡಿಸಲು ನಿಯಮಿತವಾಗಿ ಪ್ರತಿ ತಿಂಗಳು ಮುಖ್ಯ ಶಿಕ್ಷಕರ ಸಭೆ ನಡೆಸಿ, ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ ಎಂದರು.ವಲಯದ ಎಲ್ಲಾ ಫ್ರೌಢಶಾಲೆಗಳಿಗೆ ನಿಯಮಿತ ಭೇಟಿ, ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳು ಭಯ ಮುಕ್ತವಾಗಿ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಜೇಸಿ ಸಂಸ್ಥೆ ಸಹಯೋಗದಲ್ಲಿ ಒಂದು ದಿನದ ಪರೀಕ್ಷೆ ಹಬ್ಬ ಕಾರ್ಯಾಗಾರ ನಡೆಸ ಲಾಗಿದೆ. ಎಲ್ಲಾ ಶಾಲೆಗಳಲ್ಲಿ ಪ್ರತಿ ದಿನ ಬೆಳಗ್ಗೆ ಮತ್ತು ಸಂಜೆ ವಿಶೇಷ ತರಗತಿ ನಡೆಸಲಾಗುತ್ತಿದೆ.ಶಾಲೆಗಳು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಸಂಜೆ 7 ಗಂಟೆ ವರೆಗೆ ತರಗತಿ ನಡೆಸುತ್ತಿದ್ದಾರೆ ಎಂದರು. ಭೇಟಿ ನೀಡಿದ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ ಗಳೊಂದಿಗೆ ಸಂವಾದ ಮಾಡಿ ಉತ್ತಮ ಫಲಿತಾಂಶಕ್ಕೆ ಪ್ರೇರಣೆ ನೀಡಲಾಗಿದೆ. ಬ್ಲಾಕ್ ನಲ್ಲಿ ಒಟ್ಟು 6 ಪರೀಕ್ಷಾ ಕೇಂದ್ರಗಳಿದ್ದರೂ ಪಟ್ಟಣದ ಕೆಎಲ್.ಕೆ ಪ್ರೌಢಶಾಲೆಯಲ್ಲಿ 342, ಲಿಂಗದಹಳ್ಳಿ ಯಲ್ಲಿ167, ಬಳ್ಳಾವರ 145 , ಸಖರಾಯಪಟ್ಟಣ 291, ಜೋಡಿಹೋಚಿಹಳ್ಳಿ 202 , ದೇವನೂರು 222 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದಾರೆ. 6 ಪರೀಕ್ಷಾ ಕೇಂದ್ರಗಳಲ್ಲಿ ಈ ಸಿಸಿ ಕ್ಯಾಮೆರಾ ಹಾಕಿದ್ದು, ಸುಸ್ಥಿತಿಯಲ್ಲಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳಲಾಗಿದೆ. ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಪ್ರಾರಂಭಿಸ ಲಾಗಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ಮೊ:9449350987 ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಮೊ:9449620193, ಬ್ಲಾಕ್ ನೋಡಲ್ ಅಧಿಕಾರಿಗಳಿಗೆ ಮೊ:8660526190 ಯಾವುದೇ ಸಮಸ್ಯೆಗಳಿದ್ದಲ್ಲಿ ಪೋಷಕರು ನೇರವಾಗಿ ದೂರವಾಣಿ ಕರೆ ಮಾಡಿ ಪರಿಹಾರ ಪಡೆಯಬಹುದು. ಎಸ್.ಎಸ್.ಎಲ್.ಸಿ ಪರೀಕ್ಷೆ ಮಾ.21 ರಂದು ಪ್ರಥಮ ಭಾಷೆ, 24 ರಂದು ಗಣಿತ, 26ರಂದು ದ್ವಿತೀಯ ಭಾಷೆ (ಇಂಗ್ಲಿಷ್ / ಕನ್ನಡ), ಮಾ.29 ರಂದು ಸಮಾಜ ವಿಜ್ಞಾನ, ಏ.2 ರಂದು ವಿಜ್ಞಾನ ಮತ್ತು ಏ.4 ರಂದು ತೃತೀಯ ಭಾಷೆ ಪರೀಕ್ಷೆಗಳು ನಡೆಯುತ್ತವೆ. ಜಿಲ್ಲಾಧಿಕಾರಿ ಹಾಗೂ ಜಿಪಂ ಕಾರ್ಯನಿರ್ವಹಣಾಧಿಕಾರಿ ಪ್ರಗತಿ ಪರಿಶೀಲನೆ ಕೈಗೊಂಡು. ಜಿಪಂ ಸಿಇಒ ಪರೀಕ್ಷಾ ಸ್ಫೂರ್ತಿ ಪರೀಕ್ಷಾ ಕೈಪಿಡಿಯನ್ನು ಜಿಲ್ಲೆಯಲ್ಲಿ ಸಿ ಮತ್ತು ಎನ್.ಸಿ ಕಲಿಕಾ ಗ್ರೇಡ್ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದ್ದಾರೆ.ಉಳಿದಂತೆ ಕಚೇರಿಯಿಂದ ಶೈಕ್ಷಣಿಕ ವಲಯದ ಎಲ್ಲಾ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ಮಾರ್ಗದರ್ಶನ, ಎಲ್ಲಾ ಸಹ ಶಿಕ್ಷಕರಿಗೆ ಗುಣಾತ್ಮಕ ಫಲಿತಾಂಶ ಪಡೆಯಲು ಅಗತ್ಯ ಮಾರ್ಗದರ್ಶನಕ್ಕೆ ಸೂಚನೆ ನೀಡಲಾಗಿದೆ ಎಂದರು.
11 ಬೀರೂರು 1ಟಿ.ಆರ್.ರುದ್ರಪ್ಪ, ಬಿ.ಇ.ಒ ಬೀರೂರು ವಲಯ