ಗ್ರಾಹಕರು ಹೆಚ್ಚಾಗಿ ಜಾಹೀರಾತುಗಳನ್ನು ಅವಲಂಬಿಸಿ ವಸ್ತುಗಳನ್ನು ಖರೀದಿಸಬೇಡಿ, ವಸ್ತುಗಳ ಗುಟ್ಟಮಟ್ಟವನ್ನು ಪರಿಶೀಲಿಸಿ. ಆದರೆ, ಜಾಹೀರಾತುಗಳ ಬಗ್ಗೆ ಹೆಚ್ಚು ಎಚ್ಚರದಿಂದ ಇರಬೇಕು. ಇಲ್ಲವಾದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ವೆಂಕಟೇಶಬಾಬು ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ರಾಹಕರು ಹೆಚ್ಚಾಗಿ ಜಾಹೀರಾತುಗಳನ್ನು ಅವಲಂಬಿಸಿ ವಸ್ತುಗಳನ್ನು ಖರೀದಿಸಬೇಡಿ, ವಸ್ತುಗಳ ಗುಟ್ಟಮಟ್ಟವನ್ನು ಪರಿಶೀಲಿಸಿ. ಆದರೆ, ಜಾಹೀರಾತುಗಳ ಬಗ್ಗೆ ಹೆಚ್ಚು ಎಚ್ಚರದಿಂದ ಇರಬೇಕು. ಇಲ್ಲವಾದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕ ವೆಂಕಟೇಶಬಾಬು ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನಡೆದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ-2025, ಡಿಜಿಟಲ್ ನ್ಯಾಯದ ಮೂಲಕ ಪರಿಣಾಮಕಾರಿ ಮತ್ತು ತ್ವರಿತ ವಿಲೇವಾರಿ ಕುರಿತು ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಉತ್ಪಾದಕರು, ಗ್ರಾಹಕರ ಅಭಿರುಚಿಗೆ ತಕ್ಕಂತೆ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿಲ್ಲ. ಕೇವಲ ಲಾಭಗಳಿಸುವ ಉದ್ದೇಶದಿಂದ ವಸ್ತುಗಳನ್ನು ಉತ್ಪಾದಿಸಿ ಮಾರಾಟ ಮಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ, ನಾವು ಬಹಳ ವರ್ಷಗಳಿಂದ ಉಪಯೋಗಿಸಿ ಕೊಂಡು ಬಂದಂತಹ ಬಿಸ್ಕೆಟ್, ಚಾಕ್‌ಲೇಟ್‌, ಸೋಪುಗಳು, ನೀರಿನ ಶುದ್ದೀಕರಣ ಯಂತ್ರಗಳ ಉತ್ಪಾದಕ ಕಂಪನಿಗಳು ಗ್ರಾಹಕರನ್ನು ಮೋಸಮಾಡುತ್ತಿವೆ. ಗ್ರಾಹಕರು ಎಚ್ಚರದಿಂದ ಅವುಗಳ ತೂಕ ಮತ್ತು ಬೆಲೆಗಳ ವ್ಯತ್ಯಾಸಗಳನ್ನು ಪರಿಶೀಲಿಸಿಕೊಂಡು ವಸ್ತುಗಳನ್ನು ಖರೀದಿಸುವಂತೆ ತಿಳಿಸಿದರು.

ಗ್ರಾಹಕರು ಪ್ರಶ್ನೆ ಮಾಡುವಂತವರಾದಾಗ ಮಾತ್ರ ಉತ್ಪಾದಕರು ಎಚ್ಚರಗೊಳ್ಳುತ್ತಾನೆ. ಪ್ರತಿ ಪ್ರಜೆಯು ಗ್ರಾಹಕನೇ, ಕಷ್ಟ ಪಟ್ಟು ದುಡಿದ ಹಣದಿಂದ ವಸ್ತುಗಳನ್ನು ಖರೀದಿಸುವಾಗ ಜಾಗೃತಿವಹಿಸಿ, ಗ್ರಾಹಕರು ತಮಗಾದ ಅನ್ಯಾಯ ಸರಿಪಡಿಸಿಕೊಳ್ಳಲು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ರಚಿಸಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸಿ.ಎಸ್.ತ್ಯಾಗರಾಜನ್ ಮಾತನಾಡಿ, ದೇಶದಲ್ಲಿ ವಿಶ್ವ ಗ್ರಾಹಕರ ದಿನಾಚರಣೆಯನ್ನು ಮಾಚ್ 15 ರಂದು ಮತ್ತು ರಾಷ್ಟ್ರೀಯ ಗ್ರಾಹಕರ ದಿನಾಚರಣೆಯನ್ನು ಡಿಸೆಂಬರ್ 24 ರಂದು ಆಚರಿಸಿಕೊಂಡು ಬರಲಾಗುತ್ತಿದ್ದು ಇದರ ಉದ್ದೇಶ ಗ್ರಾಹಕರಲ್ಲಿ ತಾವು ಕೊಳ್ಳುವ ವಸ್ತುಗಳ ಬಗ್ಗೆ ಅರಿವು ಬಹಳ ಮುಖ್ಯವಾಗುತ್ತದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಮಂಜುನಾಥ ಮಾತನಾಡಿ, ಗ್ರಾಹಕರು ವಸ್ತುಗಳನ್ನು ಖರೀದಿ ಮಾಡುವಾಗ ಯಾವ ರೀತಿ ಎಚ್ಚರ ವಹಿಸಬೇಕು ಮತ್ತು ಕಾನೂನು ಮುಖಾಂತರ ಯಾವ ರೀತಿ ಸರಿಪಡಿಸಿಕೊಳ್ಳಬೇಕೆಂಬುದನ್ನು ತಿಳಿಸುವ ಉದ್ದೇಶದಿಂದ ಗ್ರಾಹಕರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ಇತ್ತೀಜಿಗೆ ಆನ್ ಲೈನ್ ಮೂಲಕ ವಸ್ತುಗಳ ಖರೀದಿ ಹೆಚ್ಚಾಗಿದೆ ಎಂದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಕೆ.ಪಿ.ಮಧುಸೂಧನ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯೆ ಬಿ.ಯು.ಗೀತಾ, ಪ್ರಾಂಶುಪಾಲರಾದ ಬಸವರಾಜ ಸಿ.ತಹಸೀಲ್ದಾರ್, ಪ್ರಾಧ್ಯಾಪಕಿ ಯಶೋಧಮ್ಮ, ಕಾಲೇಜಿನ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಜರಿದ್ದರು.