ಜಂಗಲ್ ಲಾಡ್ಜ್ ರೆಸಾರ್ಟ್‌‌ಗಳಲ್ಲಿ ಅಗತ್ಯ ಕಾಮಗಾರಿ: ಅನಿಲ್ ಚಿಕ್ಕಮಾದು

| Published : Dec 01 2024, 01:33 AM IST

ಜಂಗಲ್ ಲಾಡ್ಜ್ ರೆಸಾರ್ಟ್‌‌ಗಳಲ್ಲಿ ಅಗತ್ಯ ಕಾಮಗಾರಿ: ಅನಿಲ್ ಚಿಕ್ಕಮಾದು
Share this Article
  • FB
  • TW
  • Linkdin
  • Email

ಸಾರಾಂಶ

ಗೋಕರ್ಣ, ಮಂಗಳೂರು, ಗದಗ, ನಾಗರಹೊಳೆಯಲ್ಲಿ ಹೊಸದಾಗಿ ಜಾಗ ಖರೀದಿಸಲು ತೀರ್ಮಾನಿಸಲಾಗಿದ್ದು, ಉಳಿದ ಎಲ್ಲಾ ನಿಗಮಗಳಿಗಿಂತ ನಮ್ಮ ನಿಗಮ ಅತ್ಯಂತ ಲಾಭದಾಯಕವಾಗಿ ನಡೆಯುತ್ತಿದೆ. ಉಳಿದ ಎಲ್ಲಾ ರೆಸಾರ್ಟ್ ಗಳಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯುವಂತಹ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು.

ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ

ರಾಜ್ಯದಲ್ಲಿನ ಎಲ್ಲಾ ಜಂಗಲ್ ಲಾಡ್ಜ್ ನ ರೆಸಾರ್ಟ್‌‌ ಗಳಲ್ಲಿ ಅಗತ್ಯವಿರುವ ಎಲ್ಲಾ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೆತ್ತಿಗೊಳ್ಳಲಾಗುವುದು ಎಂದು ಜಂಗಲ್ ಲಾಡ್ಜ್ ಅಧ್ಯಕ್ಷರಾದ ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ತಾಲೂಕಿನ ಕಾರಾಪುರ ಗ್ರಾಮದ ಕಬಿನಿ ರಿವರ್ ಲಾಡ್ಜ್‌ ನಲ್ಲಿ 1.50 ಕೋಟಿ ರು. ವೆಚ್ಚದಲ್ಲಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳ ಭೂಮಿ ಪೂಜೆಯನ್ನು‌ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜಂಗಲ್ ರೆಸಾರ್ಟ್ ಗೆ ಸಂಬಂಧಿಸಿದ 26 ಸಂಸ್ಥೆಗಳಿದ್ದು, ಎಲ್ಲಾ ಸಂಸ್ಥೆಗಳು ಸಹ ಲಾಭದಾಯಕವಾಗಿ ನಡೆಯುತ್ತಿವೆ ಎಂದರು.

ಹೀಗಾಗಿ, 9 ಕೋಟಿ ಮುಖ್ಯಮಂತ್ರಿ ಆರೋಗ್ಯ ಪರಿಹಾರ ನಿಧಿಗೆ ಸಂಸ್ಥೆಯಿಂದ ನೀಡಲು ತೀರ್ಮಾನಿಸಲಾಗಿದ್ದು, ಚೆಕ್ ಹಸ್ತಾಂತರ ಮಾಡುವ ವೇಳೆ ಸಂಸ್ಥೆಯಲ್ಲಿ 600 ಮಂದಿ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರಿಗೆ ಕಾಯಂ ಮಾಡಲು ಒತ್ತಾಯ ಮಾಡಲಾಗುವುದು ಎಂದು ಅವರು ಹೇಳಿದರು.

ಗೋಕರ್ಣ, ಮಂಗಳೂರು, ಗದಗ, ನಾಗರಹೊಳೆಯಲ್ಲಿ ಹೊಸದಾಗಿ ಜಾಗ ಖರೀದಿಸಲು ತೀರ್ಮಾನಿಸಲಾಗಿದ್ದು, ಉಳಿದ ಎಲ್ಲಾ ನಿಗಮಗಳಿಗಿಂತ ನಮ್ಮ ನಿಗಮ ಅತ್ಯಂತ ಲಾಭದಾಯಕವಾಗಿ ನಡೆಯುತ್ತಿದೆ. ಉಳಿದ ಎಲ್ಲಾ ರೆಸಾರ್ಟ್ ಗಳಿಗಿಂತ ಹೆಚ್ಚಿನ ಸೌಲಭ್ಯಗಳು ದೊರೆಯುವಂತಹ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಅವರು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಾತನಾಡಿ, ಎಚ್.ಡಿ. ಕೋಟೆ ತಾಲ್ಲೂಕಿನ ಜಂಗಲ್ ಲಾಡ್ಜ್ ನಲ್ಲಿ ಕಳೆದ 30 ವರ್ಷಗಳಿಂದ ಸರಿಯಾದ ರಸ್ತೆಗಳು ಇರಲಿಲ್ಲ, ಅಲ್ಲದೇ ಯಾವುದೇ ಹೊಸ ಕಾಮಗಾರಿಗಳು ನಡೆದಿರಲಿಲ್ಲ. ಈಗ 4 ಲಕ್ಷ ವೆಚ್ಚದ ರಸ್ತೆ, 70 ಲಕ್ಷ ವೆಚ್ಚದಲ್ಲಿ ಈಜುಕೊಳ, ಸ್ಥಳೀಯ ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ವಿವಿಧ ಆಟಿಕೆಗಳ ಸ್ಥಾಪನೆಗೆ ಮುಂದಾಗಿದ್ದೇವೆ ಎಂದರು.

ನಮ್ಮ ಜಂಗಲ್ ಲಾಡ್ಜ್ ನಲ್ಲಿ ಸಿರಿ ಧಾನ್ಯಗಳ ಆಹಾರ ತಯಾರು ಮಾಡಲು ಅನುವು ದೊರೆತಿದ್ದು, ಕಳೆದ ಹಲವು ದಿನಗಳಿಂದ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ. ಕಬಿನಿ, ಬಂಡೀಪುರ, ದಾಂಢೇಲಿಯಲ್ಲಿ ಅರಣ್ಯದ ಬಗ್ಗೆ ತರಬೇತಿ ಕೇಂದ್ರವನ್ನು ತೆರೆಯಲು ಸದನದಲ್ಲಿ ಒಪ್ಪಿಗೆ ದೊರತಿದ್ದು, ಶೀಘ್ರವಾಗಿ ಕಾಮಗಾರಿಯನ್ನು ಆರಂಭಸಲಾಗುವುದು ಎಂದರು.

ಪ್ರಧಾನ ವ್ಯವಸ್ಥಾಪಕ ಯುವರಾಜ್, ಸಹಾಯಕ ವ್ಯವಸ್ಥಾಪಕ ಕಾರ್ತಿಕ್, ಕಾರ್ಯಕಾರಿ ನಿರ್ದೇಶಕಿ ಅನುಷಾ, ಇಬ್ರಾಹಿಂ, ಬಸವರಾಜಪ್ಪ, ಶಂಭುಲಿಂಗನಾಯಕ, ವೀರೇಗೌಡ, ಸತೀಶ್ ಗೌಡ, ಬಾಲಯ್ಯ, ಬಸವರಾಜು, ಪರಶಿವಮೂರ್ತಿ, ರಾಜು ವಿಶ್ವಕರ್ಮ, ಮುಜಾಹಿದ್, ಸುಬ್ರಹ್ಮಣ್ಯ, ನಾಗನಹಳ್ಳಿ ಪ್ರದೀಪ್, ವನಸಿರಿ ಶಂಕರ್, ಅಶೋಕ್, ಹೇಮಂತ್, ಮಲ್ಲೇಶ್, ಸಿದ್ದರಾಮು, ಪುಟ್ಟೇಗೌಡ, ಕನ್ನಡ ಪ್ರಮೋದ್, ಗಿರೀಗೌಡ, ಸ್ಟ್ಯಾನಿ ಬ್ರಿಟೋ, ದೇವರಾಜು, ಶೈಲೇಂದ್ರ, ಮುಳ್ಳೂರು ಮಂಜು, ಗುತ್ತಿಗೆದಾರರಾದ ಸ್ವರೂಪ್, ನಿಸರ್ಗ ತಜ್ಞ ಭೀಮಣ್ಣ, ಚೆಲುವರಾಜು, ಕಾರ್ತಿಕ್, ಲೋಕೇಶ್, ಕೃಷ್ಣಪ್ರಸಾದ್, ಶಿವರಾಜು, ಶಾಂತಕುಮಾರ್, ನಂಜುಂಡಯ್ಯ, ಬಸವರಾಜು, ಕೃಷ್ಣೇಗೌಡ, ಚಂದ್ರೇಗೌಡ, ಸುರೇಶ್ ಇದ್ದರು.